20 C
Bengaluru
Tuesday, July 9, 2024

CM ರಾಜಕೀಯ ಭವಿಷ್ಯಕ್ಕೆ ಸರ್ಕಾರಿ ನೌಕರರ ಸವಾಲ್: 7ವೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಒಂದೇ ದಾರಿ:

ಬೆಂಗಳೂರು ಫೆ-23;7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೂಲಕ ತಮ್ಮ ವೇತನವನ್ನು ಹೆಚ್ಚಿಸಬೇಕೆಂಬ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥಿಕ ಮತ್ತು ರಾಜಕೀಯ ಎರಡರಲ್ಲೂ ಎರಡು ಸವಾಲಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ. ಈ ಸಮಸ್ಯೆಯು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಿರಿಯ ಪದಾಧಿಕಾರಿಗಳು ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಒಡೆತ ಬೀಳಲಿದೆ. ಹಿಮಾಚಲ ಪ್ರದೇಶದಲ್ಲೂ ಸಹ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರದೆ ಇದ್ದುದ್ದರಿಂದ ಸರ್ಕಾರಿ ನೌಕರರ ದ್ವೇಶಕ್ಕೆ ತುತ್ತಾಗಿ ತನ್ನ ಅಧಿಕಾರವನ್ನು ಕಳೆದುಕೊಳ್ಳುವಂತಾಗಿತ್ತು. ಈ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲೂ ಉಂಟಾಗುವ ಸಾಧ್ಯತೆ ಇದೆ.

ವೇತನ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರ್ಕಾರ ತನ್ನ ಬದ್ದತೆಯನ್ನು ನೀಡಲು ವಿಫಲವಾದರೆ ಮಾರ್ಚ್ 01 ರಿಂದ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಗೈರಾಜರಾಗುವ ಮೂಲಕ ಮುಷ್ಕರ ಮಾಡುವುದಾಗಿ ಘೋಷಿಸಿದ್ದಾರೆ. ಮೇ ತಿಂಗಳಿನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯ ಘೋಷಣೆಯ ಮೊದಲು ಸರ್ಕಾರವು 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಸ್ವೀಕರಿಸಲು ಮತ್ತು 40% ಫುಟ್ ಮೆಂಟ್ ನೊಂದಿಗೆ ತಮ್ಮ ವೇತನವನ್ನು ಹೆಚ್ಚಿಸಬೇಕೆಂದು ನೌಕರರು ಒತ್ತಾಯಿಸಿದ್ದಾರೆ.

ಚುನಾವಣೆಗೆ ಮುನ್ನ ಈ ವಿಚಾರ ರಾಜಕೀಯವಾಗಿ ಸೂಕ್ಷ್ಮವಾಗಿರುವುದರಿಂದ ಬಿಜೆಪಿ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಪಕ್ಷಕ್ಕೆ ನಷ್ಟವಾಗಬಹುದು ಎಂದು ಹಲವು ಹಿರಿಯ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ನೌಕರರ ಹೋರಟವನ್ನು ಬೆಂಬಲಿಸಿ ಬುಧವಾರ ಶಾಸಕಾಂಗ ಸಭೆಯ ಮಹಡಿಯಲ್ಲಿ ವೇತನ ಸಮಿತಿಯ ಶಿಫಾರಸ್ಸುಗಳನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಬೊಮ್ಮಾಯಿ ಅವರನ್ನು ಒತ್ತಯಿಸಿದ್ದಾರೆ ಎನ್ನಲಾಗಿದೆ.

” ನೌಕರರ ಬೇಡಿಕೆ ನ್ಯಾಯಾಯುತವಾಗಿದ್ದು ಅದನ್ನು ಈಡೇರಿಸಬೇಕು. ಬಜೆಟ್ ಮೇಲಿನ ಚರ್ಚೆಗೆ ನೀಡಿದ ಉತ್ತರದ ವೇಳೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಮುಖ್ಯಮಂತ್ರಿಗಳು ತಮ್ಮ ಬದ್ದತೆಯನ್ನು ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಇದರಿಂದ ನೌಕರರು ಪ್ರತಿಭಟನೆಯಲ್ಲಿ ಬೀದಿಗಿಳಿಯುವುದನ್ನ ತಡೆಯಬಹುದು ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ಕಳೆದ ಮಂಗಳವಾರ ಹೇಳಿದರು.

ಜೆಡಿಎಸ್ ಪಕ್ಷ ನರ್ಕಾರಿ ನೌಕರರ ಪರವಾದ ಪಕ್ಷವಾಗಿದ್ದು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ದು ಸರ್ಕಾರಿ ನೌಕರರ ಸಂಬಳವನ್ನು ಹೆಚ್ಚಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ ಕುಮಾರ್ ಸ್ವಾಮಿ ಹೇಳಿದ್ದಾರೆ.

