24.2 C
Bengaluru
Sunday, December 22, 2024

ನಮ್ಮ ಮೆಟ್ರೋಗೆ 18 ಹೊಸ ಮಾರ್ಗ ಮುಂದಿನ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಕಾರ್ಯಗತ – ಬೆಂಗಳೂರಿಗರಿಗೆ ಗುಡ್ ನ್ಯೂಸ್

#Namma metro # Bangalore #Mejastic # Mew lane #Bmrcl # # Yellow#Red#Blue

ಬೆಂಗಳೂರು: ರಾಜಧಾನಿ ದಿನದಿಂದ ದಿನಕ್ಕೆ ವಿಸ್ತಾರ ಆಗುತ್ತಿದೆ.. ಸುಗಮ ಸಂಚಾರ ವ್ಯವಸ್ಥೆಯೂ ಕಷ್ಟವಾಗುತ್ತಿದೆ. ನಮ್ಮ ಮೆಟ್ರೋ ವ್ಯವಸ್ಥೆ ಇದ್ರೂ ಈ ಮಹಾನಗರದಲ್ಲಿ ಸಾಲದ್ದಾಗಿದೆ. ಇದರಿಂದ ಇದೀಗ ಮೆಟ್ರೋ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತಾರ ಮಾಡಲು ಮುಂದಾಗಿದ್ದು ಮುಂಬರುವ ನಾಲ್ಕು ವರ್ಷದಲ್ಲಿ ನಮ್ಮ ಮೆಟ್ರೋದಲ್ಲಿ 18 ಮಾರ್ಗ ಬದಲಾವಣೆ ನಿಲ್ದಾಣಗಳು ಆಗಲಿವೆ. ಇದ್ರಿಂದ ಬೆಂಗಳೂರಿಗರು ಇಡೀ ನಗರವನ್ನ ಮೆಟ್ರೋದಲ್ಲೇ ಸುತ್ತಾಡಬಹುದು.

ಸದ್ಯ ಇರೋ ವ್ಯವಸ್ಥೆ ಅಂದರೆ ಮೆಜೆಸ್ಟಿಕ್ ಮಾತ್ರ ಮಾರ್ಗ ಬದಾಲವಣೆ ನಿಲ್ದಾಣವಾಗಿದೆ. ಉಳಿದಂತೆ ಕಾಮಗಾರಿ ಪ್ರಗತಿಯಲ್ಲಿರುವ ಹಳದಿ, ನೀಲಿ, ಗುಲಾಬಿ ಮಾರ್ಗಗಳು ಹಾಗೂ ಈಗಾಗಲೇ ಡಿಪಿಆರ್ ರೆಡಿಯಾದ ಮಾರ್ಗಗಳಾದ ಕೆಂಪು, ಕೇಸರಿ, ಹಾಗ ಬೆಳ್ಳಿ ಮಾರ್ಗ ಪೂರ್ಣಗೊಂಡ ಬಳಿಕ ಇದಕ್ಕೆ ಇನ್ನೂ ಹೊಸದಾಗಿ 17 ಮಾರ್ಗ ಬದಲಾವಣೆ ನಿಲ್ದಾಣಗಳು ಸೇರಲಿವೆ.

ಮೆಜೆಸ್ಟಿಕ್ ಹೊರತು ಹಡಿಸಿದರೆ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರ (ಗುಲಾಬಿ ಮಾರ್ಗ) ಭಾಗವಾಗಿರೋ ಜಯದೇವ ಮೆಟ್ರೋ ನಿಲ್ದಾಣ ಜನದಟ್ಟಣೆ ಸಮಯದಲ್ಲಿ ಸುಮಾರು 25 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮಾರ್ಥ್ಯ ಹೊಂದಿದೆ. ಈಗಾಗಾಲೇ ಜಯದೇವ ಮೆಟ್ರೋ ನಿಲ್ದಾಣದ ಶೇಕಡ 90ರಷ್ಟು ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ. ಇನ್ನು ಬಾಕಿ ಉಳಿದಿರೋ ಕಾಮಗಾರಿ ಸದ್ಯದಲ್ಲೇ ಮುಗಿಯಲಿದೆ.

ಮಾರ್ಗ ಬದಲಾವಣೆ ಆಗುವ ನಿಲ್ಧಾಣಗಳು
1.ಕೆ.ಆರ್.ಪುರ ನೇರಳೆ –ನೀಲಿ
2.ಎಂ.ಜಿ.ರಸ್ತೆ ನೇರಳೆ –ಗುಲಾಬಿ
3.ಮೆಜೆಸ್ಟಿಕ್ ನೇರಳೆ –ಹಸಿರು
4. ಹೊಸಹಳ್ಳಿ ನೇರಳೆ- ಕಡಬಗೆರೆ
5. ಮೈಸೂರು ರಸ್ತೆ ನೇರಳೆ- ಕೇಸರಿ
6. ಪೀಣ್ಯ ಹಸಿರು-ಕೇಸರಿ
7.ಆರ್.ವಿ ರಸ್ತೆ ಹಸಿರು-ಹಳದಿ
8.ಜೆ.ಪಿ.ನಗರ ಹಸಿರು-ಕೇಸರಿ
9. ಜೆ.ಪಿ.ನಗರ 4ನೇ ಹಂತ ಗುಲಾಬಿ-ಕೇಸರಿ
10.ಜಯದೇವ ಗುಲಾಬಿ-ಹಳದಿ
11.ಡೇರಿ ಸರ್ಕಲ್ ಗುಲಾಬಿ-ಕೆಂಪು
12.ನಾಗವರ ಗುಲಾಬಿ-ನೀಲಿ
13. ಕೆಂಪಾಪುರ ನೀಲಿ-ಕೇಸರಿ
14.ಹೆಬ್ಬಾಳ ನೀಲಿ-ಕೆಂಪು
15.ಇಬ್ಬಲೂರು ನೀಲಿ-ಕೆಂಪು
16.ಅಗರ ನೀಲಿ-ಕೆಂಪು
17.ರೇಷ್ಮೆ ಮಂಡಳಿ ಹಳದಿ
18.ಸುಮ್ಮನಹಳ್ಳಿ –ಕಡೆಗೆರ ಮಾರ್ಗ- ಕೇಸರಿ-ಬೆಳ್ಳಿ

Related News

spot_img

Revenue Alerts

spot_img

News

spot_img