22 C
Bengaluru
Monday, December 23, 2024

ಜಿಯೋ ಬಳಕೆದಾದರಿಗೆ ಗುಡ್ ನ್ಯೂಸ್…!

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಪ್ರತಿ ಹೊಸ ವರ್ಷದಲ್ಲಿ ಜಿಯೋ ಬಳಕೆದಾರರಿಗೆ ಹೊಸ ಕೈಗೆಟುಕುವ ಹಾಗು ಮತ್ತು ಉಪಯೋಗಕರ ಯೋಜನೆಗಳನ್ನು ಜಾರಿ ಮಾಡುತ್ತದೆ. ಇದೀಗ ಮತ್ತೆ ರಿಲಿಯನ್ಸ್ ಕಂಪನಿಯು ಹೊಸ ವರ್ಷದ 2024 ರ ಯೋಜನೆಯನ್ನು ಪ್ರಕಟಿಸಿದೆ ಅದು ಹೆಚ್ಚುವರಿ ಪ್ರಯೋಜನಗಳೊಂದಿಗೆ ಜನರ ಕೈ ಸೇರಲಿದೆ ಎಂದು ಹೇಳಲಾಗುತ್ತಿದೆ.OTT ಚಂದಾದಾರಿಕೆಗಳು ಅಗ್ಗದ ಬೆಲೆಯಲ್ಲಿ ಫೋನ್‌, ಕೈಗೆಟುಕುವ ಕರೆಗಳು ಮತ್ತು 5G ಡೇಟಾ ಫೆಸಿಲಿಟಿಗಳನ್ನು ನೀಡುವಲ್ಲಿ ಮುಖೇಶ್ ಅಂಬಾನಿಯ ಜಿಯೋ ಕಂಪನಿಯು ಹೆಸರುವಾಸಿಯಾಗಿದೆ.

ಗ್ರಾಹಕರನ್ನು ಸೆಳೆಯಲು ಜಿಯೋದಿಂದ ಹೊಸ ತಂತ್ರಗಾರಿಕೆ..!

2024 ಯೋಜನೆಯು ರಿಲಯನ್ಸ್ ಜಿಯೋ ಹೊಸ ವರ್ಷದಲ್ಲಿ 2.5GB ದೈನಂದಿನ 5G ಡೇಟಾ ಮತ್ತು OTT ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಇದೀಗ ತಮ್ಮ ಓಟಿಟಿ ಉದ್ಯಮದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ರಿಲಾಯನ್ಸ್ ಕಂಪೆನಿ ಹೊಸದಾದ ತಂತ್ರಗಾರಿಕೆಯನ್ನ ಪ್ರದರ್ಶಿಸುತ್ತಿದೆ ಎಂದ್ರೆ ತಪ್ಪಾಗಲಾರದು. ಜಿಯೋ ಸಿಮ್ ಲಾಂಚ್ ಆದ ಹೊಸದರಲ್ಲೂ ಸಹ ಒಂದು ವರ್ಷದವರೆಗೂ ಅನ್ ಲಿಮಿಟೆಡ್ ಡೇಟಾ ಮತ್ತು ಅನ್ ಲಿಮಿಟೆಡ್ ಕರೆ ಸೌಲಭ್ಯ ನೀಡಿ ದೊಡ್ಡ ಉದ್ಯಮವಾಗಿ ಮಾರ್ಪಟ್ಟಿತ್ತು..ಹೀಗಲೂ ಸಹ ಅದೇ ತಂತ್ರಗಾರಿಕೆಯನ್ನ ಪ್ರದರ್ಶಿಲಾಗುತ್ತಿದೆ.

ಫ್ರೀ OTT ಚಂದಾದಾರಿಕೆ…!

ಹೊಸ ರಿಲಯನ್ಸ್ ಜಿಯೋ ಹೊಸ ವರ್ಷದ 2024 ಯೋಜನೆಯು ರೂ. 2999 ಮತ್ತು ಇದು ಹೆಚ್ಚುವರಿ 24 ದಿನಗಳೊಂದಿಗೆ 389 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯು ಬಳಕೆದಾರರಿಗೆ ದಿನಕ್ಕೆ 2.5GB 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಪ್ರವೇಶಿಸಲು ಅನುಮತಿಸುತ್ತದೆ. . ಹಾಗು JioCinema, JioTV ಮತ್ತು JioCloud ಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ಸಹ ಜಿಯೋ ಕಂಪನಿಯು ಇದೇ ರೀತಿಯ ಕೊಡುಗೆಯನ್ನು ಘೋಷಿಸಿತ್ತು.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Related News

spot_img

Revenue Alerts

spot_img

News

spot_img