ಬೆಂಗಳೂರು, ಏ. 17 : ಈ ವರ್ಷ ಸರ್ಕಾರಿ ನೌಕರರಿಗೆ ಲಾಭದ ಮೇಲೆ ಲಾಭ. 7ನೇ ವೇತನ ಪರಿಷ್ಕರಣೆಯ ನಂತರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಗಳ ಮೇಲೆ ಸಿಹಿ ಸುದ್ದಿ ಸಿಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಮತ್ತೊಂದು ಉಡುಗೊರೆಯನ್ನು ನೀಡಲಿದೆ. ಮಾರ್ಚ್ ಕೊನೆಯಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ .42ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು. ಇದೀಗ ಈ ಬದಲಾವಣೆ ಮಾಡಿದ್ದು, ಶೇ.46ಕ್ಕೆ ಏರಿಕೆಯಾಗಲಿದೆ.
ಮಾರ್ಚ್ 2023 ರಲ್ಲಿ ಕೇಂದ್ರ ಸರ್ಕಾರ ಶೇಕಡಾ 4 ಡಿಎ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಮಾರ್ಚ್ 24 ರಂದು, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.38 ರಿಂದ 42 ಕ್ಕೆ ಹೆಚ್ಚಿಸಿದೆ. ಮಾರ್ಚ್ 2023 ರಲ್ಲಿ ಸರ್ಕಾರವು 4 ಶೇಕಡಾ ಡಿಎ ಹೆಚ್ಚಳವನ್ನು ಘೋಷಿಸಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು ಸರ್ಕಾರ ಜನವರಿ 1ರಿಂದ ಜಾರಿಗೆ ತಂದಿದೆ. ಡಿಎ ಮತ್ತು ಡಿಆರ್ ದ್ವಿತೀಯಾರ್ಧದಲ್ಲಿ ನಾಲ್ಕು ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಸ್ತುತ ಡಿಎ ಶೇ.42ರಷ್ಟಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಇದು ಶೇ.46ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಬಾರಿ 2023 ರ ದ್ವಿತೀಯಾರ್ಧದಲ್ಲಿ ಹೆಚ್ಚಳವಾಗುವ ಡಿಎಯನ್ನು ಆಗಸ್ಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಪ್ರತಿ ಬಾರಿಯೂ ದ್ವಿತೀಯಾರ್ಧದ ಡಿಎಯನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಘೋಷಿಸಲಾಗುತ್ತದೆ. ಆದರೆ ಈ ಬಾರಿ ಆಗಸ್ಟ್ ನಲ್ಲಿಯೇ ಡಿಎ ಘೋಷಣೆಯಾಗುವ ನಿರೀಕ್ಷೆ ಇದೆ.
ದ್ವಿತಿಯಾರ್ಧದಲ್ಲಿ ಕೇಂದ್ರ ನೌಕರರ ಡಿಎ ಶೇ.46ಕ್ಕೆ ಏರಿಕೆಯಾದರೆ ಅದಕ್ಕೆ ತಕ್ಕಂತೆ ವೇತನವೂ ಹೆಚ್ಚಾಗಲಿದೆ. ಉದಾಹರಣೆಗೆ, ಉದ್ಯೋಗಿ ಪ್ರಸ್ತುತ 18,000 ರೂಪಾಯಿ ಮೂಲ ವೇತನ ಪಡೆಯುತ್ತಿದ್ದರೆ, 42 ಶೇಕಡಾ ದರದಲ್ಲಿ 7560 ರೂಪಾಯಿ ಡಿಎ ಸಿಗುತ್ತದೆ. ಇದೀಗ ಡಿಎ 46 ಶೇಕಡಾಕ್ಕೆ ಹೆಚ್ಚಳವಾದರೆ ಉದ್ಯೋಗಿಯ ತುಟ್ಟಿ ಭತ್ಯೆ 8,280 ರೂಪಾಯಿ ಆಗಿರುತ್ತದೆ.