17.9 C
Bengaluru
Thursday, January 23, 2025

ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹಣ ಹೂಡಿ ಲಕ್ಷಗಟ್ಟಲೆ ರಿಟರ್ನ್ಸ್‌ ಪಡೆಯಿರಿ..

ಬೆಂಗಳೂರು, ಆ. 29 : ಪೋಸ್ಟ್ ಆಫಿಸ್ ನಲ್ಲಿರುವ ಈ ಯೋಜನೆ ಸರ್ಕಾರದ ಮುಕ್ತ ವ್ಯವಹಾರವಾಗಿದೆ. ಇದು ಉತ್ತಮ ಆದಾಯವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ಪ್ರತಿದಿನ 48 ರೂಪಾಯಿಯಂತೆ 31 ದಿನಗಳಿಗೆ 1500 ರೂಪಾಯಿ ಆಗುತ್ತದೆ. ಇದನ್ನು ಠೇವಣಿ ಮಾಡಿದರೆ, ನೀವು ರೂ 35 ಲಕ್ಷದವರೆಗೆ ರಿಟರ್ನ್ಸ್ ಪಡೆಯಬಹುದು. ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ.

ಹಳ್ಳಿಯಲ್ಲಿ ವಾಸವಾಗಿರುವ ರೈತರಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಅದರ ಹೆಸರು ಪೋಸ್ಟ್ ಆಫೀಸ್ ಗ್ರಾಮ್ ಸುರಕ್ಷಾ ಯೋಜನೆ. ಈ ಯೋಜನೆಯು ಸಾಕಷ್ಟು ಜನಪ್ರಿಯತೆ ಹೊಂದಿದೆ. ಗ್ರಾಮೀಣ ಜನರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ಉದ್ದೇಶ ಈ ಯೋಜನೆ ಹೊಂದಿದೆ. ಈ ಯೋಜನೆ ಮೂಲಕ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ನಿಮಗೆ 31 ಲಕ್ಷದಿಂದ 35 ಲಕ್ಷ ರೂಪಾಯಿಗಳ ರಿಟರ್ನ್ ಸಿಗುತ್ತದೆ.

ಹೂಡಿಕೆದಾರರು ಒಂದು ವೇಳೆ ತನ್ನ 80 ವರ್ಷ ವಯಸ್ಸಿನಲ್ಲಿ ಮರಣಹೊಂದಿದರೆ, ಅವರ ನಾಮಿನಿಗೆ ಬೋನಸ್ ಸೇರಿದಂತೆ ಹೂಡಿಕೆಯ ಸಂಪೂರ್ಣ ಮೊತ್ತ ಸಿಗುತ್ತದೆ. ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳನ್ನೂ ನೀಡಲಾಗಿದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಕಂತನ್ನು ಪಾವತಿಸಬಹುದು. 19 ವರ್ಷದಿಂದ 55 ವರ್ಷಗಳವರೆಗೆ ಭಾರತದ ಯಾವುದೇ ನಾಗರಿಕರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಪರಿಚಯಸಲಾಗಿದ್ದು, ನಾಗರಿಕರು ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಆ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ ರೂ 1515, 58 ವರ್ಷಗಳಿಗೆ ರೂ 1463 ಮತ್ತು 60 ವರ್ಷಗಳಿಗೆ ರೂ 1411 ಆಗಿರುತ್ತದೆ. ನೀವು 55 ವರ್ಷಗಳಲ್ಲಿ ರೂ 31.60 ಲಕ್ಷ, 58 ವರ್ಷಗಳಿಗೆ ರೂ 33.40 ಲಕ್ಷ ಮತ್ತು 60 ವರ್ಷಗಳಿಗೆ ರೂ 34.60 ಲಕ್ಷದ ಮೆಚುರಿಟಿ ಲಾಭವನ್ನು ಪಡೆಯುತ್ತೀರಿ.

ಹೂಡಿಕೆದಾರರಿಗೆ 55 ವರ್ಷಗಳಲ್ಲಿ 31,60,000 ರೂ. 58 ನೇ ವಯಸ್ಸಿನಲ್ಲಿ 33,40,000 ಮತ್ತು 60ನೇ ವಯಸಿನಲ್ಲಿ 34.60 ಲಕ್ಷ ಸಿಗುತ್ತವೆ. 80 ವರ್ಷಗಳು ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ಹಸ್ತಾಂತರಿಸಲಾಗುತ್ತದೆ. 5 ವರ್ಷಗಳ ಮೊದಲು ಯೋಜನೆಯನ್ನು ಕೈಬಿಟ್ಟರೆ, ಅದು ಬೋನಸ್‌ಗೆ ಅರ್ಹವಾಗುವುದಿಲ್ಲ. ಈ ಯೋಜನೆಯು 4 ವರ್ಷಗಳ ಹೂಡಿಕೆಯ ನಂತರ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಹೂಡಿಕೆ ಮಾಡಿದ 3 ವರ್ಷಗಳ ನಂತರ ನೀವು ಪಾಲಿಸಿಯನ್ನು ಸರೆಂಡರ್ ಮಾಡಬಹುದು.

ಆಗ ಹೂಡಿಕೆದಾರರು ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ. ಅಥವಾ, ಪಾಲಿಸಿಯನ್ನು ಸರೆಂಡರ್ ಮಾಡಿದರೆ, ಕಡಿಮೆ ಮೊತ್ತದ ಮೇಲೆ ಅನುಪಾತದ ಬೋನಸ್ ಅನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಕಂತು ಪಾವತಿ ಮಾಡಬಹುದು.

Related News

spot_img

Revenue Alerts

spot_img

News

spot_img