ಬೆಂಗಳೂರು, ಫೆ. 02 : ಉದ್ಯಮಿ ಗೌತಮ್ ಅದಾನಿ ಅವರ ಬಗ್ಗೆ ಯಾರಿಗೂ ಹೇಳಬೇಕಿಲ್ಲ. ಹಾಗಾದರೆ ಇವರ ಮನೆಯ ಸುತ್ತ ಒಂದು ಸುತ್ತು ಹಾಕೋಣ ಬನ್ನಿ. ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದರು. ಆದರೆ ಇದೀಗ ಕಳೆದ ಒಂದು ವಾರದಿಂದ ಅದಾನಿ ಗ್ರೂಪ್ ನ ಷೇರುಗಳಲ್ಲಿ ಕುಸಿತ ಕಂಡಿದ್ದು, 15 ನೇ ಸ್ಥಾನಕ್ಕೆ ಇಳಿದಿದ್ದಾರೆ. ಇದಕ್ಕೆ ಕಾರಣ ಹಿಂಡೆನ್‌ಬರ್ಗ್ ಯುಎಸ್ ಮೂಲದ ವಿಸ್ಲ್‌ಬ್ಲೋವರ್ ಸಂಸ್ಥೆ. ಇದು ಸಾಮಾನ್ಯವಾಗಿ ವ್ಯವಹಾರ/ಸಂಬಂಧಿತ-ಪಕ್ಷದ ವಹಿವಾಟುಗಳಲ್ಲಿ ಅನೈತಿಕತೆಯನ್ನು ಅನುಸರಿಸುವ ಕಂಪನಿಗಳ ಬಗ್ಗೆ ವರದಿ ಮಾಡುತ್ತದೆ. ಇದೀಗ ಅದಾನಿ ಗ್ರೂಪ್ ಬಗ್ಗೆ ವರದಿ ಮಾಡಿದೆ.
ಹಿಂಡೆನ್‌ಬರ್ಗ್ ಜನವರಿ 25 ರಂದು 106 ಪುಟಗಳ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅದಾನಿ ಗ್ರೂಪ್ ‘ಕಾರ್ಪೊರೇಟ್ ಇತಿಹಾಸದಲ್ಲಿ ಅತಿ ದೊಡ್ಡ ಹಗರಣ’ವನ್ನು ಮಾಡಿದೆ ಎಂದು ಹೇಳಿದೆ. ಅದಾನಿ ಎಂಟರ್‌ಪ್ರೈಸಸ್ 8 ವರ್ಷಗಳ ಅವಧಿಯಲ್ಲಿ 5 ಮುಖ್ಯ ಹಣಕಾಸು ಅಧಿಕಾರಿಗಳನ್ನು ಹೊಂದಿದ್ದು, ಇದು ಸಂಭಾವ್ಯ ಲೆಕ್ಕಪತ್ರ ಸಮಸ್ಯೆಗಳನ್ನು ಸೂಚಿಸುವ ಪ್ರಮುಖ ಬೆಳವಣಿಗೆಯಾಗಿದೆ ಎಂದು ವರದಿ ತಿಳಿಸಿದೆ. ಹಿಂಡೆನ್ ಬರ್ಗ್ ನ ವರದಿಯಿಂದ ಅದಾನಿ ಗ್ರೂಫ್ ಗೆ ಭಾರೀ ಹೊಡೆತ ತಗುಲಿದೆ. ಅದಾನಿ ಷೇರುಗಳು ಹೆಚ್ಚು ಬೆಲೆಯದ್ದಾಗಿದೆ ಮತ್ತು ಶೀಘ್ರದಲ್ಲೇ ಮೌಲ್ಯದಲ್ಲಿ ತೀವ್ರವಾಗಿ ಕುಸಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅದಾನಿ ಎಂಟರ್‌ಪ್ರೈಸಸ್ ಹೂಡಿಕೆದಾರರಿಗೆ INR 20,000 ಕೋಟಿ ಮೌಲ್ಯದ ಷೇರುಗಳ ಸಾರ್ವಜನಿಕ ಕೊಡುಗೆಯನ್ನು ತೆರೆಯಲು ಕಾರಣವಾಗಿರುವಾಗ ಈ ಬಹಿರಂಗಪಡಿಸುವಿಕೆಯು ನಿರ್ಣಾಯಕ ಘಟ್ಟದಲ್ಲಿ ಬಂದಿದೆ. ಆದರೆ, ಅದಾನಿ ಗ್ರೂಪ್ ಹಿಂಡೆನ್ ಬರ್ಗ್ ವರದಿಯನ್ನು ತಳ್ಳಿ ಹಾಕಿದೆ. ಹಾಗಿದ್ದರೂ ಕಳೆದ ಒಂದು ವಾರದಿಂದ ಅದಾನಿ ಅವರ ಒಡೆತನದ ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಅಂಬುಜಾ ಸಿಮೆಂಟ್ಸ್, ಎಸಿಸಿ, ಎನ್ಡಿಟಿವಿ ಸೇರಿದಂತೆ ಅದಾನಿ ಒಡೆತನದ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿವೆ. ಇದು ಹೂಡಿಕೆದಾರರಿಗೆ ಭೀತಿಯನ್ನು ಹುಟ್ಟಿಸಿದೆ.
