#Good news for farmers#Preparation # issue digitized # cultivation #certificate # 8 months
ಬೆಂಗಳೂರು: ಭೂ ದಾಖಲೆಗಳು, ರೆಕಾರ್ಡ್ ರೂಂ ಸಹಿತ ಕಂದಾಯ ಇಲಾಖೆಯ ಇಡೀ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಲಲಿತವಾಗಿ ದಾಖಲಾತಿಗಳು ಸಕಾಲಕ್ಕೆ ದೊರೆಯುವಂತೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ವಿಕಾಸಸೌಧದಲ್ಲಿ ಮಾತನಾಡಿದ ಅವರು, ಅನೇಕ ಅನರ್ಹರು ಬಗರ್‌ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಹಾಕಿದ್ದು, ಎಲ್ಲವನ್ನೂ ಪರಿಶೀಲಿಸಿ 8 ತಿಂಗಳಲ್ಲಿ ಡಿಜಿಟಲೀಕೃತ ರೂಪದ ಸಾಗುವಳಿ ಚೀಟಿ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
. ಈ ಮೂಲಕ ಬಗರ್ ಹುಕುಂ ಜಮೀನು ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಈವರೆಗೆ 9.29 ಲಕ್ಷ ಅರ್ಜಿ ಸಲ್ಲಿಸಿದ್ದಾರೆ.ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ವಿಲೇವಾರಿಯಾಗದೆ ಉಳಿದಿದ್ದ ಒಟ್ಟು 87,879 ನ್ಯಾಯಾಲಯ ವ್ಯಾಜ್ಯ ಪ್ರಕರಣಗಳಿದ್ದು ಇದರಲ್ಲಿ 41,370 ಹೊಸ ಪ್ರಕರಣಗಳಿವೆ. ಇದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 59,218ನ್ನು ಇತ್ಯರ್ಥಗೊಳಿಸಲಾಗಿದೆ. 2024ರ ಫೆಬ್ರವರಿ ಅಂತ್ಯದೊಳಗೆ 2.4 ಎಲ್ಲ ಬಾಕಿ ಪ್ರಕರಣಗಳನ್ನು ಕ್ಲಿಯರ್ ಮಾಡಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಆಪ್ ಮೂಲಕ ಇ-ಜಮಾಬಂದಿ(E-jamabandi) ಮಾಡುತ್ತೇವೆ. ಮುಂದಿನ ವರ್ಷದಿಂದ ಈ ಕೆಲಸ ಆರಂಭಿಸಲು ಆಲೋಚನೆ ನಡೆದಿದೆ. ಇದರಿಂದ ಸರ್ಕಾರಿ ಜಮೀನಿನ ರಕ್ಷಣೆ ಸಹ ಆಗುತ್ತದೆ. ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲು ಅಭಿಯಾನ ಆರಂಭಿಸುತ್ತೇವೆ. ನಾಲ್ಕು ಕಂದಾಯ ವಿಭಾಗದ 6 ತಾಲೂಕುಗಳು ಎಂಡ್ ಟು ಎಂಡ್ ಆಟೋಮೇಷನ್(End to end automation) ಮಾಡಲಾಗುತ್ತದೆ.ಅರ್ಜಿದಾರರ ಆಧಾರ್ ಫೋಟೋ ಸಹಿತ ದಾಖಲೆ ಸಿಗಲಿದ್ದು ಆನ್‌ಲೈನ್(Online) ಮೂಲಕ ಶುಲ್ಕಪಾವತಿಸಬಹುದಾಗಿದೆ ಎಂದು ವಿವರಿಸಿದ ಸಚಿವರು, ಅರ್ಹರಿಗೆ ಮಂಜೂರಾದ ಭೂಮಿಯನ್ನು ಸರ್ಕಾರದಿಂದಲೇ ಪೋಡಿ ಸಹಿತ ನೋಂದಣಿ ಮಾಡಿಕೊಡಲಾಗುವುದು. ರಾಜ್ಯದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಬಗರ್‌ಹುಕುಂ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿದ್ದು ಇನ್ನೆರಡು ದಿನಗಳಲ್ಲಿ ಅಧಿಕೃತ ರಚನೆ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.