26.7 C
Bengaluru
Sunday, December 22, 2024

ರೈತರಿಗೆ ಗುಡ್ ನ್ಯೂಸ್ ಪಹಣಿ ತಿದ್ದುಪಡಿಗೆ ತಹಶೀಲ್ದಾರ್ ಅಧಿಕಾರ ಅವಧಿ ವಿಸ್ತರಣೆ

ಬೆಂಗಳೂರು: ಕಂದಾಯ ಅದಾಲತ್‌ಗಳನ್ನು ನಡೆಸಿ (Pahani) ಪಹಣಿಗಳಲ್ಲಿರುವ ಲೋಪದೋಷ ತಿದ್ದುಪಡಿ ಮಾಡುವ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರ್‌ಗೆ (Tehsildar)ನೀಡಿದ್ದ ಅವಧಿಯನ್ನು 2023ರ ಡಿ.31ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.ಎಲ್ಲಾ ತಾಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳ ಮಟ್ಟದಲ್ಲಿ ಕಂದಾಯ ಅದಲತ್ ನಡೆಸಲಾಗುತ್ತಿದ್ದು, ಸಿಬ್ಬಂದಿಯ ಅಗತ್ಯ ಇದ್ದ ಕಾರಣ ಕಂದಾಯ ನಿವೃತ್ತ ನೌಕರರ ಸೇವೆಯನ್ನು ಪಡೆದುಕೊಳ್ಳಲಾಗಿತ್ತು. ಸಾಕಷ್ಟು ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಮೊದಲಿನಂತೆ ಸಿಬ್ಬಂದಿ ಅಗತ್ಯ ಇರುವುದಿಲ್ಲ. ಅರ್ಜಿಗಳ ವಿಲೇವಾರಿಗೆ ಆಯಾ ಕಚೇರಿ ಸಿಬ್ಬಂದಿ ನಿಯೋಜಿಸಬೇಕು ಎಂದು ಹೇಳಲಾಗಿದೆ.

ಕಂದಾಯ ಅದಾಲತ್ ಗಳ ಮೂಲಕ ಪಹಣಿಗಳಲ್ಲಿನ ಲೋಪ ದೋಷ ಸರಿಪಡಿಸಲು ತಹಶೀಲ್ದಾರಗಳಿಗೆ ನೀಡಿರುವ ಅಧಿಕಾರವನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಅಧಿಕಾರ 2020ರ ಡಿಸೆಂಬರ್ ಗೆ ಮುಕ್ತಾಯವಾಗಿದ್ದು, ಪಹಣಿ ಲೋಪ ದೋಷಗಳ ಸರಿಪಡಿಸುವ ಕಾರ್ಯ ಸುಗಮವಾಗಿ ನಡೆಯಬೇಕಿರುವುದರಿಂದ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿದೆ.ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಕಡೆಗಳಲ್ಲಿ ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಮಟ್ಟದಲ್ಲಿ ಕಂದಾಯ ಅದಾಲತ್‌ ನಡೆಸಿ ಪಹಣಿಗಳಲ್ಲಿ ಲೋಪದೋಷಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಇಂಥ ಲೋಪಗಳನ್ನು ಸರಿಪಡಿಸಲಾಗಿದ್ದು ಅರ್ಜಿಗಳು ಇನ್ನೂ ಬಾಕಿ ಇವೆ. ಅರ್ಜಿಗಳನ್ನು ಶೀಘ್ರ ವಿಲೇಮಾಡುವ ಉದ್ದೇಶದಿಂದ ಅವಧಿ ವಿಸ್ತರಿಸಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.‌ ಪಹಣಿ ತಿದ್ದುಪಡಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿ ಕಂದಾಯ ಇಲಾಖೆಯ ಭೂಮಿ ಮತ್ತು ಯುಪಿಓಆರ್ ನಿರ್ದೇಶಕರು ಪುಸ್ತಾವನೆ ಸಲ್ಲಿಸಿದ್ದರು.

ಕಂದಾಯ ಅದಾಲತ್‌ ಆಂದೋಲನದ ಮೂಲಕ ಪಹಣಿ ತಿದ್ದುಪಡಿ ಕಾರ್ಯವನ್ನು ಮುಂದುವರೆಸುವುದು ಅಗತ್ಯವಾಗಿದೆ. ಹಾಗಾಗಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಂದಾಯ ಅದಾಲತ್ ಕಾರ್ಯಕ್ರಮವನ್ನು ವಿಸ್ತರಿಸಿ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಆದೇಶ ಹೊರಡಿಸುವಂತೆ ಕೋರಲಾಗಿತ್ತು. ಅದನ್ನು ಒಪ್ಪಿದ ಸರ್ಕಾರ 2023ರ ಡಿಸೆಂಬರ್ ತನಕ ಸಮಯ ನೀಡಿದೆ.

Related News

spot_img

Revenue Alerts

spot_img

News

spot_img