ವೇತನ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ತಮ್ಮ ಸರ್ಕಾರ ಸಿದ್ದವಾಗಿದೆ ಎಂದು ಬೊಮ್ಮಾಯಿ ಅವರು ಈಗಾಗಲೇ ಹೇಳಿದ್ದಾರೆ ಮತ್ತು ಈ ಉದ್ದೇಶಕ್ಕಾಗಿ 6000/- ಕೋಟಿ ರೂ ಗಳನ್ನು ಮೀಸಲಿಡುವುದಾಗೊ ಘೋಷಿಸಿದ್ದಾರೆ. ಗುರುವಾರ ಅಥವಾ ಶುಕ್ರವಾರ ವಿಧಾನಸಭೆಯ ಅಧಿವೇಶನದಲ್ಲಿ ಅವರು ಈ ಬಗ್ಗೆ ಬಜೆಟ್ ಗೆ ಪ್ರಸ್ತಾವನೆಯನ್ನು ಸೇರಿಸುವ ಸಾಧ್ಯತೆಯಿಲ್ಲ. ಏಕೆಂದರೆ ಹಣಕಾಸು ಇಲಾಖೆ ಇದನ್ನು ಅನುಮೋದಿಸಿಲ್ಲ ಎಂದು ತಿಳಿದುಬಂದಿದೆ. ವೇತನ ಹೆಚ್ಚಳದಿಂದ ವೇತನ, ಪಿಂಚಣಿ, ಆಡಳಿತಾತ್ಮಕ ವೆಚ್ಚಗಳು ಮತ್ತು ಬಡ್ಡಿ ಪಾವತಿಗೆ ಬದ್ದವಾದ ವೆಚ್ಚಗಳು ಹೆಚ್ಚಾಗುತ್ತವೆ ಎಂಬುದು ಹಣಕಾಸು ಇಲಾಖೆ ಅಧಿಕಾರಿಗಳು ಪ್ರಸ್ತಾವನೆಗೆ ಕೆಂಪು ಪ್ಲ್ಯಾಗ್ ಮಾಡಲು ಮುಖ್ಯ ಕಾರಣ.

2023-24 ರ ಬಜೆಟ್ ಬದ್ದ ವೆಚ್ಚವನ್ನು 1,34,975 ಕೋಟಿ ಎಂದು ಅಂದಾಜಿಸಲಾಗಿದೆ, ಇದು ತೆರಿಗೆ ಆದಾಯದ ಸುಮಾರು 80 ಪ್ರತಿಶತದಷ್ಟು, ಇದಕ್ಕೆ ಯಾವುದೇ ಮೊತ್ತವನ್ನು ಸೇರಿಸಿದರೆ ರಾಜ್ಯದ ವಿತ್ತೀಯ ಕೊರತೆಯನ್ನು ಶೇಕಡಾ 3 ರ ಕಡ್ಡಾಯ ಮಿತಿಯನ್ನು ಮಿರಿ ಹೆಚ್ಚಿಸುತ್ತದೆ. GSDP (ಒಟ್ಟು ರಾಜ್ಯದ ದೇಶಿಯ ಉತ್ಪನ್ನ) ಹೊಸ ಅಯವ್ಯಯವು ಅಂದಾಜು ವಿತ್ತೀಯ ಕೊರತೆಯನ್ನು 60,581 ಕೋಟಿ ರೂ (GSDP ಯ 2.6%) ಹೊಂದಿದೆ.

5.1 ಲಕ್ಷ ಉದ್ಯೋಗಿಗಳಿರುವಾಗ (2.6 ಲಕ್ಷ ಹುದ್ದೆಗಳು ಖಾಲಿ ಇವೆ), ಅವರ ಬೇಡಿಕೆಯಂತೆ ಅವರ ವೇತನವನ್ನು ಶೇಕಡಾ 40 ರಷ್ಟು ಫಿಟ್‌ ಮೆಂಟ್ ನೊಂದಿಗೆ ಹೆಚ್ಚಿಸಲು ಸರ್ಕಾರಲ್ಲೆ ಕನಿಷ್ಠ 15000 ಕೋಟಿ ರೂಪಾಯಿಗಳ ಅಗತ್ಯವಿದೆ. ಬಜೆಟ್ ನಲ್ಲಿನ ನಿಧಿಗಳು ಮತ್ತು ವಿತ್ತಿಯ ಕೊರತೆಯ ಶೇ 3 ರಷ್ಟು ಮಿತಿಯನ್ನು ಮೀರುತ್ತದೆ.ಅದ್ದರಿಂದ ಸಿಎಮ್ ಬೊಮ್ಮಾಯಿ ರವರು ಇದನ್ನು ಬಜೆಟ್ ನಲ್ಲಿ ಉಲ್ಲೇಖಿಸದಿರಲು ಇದು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ವೇತನ ಸಮಿತಿಯನ್ನು ಶಿಫಾರಸ್ಸು ಮಾಡುವುದಾಗಿ ಸಿಎಂ ಭರವಸೆ ನೀಡಬಹುದು, ಅದರ ಅನುಷ್ಠಾನವನ್ನು ಹೊಸ ಸರ್ಕಾರಕ್ಕೆ ಬಿಡಬಹುದು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

Related News

spot_img

Revenue Alerts

spot_img

News

spot_img