27.8 C
Bengaluru
Monday, July 1, 2024

ಸರ್ಕಾರದ ಜಮೀನು ಕೊಳ್ಳೆ ಹೊಡೆದವರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ

ಬೆಂಗಳೂರು, ಆ. 01 : ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ. ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತಮ್ಮದಲ್ಲದ ಜಾಗವನ್ನು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡು ಇತರರದ್ದು ಹಾಗೂ ಸರ್ಕಾರದ ಜಮೀನುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ನೀಡಿ ಸರ್ಕಾರದ ಆಸ್ತಿಗಳನ್ನು ಕಬಳಿಸಿಕೊಂಡಿರುವವರಿಗೆ ರಾಜ್ಯ ಸರ್ಕಾರ ಶಾಕಿಂಗ್‌ ನ್ಯೂಸ್‌ ಒಂದನ್ನು ನೀಡಿದೆ.

ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಸರ್ಕಾರಿ ಹಾಗೂ ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ನಕಲಿ ದಾಖಲೆ‌ ಸೃಷ್ಟಿಸಿ ದುರಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡು ಬಂದರೆ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಳ್ಳಲಾಗುತ್ತದೆ.

ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ಒದಗಿಸುವ ಕುರಿತು ಕಳೆದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಡ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಮುಂದಿನ 3-4 ತಿಂಗಳಲಿನಲ್ಲಿ ಗೆಜೆಟ್ ರೂಪದಲ್ಲಿ ಆದೇಶ ಹೊರಬೀಳಲಿದೆ. ಇದರಿಂದ ಕಂಡವರ ಆಸ್ತಿ ಕಬಳಿಸುವ ದಲ್ಲಾಳಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಇನ್ಮುಂದೆ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸುತ್ತಿರುವವರಿಗೆ ಸರ್ಕಾರ ಬ್ರೇಕ್‌ ಹಾಕುವುದಂತೂ ಗ್ಯಾರೆಂಟಿ ಆಗಿದೆ.

Related News

spot_img

Revenue Alerts

spot_img

News

spot_img