#Govt mandate # card free of cost # Primary Health Centres
ಆಯುಷ್ಮಾನ್ ಭಾರತ್- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ (AB-CMARK) ಯೋಜನೆಯನ್ನು ವೇಗವಾಗಿ, ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ನಗರ, ಗ್ರಾಮಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ AB-CMARK ಸ್ಮಾರ್ಟ್ ಕಾರ್ಡ್ ನೀಡಲು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶಿಸಿದ್ದಾರೆ. ರಾಜ್ಯದಲ್ಲಿ 5.69 ಕೋಟಿ ಕಾರ್ಡ್ ನೀಡಬೇಕಿದ್ದರೂ ಇಲ್ಲಿ ತನಕ ಕೇವಲ 1.54 ಕೋಟಿ ಕಾರ್ಡ್ ಮಾತ್ರ ವಿತರಣೆಯಾಗಿದೆ. ಸದ್ಯ ಹಾರ್ಡ್‌ಕಾಪಿ ಸಿಗದೇ ಇದ್ದರೂ ಸಾಫ್ಟ್ ಕಾಪಿ ನೀಡಲು ಸೂಚಿಸಲಾಗಿದೆ,ಇದುವರೆಗೆ 1.54 ಕೋಟಿ ಕಾರ್ಡ್ ಮಾತ್ರ ವಿತರಿಸಲಾಗಿದ್ದು, ಬಾಕಿ 4.15 ಕೋಟಿ ಜನರಿಗೆ ಶೀಘ್ರವಾಗಿ ಕಾರ್ಡ್ ಒದಗಿಸುವ ಉದ್ದೇಶದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಮಾಡಿ ಸಾಫ್ಟ್ ಕಾಪಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ,ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇನ್ನು ಎಪಿಎಲ್ ಕಾರ್ಡ್ದಾರರು ಹೊಂದಿರುವವರಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾ ಸಿಂಧು ಕೇಂದ್ರಗಳಲ್ಲಿ 35 ರೂ. ಶುಲ್ಕದೊಂದಿಗೆ ಎಬಿ – ಎಆರ್‌ಕೆ ಕಾರ್ಡ್ ಲಭ್ಯ,ಕಾರ್ಡ್ ಪಡೆಯುವುದಕ್ಕೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಬೇಕು