18.9 C
Bengaluru
Wednesday, December 18, 2024

ರೈತರಿಗೆ ಭರ್ಜರಿ ಗುಡ್ ನ್ಯೂಸ್,ಹಿಂಗಾರು ರಸಗೊಬ್ಬರಗಳ ಮೇಲೆ ₹22,303 ಕೋಟಿ ಸಬ್ಸಿಡಿಗೆ ಒಪ್ಪಿಗೆ: ಅನುರಾಗ್ ಸಿಂಗ್ ಠಾಕೂರ್

ನವದೆಹಲಿ;ಕೇಂದ್ರ ಸರ್ಕಾರವು ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, 2023-24ನೇ ಸಾಲಿನ ಹಿಂಗಾರು ಹಂಗಾಮು ಅವಧಿಗೆ ಫಾಸ್ಪೇಟ್ & ಪೊಟ್ಯಾಸಿಯಮ್ ಅಂಶವಿರುವ ರಸಗೊಬ್ಬರಗಳಿಗೆ ಸಬ್ಸಿಡಿಗಾಗಿ 22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಪ್ರತಿ KG ಸಾರಜನಕಕ್ಕೆ 747.02, ರಂಜಕಕ್ಕೆ 120.82 & ಪೊಟ್ಯಾಸಿಯಮ್‌ಗೆ 12.38 ದರದಲ್ಲಿ ಸಹಾಯಧನ ಕೊಡಲಿದೆ. ಇದು ದೇಶದ 12 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ಸಿಗಲಿದೆ ಎಂದ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.ರೈತರು ರಬಿ ಬೆಳೆಗಳಿಗೆ ಬೇಕಾಗುವ ಮತ್ತು ಮಣ್ಣಿನ ಪೋಷಕಾಂಶ ಹೆಚ್ಚಿಸುವ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಬುಧವಾರ ನಡೆಸ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.ಈ ಬಗ್ಗೆ ಮಾಹಿತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು,ಪಾಸ್ಪೇಟ್‌ ರಸಗೊಬ್ಬರಗಳಿಗೆ ಅ.1ರಿಂದ ಮಾ.31ರ ವರೆಗೆ ಇರುವ ಹಿಂಗಾರು ಬೆಳೆ ಅವಧಿ (ರಬಿ)ಗಾಗಿ 22,303 ಕೋಟಿ ರೂ. ಸಹಯಾಧನ ನೀಡಲು ತೀರ್ಮಾನಿಸಿದೆ. ಇದಲ್ಲದೆ ಎನ್‌ಪಿಕೆಗೆ ಹಳೆಯ ದರ 1,470 ರೂ., ಸಿಂಗಲ್‌ ಸೂಪರ್‌ ಪಾಸೆ#àಟ್‌ ರಸಗೊಬ್ಬರ ಚೀಲಕ್ಕೆ 500 ರೂ., ಪೊಟ್ಯಾಷ್‌ ರಸಗೊಬ್ಬರ ಚೀಲಕ್ಕೆ 1,700 ರೂ.ಗಳ ಬದಲು 1,655 ರೂ.ಗಳಿಗೆ ಸಿಗಲಿದೆ ಎಂದು ಕೇಂದ್ರ ಸಚಿವ ಠಾಕೂರ್‌ ಹೇಳಿದ್ದಾರೆ. ಮೇಯಲ್ಲಿ ನಡೆದಿದ್ದ ಮುಂಗಾರು ಅವಧಿಯ ಬೆಳೆಗಳಿಗಾಗಿ 38 ಸಾವಿರ ಕೋಟಿ ರೂ. ಮೌಲ್ಯದ ರಸಗೊಬ್ಬರ ಸಹಾಯಧನ ನೀಡಲಾಗಿತ್ತು.

Related News

spot_img

Revenue Alerts

spot_img

News

spot_img