18 C
Bengaluru
Thursday, January 23, 2025

ಕಳ್ಳತನವಾದ ಅಥವಾ ಕಳೆದು ಹೋದ ಫೋನ್ ಪತ್ತೆ ಹಚ್ಚಲು ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

KSP Application:ನಿಮ್ಮ ಫೋನ್ ಕಳೆದುಹೋಗಿದೆಯೇ? ಹಾಗಿದ್ದಲ್ಲಿ, KSP ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಬೆಂಗಳೂರು ನಗರ ಪೊಲೀಸರು ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಈ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆ್ಯಪ್ ಸಹಾಯ ಮಾಡಲಿದೆ ನಿಮ್ಮ ಹೆಸರು, ರಾಜ್ಯ, ವಿಳಾಸ ಮುಂತಾದ ಮಾಹಿತಿಯನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಕಳೆದು ಹೋದ ಸಂದರ್ಭದಲ್ಲಿ ಈ ಆ್ಯಪ್ ಮೂಲಕ ದೂರು ನೀಡಬಹುದಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸರು ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಮೊದಲಿಗೆ ನಿಮ್ಮ ಸ್ಮಾರ್ಟ್ ​ಫೋನ್ ​ನಲ್ಲಿರುವ ಗೂಗಲ್‌ ಪ್ಲೇ ಸ್ಟೋರ್‌ ನಿಂದ KSP Application ಡೌನ್​ ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು.

ಮೊಬೈಲ್‌ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್‌ ಮಾಡಿಕೊಳ್ಳಿ. ಅಲ್ಲಿಂದ E-Lost ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಈಗ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್‌ ಅನ್ನು ಆಯ್ಕೆ ಮಾಡಿರಿ.

ಬಳಿಕ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್‌ ನಂಬರ್‌ ಹಾಗೂ ಇ-ಮೇಲ್‌ ಐಡಿ ನೊಂದಾಯಿಸಿರಿ. ನಂತರ ಮುಂದಿನ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಮೊಬೈಲ್‌ನ ಬಿಲ್‌ ಇದ್ದರೆ ಅದನ್ನು ಅಪ್‌ಲೋಡ್‌ ಮಾಡಿ ನಂತರ ನೆಕ್ಸ್ಟ್ ಒತ್ತಿರಿ

ಇದಾದ ಬಳಿಕ ಮೊಬೈಲ್‌ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ

ಮೊಬೈಲ್‌ ಮಾಹಿತಿಯನ್ನು ನೋಂದಾಯಿಸಿ. ಬಳಿಕ ಆಡ್‌ ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಿರಿ

ಕೊನೆಯಲ್ಲಿ ಮೊಬೈಲ್‌ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ ಸಬ್ಮಿಟ್‌ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ. ನಿಮಗೆ ಅದರಲ್ಲಿಯೇ ರಶೀದಿಯೂ ಸಿಗಲಿದೆ. ಅದನ್ನು ಡೌನ್‌ ಲೋಡ್ ಮಾಡಿ

 

Related News

spot_img

Revenue Alerts

spot_img

News

spot_img