ಬೆಂಗಳೂರು;ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ಇನ್ನೂ 6 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಅ. 15 ರಂದು ಎಲ್ಲಾ ಖಾತೆಗಳಿಗೆ ಹಣ ಸಂದಾಯವಾಗಲಿದೆ ಎಂದಿದೆ ಅಂದು ಮೊದಲ ಕಂತಿನ ಹಣ ಪಡೆದವರಿಗೆ ಮಾತ್ರವಲ್ಲದೆ, ಮೊದಲ ಕಂತು ಜಮಾ ಆಗದಿದ್ದವರಿಗೂ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಮೊದಲ ಕಂತಿನ ಹಣ ಇನ್ನೂ ಸಿಗದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಅಂದೇ ಎರಡೂ ತಿಂಗಳ ಹಣ ಅಂದರೆ 4,000 ನಿಮ್ಮ ಕೈಸೇರಲಿದೆ ಎಂದು ವರದಿಯಾಗಿದೆ.ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆ, ಆಧಾರ್ ಕಾರ್ಡ್ ಸೀಡಿಂಗ್ ಆಗದೆ ಇರುವುದು ಅದೇ ರೀತಿಯಲ್ಲಿ ಸರ್ಕಾರದ ಸರ್ವರ್ ಡೌನ್ ಇರುವುದು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗಿರುವುದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಚಿಂತೆ ಮಾಡುವ ಅಗತ್ಯ ಇಲ್ಲ ಇವರ ಬಗ್ಗೆ ಲಕ್ಷ್ಮಿ ಹೆಬ್ಬಲ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೂ ಎರಡು ಸಾವಿರ ರೂಪಾಯಿ ಹಣ ಬರುತ್ತದೆ ಆದರೆ ಸ್ವಲ್ಪ ವಿಳಂಬವಾಗಬಹುದು ಎಂದು ಸಚಿವರು ಭರವಸೆ ನೀಡಿದ್ದಾರೆ.ಇಲ್ಲಿಯವರೆಗೆ ಮೊದಲ ಕಂತಿನ ಹಣ ಯಾರಿಗೆ ಸಿಗಲಿಲ್ಲವೋ ಅವರಿಗೆ ಕಳೆದ ತಿಂಗಳ 2000 ರೂಪಾಯಿ ಮತ್ತು ಈ ತಿಂಗಳ 2000 ರೂಪಾಯಿ ಒಟ್ಟು 4000 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಬರಲಿದೆ.