14.8 C
Bengaluru
Wednesday, January 22, 2025

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಗಿಫ್ಟ್ ಘೋಷಿಸಿದ ಸರ್ಕಾರ

ನವದೆಹಲಿ : ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು,ಕೇಂದ್ರ ಸರ್ಕಾರವು ಗ್ರೂಪ್-ಸಿ, ನಾನ್ ಗೆಜೆಟೆಡ್, ಗ್ರೂಪ್ ಬಿ ನೌಕರರು, ಅರೆಸೇನಾ ಮತ್ತು ಸೇನಾ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸಿದೆ. ಕೇಂದ್ರ ಹಣಕಾಸು ಇಲಾಖೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನೌಕರರು ಗರಿಷ್ಠ ರೂ.7 ಸಾವಿರ ಬೋನಸ್ ಪಡೆಯಲಿದ್ದಾರೆ.ವರದಿಯ ಪ್ರಕಾರ, ಈ ಬೋನಸ್ (deepavali bonus 2023) ಪ್ರಯೋಜನವನ್ನು 2022-23ರ ಅವಧಿಯಲ್ಲಿ ಕನಿಷ್ಠ 6 ತಿಂಗಳವರೆಗೆ ನಿರಂತರ ಕರ್ತವ್ಯವನ್ನು ನೀಡಿದ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಅಲ್ಲದೆ, ಅವರು 31 ಮಾರ್ಚ್ 2023 ರವರೆಗೆ ಸೇವೆಯಲ್ಲಿದ್ದವರಿಗೆ ನೀಡಲಾಗುತ್ತದೆ. ಕಳೆದ ವರ್ಷ ಸರ್ಕಾರ ದೀಪಾವಳಿ ಬೋನಸ್ ಆಗಿ 1,832 ಕೋಟಿ ರೂಪಾಯಿ ನೀಡಿತ್ತು. 78 ದಿನಗಳ ವೇತನದ ಆಧಾರದ ಮೇಲೆ 11 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ದೀಪಾವಳಿ ಬೋನಸ್ 17,951 ರೂಪಾಯಿ ಸಿಕ್ಕಿತ್ತು.ಆರು ತಿಂಗಳಿಂದ ಪೂರ್ಣ ವರ್ಷದವರೆಗೆ ನಿರಂತರ ಸೇವೆಯ ಅವಧಿಗೆ ಅರ್ಹ ಉದ್ಯೋಗಿಗಳಿಗೆ ಪ್ರೊ-ರೇಟಾ ಪಾವತಿಯನ್ನು ಅನುಮತಿಸಲಾಗುತ್ತದೆ. ಅರ್ಹತಾ ಅವಧಿಯನ್ನು ಸೇವೆಯ ತಿಂಗಳ ಸಂಖ್ಯೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.2022-23 ನೇ ಸಾಲಿಗೆ ಕೇಂದ್ರ ಸರ್ಕಾರದ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ರೂ 7000 ಬೋನಸ್ ಘೋಷಿಸಲಾಗಿದೆ ಎಂದು ಸಚಿವಾಲಯ ಮಂಗಳವಾರ, ಅಕ್ಟೋಬರ್ 17 ರಂದು ತಿಳಿಸಿದೆ.ಇದರಲ್ಲಿ ಉದ್ಯೋಗಿಗಳ ಸರಾಸರಿ ವೇತನದ ಆಧಾರದ ಮೇಲೆ ಬೋನಸ್ ಸೇರಿಸಲಾಗುತ್ತದೆ. ಉದಾಹರಣೆಗೆ ಸರ್ಕಾರಿ ನೌಕರಿಯಲ್ಲಿ ನೀವು ಸುಮಾರು 20 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರೆ, ಸುಮಾರು 19 ಸಾವಿರ ರೂಪಾಯಿ ಬೋನಸ್ ಪಡೆಯಬಹುದು.

ದೀಪಾವಳಿ ಹಬ್ಬದ ಬೋನಸ್ ಪಡೆಯಲು ಯಾರು ಅರ್ಹರು..?
ಈವರೆಗೆ on-Productivity Linked Bonus ಯೋಜನೆಯ ವ್ಯಾಪ್ತಿಗೆ ಒಳಪಡದ ಕೇಂದ್ರ ಸರ್ಕಾರದ Group B ಮತ್ತು Group C ವರ್ಗದ ಅಡಿಯಲ್ಲಿ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಈ ದೀಪಾವಳಿ ಬೋನಸ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 2022 -23 ನೇ ಸಾಲಿಗೆ 7000 ರೂ. ಗಳ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

Related News

spot_img

Revenue Alerts

spot_img

News

spot_img