21.1 C
Bengaluru
Monday, July 8, 2024

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ;ಪಡಿತರ ಕಾರ್ಡ್‌- ಆಧಾರ್ ಲಿಂಕ್ ಗಡುವು ವಿಸ್ತರಣೆ

Ration Card#Aadharcard#Link#Documents#onenationonecard#Fingerprint
ಬೆಂಗಳೂರು ಮಾ 27;ಪಡಿತರ ಚೀಟಿದಾರರಿಗೆ (Ration Card) ಮಹತ್ವದ ಸುದ್ದಿಯೊಂದು ಕೇಳಿಬಂದಿದೆ. ಹೌದು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ .ಆಧಾರ್ ಲಿಂಕ್ ಮಾಡದಿದ್ದರೆ ದಾಖಲೆಗಳು ನಿಷ್ಕ್ರೀಯವಾಗಲಿದೆ ಯಾರಾದರೂ ಆನ್‌ಲೈನ್‌ನಲ್ಲಿ ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ, ತಕ್ಷಣ ಅದನ್ನು ಮಾಡುವುದು ಉತ್ತಮ. . ಇನ್ನು ನಮ್ಮ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಸರ್ಕಾರದಿಂದ ಸಬ್ಸಿಡಿ ಆಧಾರಿತವಾಗಿ ಅಕ್ಕಿ, ಧಾನ್ಯ, ಸೀಮೆ ಎಣ್ಣೆಯನ್ನು ರೇಷನ್ ಕಾರ್ಡ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಸುಮಾರು ಐದು ದಶಕಗಳ ಹಿಂದೆಯೇ ಈ ರೇಷನ್ ಕಾರ್ಡ್ ಅನ್ನು ಅಂದಿನ ಸರ್ಕಾರವು ಪರಿಚಯಿಸಿದೆ,ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಈ ಸಂಬಂಧ ಮಹತ್ವದ ನೋಟಿಸ್ ಒಂದನ್ನು ಜಾರಿ ಮಾಡಿದೆ.

ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿಯೂ ಬಳಸಬಹುದು.ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಪಡಿತರ ವಂಚನೆಯನ್ನು ತಡೆಯಬಹುದು. ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳ ಮೂಲಕ ಪಡಿತರ ಪಡೆಯುವುದನ್ನು ತಡೆಯಲು ಆಧಾರ್ ಲಿಂಕ್ ಉಪಯುಕ್ತವಾಗಿದೆ. ನಕಲಿ ಪಡಿತರ ಚೀಟಿಗಳನ್ನು ಗುರುತಿಸಲು ಕೂಡ ಆಧಾರ್ ಲಿಂಕ್ ಉಪಯುಕ್ತವಾಗಿದೆ. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ ನಂತರ, ಒಬ್ಬರು ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಇದರಿಂದ ದೇಶದ ಯಾವುದೇ ರಾಜ್ಯದ ಪಡಿತರ ಅಗ್ಗದ ಆಹಾರ ಮಳಿಗೆಗಳಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಒಂದು ರಾಜ್ಯದ ಪಡಿತರ ಚೀಟಿಯನ್ನು ಇನ್ನೊಂದು ರಾಜ್ಯದಲ್ಲಿ ಬಳಸಬಹುದು.ಒಂದು ವೇಳೆ ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ್‌ ಲಿಂಕಿಂಗ್ ಮಾಡದೇ ಇದ್ದಲ್ಲಿ, ಈ ರೀತಿ ಮಾಡಿ.

ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಆಫ್‌ಲೈನ್ ಮೂಲಕ ಆಧಾರ್‌-ರೇಷನ್ ಕಾರ್ಡ್ ಲಿಂಕಿಂಗ್‌:

1. ಹತ್ತಿರದ ರೇಷನ್ ಅಂಗಡಿ ಅಥವಾ ಪಿಡಿಎಸ್‌ ಕೇಂದ್ರಕ್ಕೆ ನಿಮ್ಮ ರೇಷನ್ ದಾಖಲೆಯನ್ನು ಕೊಂಡೊಯ್ಯಬೇಕು.

2. ಫಿಂಗರ್‌ಪ್ರಿಟ್ ಅಥೆಂಟಿಫಿಕೇಷನ್ ಮೂಲಕ ಆಧಾರ್ ಪರಿಶೀಲಿಸಲಾಗುತ್ತದೆ.

3.ಈ ಪ್ರಕ್ರಿಯೆ ಪೊರ್ಣಗೊಂಡ ಕೂಡಲೇ ನಿಮಗೆ ಎಸ್‌ಎಂಎಸ್ ಮೂಲಕ ನೋಟಿಫಿಕೇಶನ್ ಬರುತ್ತದೆ.
4. ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ್‌ ಲಿಂಕಿಂಗ್ ಆಗುತ್ತಲೇ ನಿಮಗೆ ಖಾತ್ರಿಯ ಎಸ್‌ಎಂಎಸ್ ಬರುತ್ತದೆ.

ಆನ್ಲೈನ್ ಮೂಲಕ ರೇಷನ್-ಆಧಾರ್‌ ಕಾರ್ಡ್ ಲಿಂಕಿಂಗ್:

1. ನಿಮ್ಮ ರಾಜ್ಯದ ಪಿಡಿಎಸ್‌ ಜಾಲತಾಣಕ್ಕೆ ಭೇಟಿ ನೀಡಿ.

2. ಸಕ್ರಿಯ ರೇಷನ್ ಕಾರ್ಡ್‌ಗಳೊಂದಿಗೆ ಆಧಾರ್‌ ಲಿಂಕ್ ಮಾಡುವ ಆಯ್ಕೆಯನ್ನು ಒತ್ತಿ.

3. ಮೊದಲು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ಬಳಿಕ ಆಧಾರ್‌ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಯನ್ನು ನಮೂದಿಸಿ.
4. continue/submit ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Related News

spot_img

Revenue Alerts

spot_img

News

spot_img