21.1 C
Bengaluru
Thursday, December 19, 2024

Google India:ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ ಆ್ಯಪ್‌ನಲ್ಲಿ ಕಿರು ಸಾಲ

ಬೆಂಗಳೂರು;ದೇಶದ ಸಣ್ಣ ವ್ಯಾಪಾರಸ್ಥರಿಗೆ(Small Businessman) ನೆರವಾಗುವ ನಿಟ್ಟಿನಲ್ಲಿ ಗೂಗಲ್ ಪೇ ಆಪ್ ನಲ್ಲಿ ಕಿರು ಸಾಲ ಯೋಜನೆಯನ್ನು ಗೂಗಲ್ ಇಂಡಿಯಾ(Google india) ಪ್ರಕಟಿಸಿದೆ. ಭಾರತದಲ್ಲಿ ವ್ಯಾಪಾರಸ್ಥರಿಗೆ ಆಗಾಗ ಸಣ್ಣ ಸಾಲಗಳು ಬೇಕಾಗುತ್ತವೆ. ಹಾಗಾಗಿ ಈ ಯೋಜನೆ ಪರಿಚಯಿಸಲಾಗಿದೆ ಎಂದು ಗೂಗಲ್ ಇಂಡಿಯಾ ತಿಳಿಸಿದೆ. 15,000 ರೂ. ವರೆಗೆ ಕಿರು ಸಾಲ ನೀಡಲಾಗುತ್ತದೆ.111 ರೂ.ಗಳ ಚಿಕ್ಕ ಮೊತ್ತದ ಕಂತಿನ ಮೂಲಕ ಸಾಲ ಮರುಪಾವತಿ ಮಾಡಬಹುದು ಎಂದು ಕಂಪನಿ ಹೇಳಿದೆ. ಸಾಲದ ಸೇವೆಗಳಿಗಾಗಿ ಡಿಎಂಐ ಫೈನಾನ್ಸ್‌ ನೊಂದಿಗೆ ಗೂಗಲ್  ಮಾಡಿಕೊಂಡಿದೆ,ಇನ್ನು ಮುಂದೆ ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಮಟ್ಟದ ಸಾಲಗಳನ್ನು ನೀಡಲಾಗುವುದು. ಹಣ ವರ್ಗಾವಣೆ ತಂತ್ರಗಳಲ್ಲಿ ಒಂದಾದ ಜಿಪೇ ಅಪ್ಲಿಕೇಶನ್‌ನಲ್ಲಿ ಸ್ಯಾಚೆಟ್ ಸಾಲಗಳನ್ನು ನೀಡಲು ಆರಂಭಿಸಿದೆ. ಸ್ಯಾಚೆಟ್ ಸಾಲ ಎಂದರೆ ನ್ಯಾನೊ-ಕ್ರೆಡಿಟ್ ಅಥವಾ ಬೈಟ್-ಗಾತ್ರದ ಸಾಲಗಳ ಒಂದು ರೂಪವಾಗಿದ್ದು, ಇದು ತಕ್ಷಣದಲ್ಲಿ ಸಿಗುವ ಲೋನ್​​ ಆಗಿರುತ್ತದೆ. ಈ ಸ್ಯಾಚೆಟ್ ಲೋನ್(Sachetloan)​ 10 ಸಾವಿರದಿಂದ 1ಲಕ್ಷದವರೆಗೆ ಪಡೆಯಬಹುದು.ಗೂಗಲ್ ಪೇ(Googlepay) ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ಗೂಗಲ್​​ ಇಂಡಿಯಾಕ್ಕೂ ವಿಸ್ತರಿಸಿದೆ.ಗೂಗಲ್​​ ಪೇ 12 ತಿಂಗಳಲ್ಲಿ ಯುಪಿಐ ಮೂಲಕ ₹ 167 ಲಕ್ಷ ಕೋಟಿ ಮೌಲ್ಯಗಳ ವ್ಯವಹಾರ ನಡೆಸಿದೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಅಂಬರೀಶ್ ಕೆಂಗೆ ತಿಳಿಸಿದ್ದಾರೆ. ಈ ಲೋನ್​​ ಪಡೆಯಲು ಮಾಸಿಕ ಆದಾಯದ ₹ 30,000 ಕ್ಕಿಂತ ಕಡಿಮೆ ಇರಬೇಕು. ಜತೆಗೆ ಎರಡು ಶ್ರೇಣಿಗಳಲ್ಲಿ ನೀಡಲಾಗುತ್ತದೆ.

Related News

spot_img

Revenue Alerts

spot_img

News

spot_img