ಬೆಂಗಳೂರು, ಮಾ. 15 : ಬೆಂಗಳೂರಿನಲ್ಲಿ 28 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಗೋದ್ರೇಜ್ ಪ್ರಾಪರ್ಟೀಸ್ ಮಾರಾಟ ಪತ್ರ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಸೇರಿದಂತೆ ಇತರೆ ಅಭಿವೃದ್ಧಿ ಅನ್ನು ಬೆಂಬಲಿಸುವ ಸಲುವಾಗಿ ಈ ನಿರ್ಧಾರವನ್ನು ಮಾಡಿದೆ. ಈ ಯೋಜನೆಯು ವೈಟ್‌ಫೀಲ್ಡ್ ಬಳಿ ಮತ್ತು ವೈಟ್‌ಫೀಲ್ಡ್ ಮತ್ತು ಔಟರ್ ರಿಂಗ್ ರೋಡ್‌ನಲ್ಲಿರುವ ಪ್ರಮುಖ ಕಚೇರಿ ಸ್ಥಳಗಳಿಗೆ ಸಮೀಪದಲ್ಲಿದೆ.
ಗೋದ್ರೇಜ್ ಪ್ರಾಪರ್ಟೀಸ್ ಗೋದ್ರೇಜ್ ಗ್ರೂಪ್‌ನ ರಿಯಲ್ ಎಸ್ಟೇಟ್ ಅಂಗವಾಗಿದೆ. ಇದು ಗೋದ್ರೇಜ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿದೆ. ಕಂಪನಿಯು ಪ್ರಸ್ತುತ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವಸತಿ, ವಾಣಿಜ್ಯ ಮತ್ತು ಟೌನ್‌ಶಿಪ್ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.
ಇದು 31 ಡಿಸೆಂಬರ್ 2022 ರಂತೆ ಕಂಪನಿಯ ಈಕ್ವಿಟಿ ಷೇರುಗಳ 58.48% ಅನ್ನು ಹೊಂದಿದೆ. ಕಳೆದ ತ್ರೈಮಾಸಿಕದಲ್ಲಿ ಗೋದ್ರೇಜ್ ಪ್ರಾಪರ್ಟೀಸ್ ತನ್ನ ನಿವ್ವಳ ಏಕೀಕೃತ ಲಾಭದಲ್ಲಿ ಶೇಕಡಾ 44.54 ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, Q3 FY23 ರಲ್ಲಿ 56.40 ಕೋಟಿ ರೂ.ಗಳಷ್ಟಿದ್ದು, ಮೊದಲು ರೂ. 39.02 ಕೋಟಿ ಲಾಭ ಇತ್ತು.
ಇದರ ನಿವ್ವಳ ಏಕೀಕೃತ ಆದಾಯವು Q3 FY23 ರಲ್ಲಿ ರೂ 404.58 ಕೋಟಿಗಳಷ್ಟಿತ್ತು. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ದಾಖಲಿಸಿದ ರೂ 466.91 ಕೋಟಿಗಳಿಂದ 13.35 ಶೇಕಡಾ ಕಡಿಮೆಯಾಗಿದೆ. ಕಂಪನಿಯು ಇತ್ತೀಚೆಗೆ ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಮುಂಬೈನ ಚೆಂಬೂರ್‌ನ ಡಿಯೋನಾರ್ ಫಾರ್ಮ್ ರಸ್ತೆಯಲ್ಲಿರುವ ರಾಜ್ ಕಪೂರ್ ಅವರ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿತು. ಭೂಮಿಯನ್ನು ಕಪೂರ್ ಕುಟುಂಬದಿಂದ ಖರೀದಿಸಲಾಗಿದೆ.
ಇನ್ನು ಇದೇ ಸಮಯದಲ್ಲಿ ಟಿವಿಎಸ್ ಎಮರಾಲ್ಡ್ ಕೂಡ ಬೆಮಗಳೂರಿನ ರಾಚೇನಹಳ್ಳಿಯಲ್ಲಿ ಮೂರು ಎಕರೆ ಭೂಮಿಯನ್ನು ಖರೀದಿಸಿದೆ. ಅಪಾರ್ಟ್ಮೆಂಟ್ ವಸತಿ ಯೋಜನೆಯ ಅಭಿವೃದ್ಧಿಗಾಗಿ ಟಿವಿಎಸ್ ಎಮರಾಲ್ಡ್ ಈ ಭೂಮಿಯನ್ನು ಖರೀದಿ ಮಾಡಿದೆ. ಕಂಪನಿಯ ಪ್ರಕಾರ, ಈ ಯೋಜನೆಯು ಅಂದಾಜು 250 ಕೋಟಿ ಆದಾಯದ ಸಾಮರ್ಥ್ಯವನ್ನು ಹೊಂದಿದೆ.