22.9 C
Bengaluru
Friday, July 5, 2024

ಎಸ್.ಎ.ರವೀಂದ್ರನಾಥ್ ಹೆಸರಿನಲ್ಲಿ 50 ಎಕರೆ ಪ್ರದೇಶದ ಲೇಔಟ್ ಅಭಿವೃದ್ಧಿ

ದಾವಣಗೆರೆ: ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಸೇವೆಯ ಸ್ಮರಣಾರ್ಥ, ಅವರ ಹೆಸರಿನಲ್ಲಿಯೇ 50 ಎಕರೆ ಪ್ರದೇಶದಲ್ಲಿ ಬಡವರಿಗಾಗಿ ನಿರ್ಮಿಸಲಾಗುವ ಮನೆಗಳ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರ 77 ನೇ ಜನ್ಮ ದಿನಾಚರಣೆ ಹಾಗೂ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ರೈತಪರ ಚಿಂತನೆ ಮಾಡುವ ಮಣ್ಣಿನಮಗ :
ಎಸ್.ಎ.ರವೀಂದ್ರನಾಥ್ ಅವರು ರೈತ ಹೋರಾಟಗಾರರು. ತುಂಗಭದ್ರಾ ನೀರನ್ನು ಜಿಲ್ಲೆಗೆ ಹರಿಸಲು ಅವರ ಹೋರಾಟ ನಡೆಸಿದವರು. ರೈತಪರ ಚಿಂತನೆ ಮಾಡುವ ಮಣ್ಣಿನ ಮಗ. ರವೀಂದ್ರನಾಥ್ ಅವರ ಸಂಘಟನಾತ್ಮಕ ಶಕ್ತಿ ಅಭೂತಪೂರ್ವವಾಗಿತ್ತು. ದಾವಣಗೆರೆಯ ಸುತ್ತ ನೀರಾವರಿ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾಲೆಬೆನ್ನೂರು ಸಬ್ ಡಿವಿಷನ್ ನ ಕೊನೆಯ ಭಾಗಕ್ಕೆ ನೀರು ಬರುತ್ತಿರಲಿಲ್ಲ. ಅದಕ್ಕಾಗಿ ಮತ್ತೆ ಹೋರಾಟ ನಡೆಸಿದ ರವಿಯಣ್ಣ ಈ ಭಾಗದ ಜನರಿಗೆ ನ್ಯಾಯ ಒದಗಿಸಿದರು. ತುಂಗಭದ್ರಾ ಯೋಜನೆಯ ಸಂದರ್ಭದಲ್ಲಿ ಈ ಭಾಗದ ರೈತರಿಗಾಗಿ ದಿಟ್ಟ ಹೋರಾಟವನ್ನು ನಡೆಸಿದರು ಎಂದು ತಿಳಿಸಿದರು.

ಸಮಚಿತ್ತದ ಸಾರ್ವಜನಿಕ ಬದುಕು
ರವಿಯಣ್ಣನವರು ಯಾವುದೇ ರಾಜಕೀಯ ಆಸಕ್ತಿಯಿಂದ ಹೋರಾಟಗಳನ್ನು ಮಾಡಲಿಲ್ಲ. ಯಾವುದೇ ಅಧಿಕಾರವಿರಲಿ, ಅಧಿಕಾರವಿರದೇ ಇರಲಿ, ಸಮಚಿತ್ತವಾಗಿ ಸಾರ್ವಜನಿಕ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನ ಸದಾ ಕಾಲ ನಮಗಿರಲಿ. ದಾವಣಗೆರೆಯ ಜನರು ಕಠಿಣ ಪರಿಶ್ರಮಿಗಳಾಗಿದ್ದು, ವ್ಯಾಪಾರದಲ್ಲಿ ತೊಡಗಿರುವವರು. ಅಂತೆಯೇ ಅವರು ಮಾಡುವ ದಾನಧರ್ಮದ ಕಾರ್ಯಗಳಿಂದ ಅವರ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ ಎಂದರು.

ರವಿಯಣ್ಣ , ಅನುಭವ ಬುತ್ತಿ :
ಶಾಮನೂರು ಶಿವಶಂಕರಪ್ಪ ಹಾಗೂ ಸಿದ್ದೇಶ್ವರರು ಬಡವರಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರೆಲ್ಲರ ಸತ್ಕಾರ್ಯಗಳಿಂದ ಜನರಿಗೆ ಒಳಿತುಂಟಾಗುತ್ತಿದೆ. 77 ವರ್ಷದ ರವಿಯಣ್ಣ, ಅನುಭವದ ಬುತ್ತಿಯಾಗಿದ್ದಾರೆ. ಅವರೊಬ್ಬ ಮುತ್ಸದ್ದಿ, ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿದ್ದರೆ, ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಅವರ ಅನುಭವ ಇಂದಿನ ಯುವಜನತೆಗೆ ಮಾರ್ಗದರ್ಶನವನ್ನು ನೀಡಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಶಾಸಕ ಎಸ್.ಎ. ರವೀಂದ್ರನಾಥ್ ದಂಪತಿಯನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸದ ಜಿ.ಎಂ.ಸಿದ್ದೇಶ್ವರ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಮತ್ತಿತರರು ಉಪಸ್ಥಿತರಿದ್ದರು.

Related News

spot_img

Revenue Alerts

spot_img

News

spot_img