21.4 C
Bengaluru
Tuesday, December 24, 2024

ಆಧಾರ್ ಹೊಂದಿರುವವರಿಗೆ ಸಂತಸದ ಸುದ್ದಿ;ಆಧಾರ್‌ ಕಾರ್ಡ್‌ ‘ಅಪ್‌ಡೇಟ್‌’ ದಿನಾಂಕ ವಿಸ್ತರಣೆ

ಬೆಂಗಳೂರು;ಕೇಂದ್ರ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಆಧಾ‌ರ್(Aadahr) ಕಾರ್ಡ್‌ನಲ್ಲಿನ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಣ(update) ಮಾಡಲು ವಿಧಿಸಲಾಗಿದ್ದ ಗಡುವನ್ನು ವಿಸ್ತರಣೆ ಮಾಡಿದೆ. ಡಿಸೆಂಬರ್ 14ರ ವರೆಗೆ ಮಾತ್ರ ಉಚಿತ ಅಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಡೆಡ್‌ಲೈನ್(deadline) ಅನ್ನು ಮುಂದಿನ ವರ್ಷ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. MyAadhaar MyAadhaar.uidai.gov.in ನವೀಕರಿಸಬಹುದು. ಆಧಾರ್ ಕೇಂದ್ರಗಳಿಗೆ ಹೋದರೆ 25 ರೂ. ಶುಲ್ಕ ಪಾವತಿಸಬೇಕಾಗುತ್ತದೆ.ಈ ಸೌಲಭ್ಯವನ್ನು ಇನ್ನೂ 3 ತಿಂಗಳವರೆಗೆ ಅಂದರೆ 15.12.2023 ರಿಂದ 14.03.2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.10 ವರ್ಷಗಳ ಹಿಂದೆ ಆಧಾರ್(Aadhar) ನೀಡಿದ್ದ ಮತ್ತು ಈ ವರ್ಷಗಳಲ್ಲಿ ಅದನ್ನು ನವೀಕರಿಸದ ನಿವಾಸಿಗಳು ತಮ್ಮ ದಾಖಲೆಗಳನ್ನು ನವೀಕರಿಸಿ ಎಂದು ಸಲಹೆ ನೀಡಲಾಗಿದೆ. ಇದನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ,ಆಧಾರ್ ಪೋರ್ಟಲೆ ಭೇಟಿ ನೀಡುವ ಮೂಲಕ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು ಎಂದು ಯುಐಡಿಎಐ(UIDAI) ಹೇಳಿದೆ. ಇದಕ್ಕಾಗಿ, ನೀವು ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

 

ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ನವೀಕರಿಸುವುದು ಹೇಗೆ?

1.ಮೊದಲು ನೀವು ಯುಐಡಿಎಐ ವೆಬ್ಸೈಟ್ (uidai.gov.in) ಗೆ ಭೇಟಿ ನೀಡಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ರಚಿಸಬೇಕು.

2. ನಂತರ, “ಮೈ ಆಧಾರ್” ಟ್ಯಾಬ್ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುನಿಂದ “ನಿಮ್ಮ ಆಧಾರ್ ಅನ್ನು ನವೀಕರಿಸಿ” ಆಯ್ಕೆ ಮಾಡಿ.

3. ನೀವು “ಆಧಾರ್ ವಿವರಗಳನ್ನು ನವೀಕರಿಸಿ (ಆನ್ಲೈನ್)” ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನಾ ಕೋಡ್ ಅನ್ನು ನಮೂದಿಸಬೇಕು. “OTP ಕಳುಹಿಸು” ಕ್ಲಿಕ್ ಮಾಡಿ.

4.ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು “ಲಾಗಿನ್” ಕ್ಲಿಕ್ ಮಾಡಿ.

5.ನೀವು ನವೀಕರಿಸಲು ಬಯಸುವ ಜನಸಂಖ್ಯಾ ವಿವರಗಳನ್ನು ಆಯ್ಕೆ ಮಾಡಿ ಮತ್ತು ಹೊಸ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

6.ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, “ಸಲ್ಲಿಸು” ಕ್ಲಿಕ್ ಮಾಡಿ.

7. ನಿಮ್ಮ ನವೀಕರಿಸಿದ ವಿವರಗಳನ್ನು ಪರಿಶೀಲಿಸಲು ಅಗತ್ಯವಿರುವ ಪೂರಕ ದಾಖಲೆಗಳ ಸ್ಕ್ಯಾನ್ ಗಳನ್ನು ಅಪ್ ಲೋಡ್ ಮಾಡಿ.

8.ಪ್ರಕ್ರಿಯೆಯನ್ನು ಪೂರ್ಣಗೊಳಿಸಲು “ನವೀಕರಣ ವಿನಂತಿಯನ್ನು ಸಲ್ಲಿಸಿ” ಕ್ಲಿಕ್ ಮಾಡಿ.

Related News

spot_img

Revenue Alerts

spot_img

News

spot_img