ಬೆಂಗಳೂರು;ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದೆ. ದೆಹಲಿಯಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಕೇಂದ್ರ ಸಚಿವ ಸಂಪುಟವು(Union Cabinet) ಕಳೆದ ಜುಲೈನಿಂದಲೇ ಅನ್ವಯವಾಗುವಂತೆ ನೌಕರರ ತುಟ್ಟಿಭತ್ಯೆಯನ್ನು(Employees’ Allowance) 4% ಹೆಚ್ಚಿಸಲು ಅನುಮೋದನೆ ನೀಡಿದೆ. ಇದರೊಂದಿಗೆ ತುಟ್ಟಿ ಭತ್ಯೆಯ ಒಟ್ಟು ಪ್ರಮಾಣವು 46%ಗೆ ಏರಿಕೆ ಆದಂತಾಗಿದ್ದು, ನವೆಂಬರ್ ತಿಂಗಳಿನಲ್ಲಿ ಹೆಚ್ಚಳದ ವೇತನ ಕೈಸೇರಲಿದೆ.ಅನುಮೋದಿತ ಡಿಎ(DA) ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಇದರರ್ಥ ಕೇಂದ್ರ ಸರ್ಕಾರಿ ನೌಕರರು ಜುಲೈ ಮತ್ತು ಅಕ್ಟೋಬರ್ ನಡುವಿನ ಅವಧಿಗೆ ಬಾಕಿಯಿರುವ ಜೊತೆಗೆ ನವೆಂಬರ್ ತಿಂಗಳಿನಿಂದ ವರ್ಧಿತ ವೇತನವನ್ನು ಪಡೆಯುತ್ತಾರೆ. ಇದರಿಂದ ದೇಶದ – ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ ಎಂದಿದ್ದಾರೆ. ಈ ನಿರ್ಧಾರದಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.ಇನ್ನು 56,900 ರೂ.ಗಳ ಗರಿಷ್ಠ ಮೂಲ ವೇತನವನ್ನು ಹೊಂದಿರುವ ವ್ಯಕ್ತಿಗಳು ಪ್ರಸ್ತುತ ಶೇ. 42ರಷ್ಟು ಡಿಎ(DA) ಲೆಕ್ಕದಲ್ಲಿ ಪ್ರತಿ ತಿಂಗಳು ತಮ್ಮ ಮಾಸಿಕ ಗಳಿಕೆಯ ಭಾಗವಾಗಿ ಹೆಚ್ಚುವರಿ 23,898 ರೂ.ಗಳನ್ನು ಸ್ವೀಕರಿಸುತ್ತಿದ್ದರು. ಇದೀಗ ಶೇ. 46ರ ಡಿಎ ಲೆಕ್ಕದಲ್ಲಿ ಈ ವ್ಯಕ್ತಿಗಳ ಮಾಸಿಕ 26,174 ರೂ. ಪಡೆಯಲಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್,ನೌಕರರ ತುಟ್ಟಿಭತ್ಯೆಯನ್ನು 4% ಹೆಚ್ಚಿಸಲು ಅನುಮೋದನೆ
by RF Desk