ಇನ್ನು ಅದಾನಿ ಅವರ ಮನೆಯ ಬಗ್ಗೆ ನೋಡುವುದಾದರೆ, ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಮನೆ ದೆಹಲಿಯ ಲುಟಿಯೆನ್ಸ್, ಭಗವಾನ್ ದಾಸ್ ರಸ್ತೆಯಲ್ಲಿದೆ. ಅಹಮದಾಬ್ದ್ ನಲ್ಲೂ ಇದೆ. ಇವು ಮನೆ ಎನ್ನುವುದಕ್ಕಿಂತಲೂ ಅರಮನೆ ಎಂದು ಹೇಳಬಹುದು. ದೆಹಲಿಯಲ್ಲಿರುವ ಅದಾನಿ ಅವರ ಮನೆ 25000 ಚದರ ಅಡಿ ಇದೆ. ಈ ಮನೆ ಬರೋಬ್ಬರಿ 400ಕೋಟಿ ಬೆಲೆ ಬಾಳುತ್ತದೆ. ಇದು ಮೂರೂವರೆ ಎಕರೆಯಲ್ಲಿದ್ದು, 7000 ಚದರ ಅಡಿಯಲ್ಲಿ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಈ ಬಮಗಲೆಯಲ್ಲಿ ಒಟ್ಟು ಏಳು ಬೆಡ್ ರೂಮ್ ಗಳಿವೆ, ಆರು ವಾಸದ ಹಾಗೂ ಊಟದ ಕೋಣೆಗಳಿವೆ. ಅಲ್ಲದೇ, ಸ್ಟಡಿ ರೂಮ್ ಕೂಡ ಇದೆ.
ಇನ್ನು ಅಹಮದಾಬಾದ್ ನಲ್ಲಿರುವ ಅದಾನಿ ಹೌಸ್ ನವರಂಗಪುರದ ಮಿತಾಖಲಿ ಕ್ರಾಸಿಂಗ್ ಬಳಿ ಇದೆ. ಈ ಮನೆಯಲ್ಲಿ ಅದಾನಿ, ಅವರ ಪತ್ನಿ ಪ್ರೀತಿ, ಮಗ ಕರಣ್ ಹಾಗೂ ಜೀತ್ ಮತ್ತು ಸೊಸೆಯ ಜೊತೆಗೆ ವಾಸವಿದ್ದಾರೆ. ಈ ಮನೆಯ ಸುತ್ತ ಗಾರ್ಡೆನ್ ಇದ್ದು, ಇಡೀ ರಸ್ತೆ ಸದಾ ಪ್ರಶಾಂತವಾಗಿರುತ್ತದೆ. ಅದಾನಿ ಅವರ ಮಾಲೀಕತ್ವದ ಮತ್ತೊಂದು ಫ್ಲಾಟ್ ಗುರ್ಗಾಂವ್ ನಲ್ಲಿದೆ. ಇವನ್ನು ಹೊರತುಪಡಿಸಿ ಆಸ್ಟ್ರೇಲಿಯಾದ ಅಬಾಟ್ ಪಾಯಿಂಟ್ ಪೋರ್ಟ್ ಸೇರಿದಂತೆ ಹಲವು ಆಸ್ತಿಗಳಿವೆ. ಈನ್ನು ಕಾರುಗಳು, ಚಿನ್ನಾಭರಣ, ವಾಚ್ ಸೇರಿದಂತೆ ಸಾಕಷ್ಟು ಮೌಲ್ಯಯುತ ವಸ್ತುಗಳು ಅದಾನಿ ಅವರ ಬಳಿ ಇದೆ.