#Good news # passengers # ‘Namma Metro’, # facility # start from November 16
ಬೆಂಗಳೂರು : ಮೆಟ್ರೋ(Metro) ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆ ನಮ್ಮ ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.ಇನ್ಮುಂದೆ ಪ್ರಯಾಣಿಕರು ಟಿಕೆಟ್ಗಾಗಿ ಕ್ಯೂ ನಿಲ್ಲುವಂತಿಲ್ಲ, ಬದಲಾಗಿ ವಾಟ್ಸಪ್, ಯಾತ್ರಾ QR ಕೋಡ್ ಬಳಸಿ ಟಿಕೆಟ್ ಖರೀದಿಸಬಹುದು ಎಂದು ಹೇಳಿದೆ. ಅಲ್ಲದೆ, ಮೊಬೈಲ್ ತೆಗೆದುಕೊಳ್ಳುವ QR ಟಿಕೆಟ್‌ಗಳು ಟೋಕನ್ ದರಕ್ಕಿಂತ 5% ರಿಯಾಯ್ತಿ ಕೂಡ ಇರಲಿದೆ ಎಂದು ತಿಳಿಸಿದೆ,ನ.16ರಿಂದ ಏಕಕಾಲಕ್ಕೆ 6 ಕ್ಯೂಆರ್ ಕೋಡ್(QR Code) ಟಿಕೇಟ್ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವ ಪ್ರಯಾಣಿಕರು ಮನೆ, ಕಚೇರಿ ಅಥವಾ ತಾವಿದ್ದ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್ ಪಡೆಯಬುದು. ಈ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ.ನಮ್ಮ ಮೆಟ್ರೋ ಆಪ್, ವಾಟ್ಸಾಪ್, ಪೇಟಿಎಂ, ಯಾತ್ರಾ ಆಪ್ ಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಪ್ರಸ್ತುತ ಒಂದು ಟಿಕೆಟ್(Ticket) ಖರೀದಿಗೆ ಮಾತ್ರ ಅವಕಾಶ ಇತ್ತು. ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಈ ಅಪ್ಡೇಟ್(Update) ಮಾಡಲಾಗಿದೆ.ಪ್ರಯಾಣಿಕರು ಪ್ರವೇಶ ಮತ್ತು ನಿರ್ಗಮನದ ಸಂದರ್ಭದಲ್ಲಿ ಎಫ್.ಸಿ.(FC) ಗೇಟ್ ಬಳಿ ಆರು ಜನ ಪ್ರಯಾಣಿಕರಿಗೆ ಒಂದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು.ಕ್ಯೂಆರ್ ಕೋಡ್ ಟಿಕೆಟ್ ಮೇಲೆ ಶೇ. 5 ರಷ್ಟು ರಿಯಾಯಿತಿ ಸಿಗುವುದು ಅಂತಾ BMRCL ಮಾಹಿತಿ ನೀಡಿದೆ.ಕುಟುಂಬ ಸಮೇತ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಸಹಾಯಕಾರಿಯಾಗಲಿದೆ.