24.2 C
Bengaluru
Sunday, December 22, 2024

ಮುಂಬೈ ಬಳಿ ಜನಪ್ರಿಯ ವಾರಾಂತ್ಯದ ತಾಣವೊಂದನ್ನು ಖರೀದಿಸಿದ ಗೋದ್ರೇಜ್‌ ಪ್ರಾಪರ್ಟೀಸ್‌

ರಿಯಲ್‌ ಎಸ್ಟೇಟ್‌ ಡೆವಲಪರ್‌ ಆಗಿರುವ ಗೋದ್ರೇಜ್‌ ಪ್ರಾಪರ್ಟೀಸ್‌ ಲಿಮಿಟೆಡ್‌, ಮುಂಬೈನಿಂದ 100 ಕಿ.ಮೀ. ದೂರದಲ್ಲಿರುವ ಜನಪ್ರಿಯ ವಾರಾಂತ್ಯದ ತಾಣವಾದ ಹಾಗೂ ಮೈಕ್ರೊ ಮಾರುಕಟ್ಟೆ ಆಗಿರುವ ಮನೋರ್‌ನ ಪಾಲ್ಘಾರ್‌ನಲ್ಲಿ ಭೂಮಿಯನ್ನು ನೇರವಾಗಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಸುಮಾರು 50 ಎಕರೆ ವ್ಯಾಪ್ತಿಯಲ್ಲಿ ಈ ಪ್ರದೇಶ ಹರಡಿಕೊಂಡಿದೆ. ಈ ಪ್ರಸ್ತಾವಿತ ಯೋಜನೆಯು ಅಂದಾಜು 1.2 ಮಿಲಿಯನ್‌ ಚದರ ಅಡಿಗಳಷ್ಟು ಮಾರಾಟ ಮಾಡಬಹುದಾದ ಪ್ರದೇಶವನ್ನು ಅಭಿವೃದ್ಧಪಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಮನೋರ್‌, ಪಾಲ್ಘಾರ್‌, ಬೋಯ್ಸರ್‌ ಹಾಗೂ ವಾಡಾ ಪ್ರದೇಶಗಳು ಜನಪ್ರಿಯ ವಾರಾಂತ್ಯದ ಪ್ರದೇಶಗಳಾಗಿದ್ದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವವನ್ನು ಹೊಂದಿದೆ. ಜೊತೆಗೆ ಸೂಕ್ಷ್ಮ ಮಾರುಕಟ್ಟೆ ಹೂಡಿಕೆಗಳಿಗೆ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ.

ಮನೋರ್‌ ಪ್ರದೇಶದಲ್ಲಿ ಹಲವಾರು ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಮಾರುಕಟ್ಟೆ ಸ್ಥಳಗಳಿದ್ದು ಉತ್ತಮ ಸೌಕರ್ಯ ಹೊಂದಿದ ಸ್ವಾವಲಂಬಿ ಪಟ್ಟಣವಾಗಿದೆ. ಮಹಾರಾಷ್ಟ್ರ ಹಾಗೂ ಗುಜರಾತ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮುಂಬೈ – ಅಹ್ಮದಾಬಾದ್‌ ಹೆದ್ದಾರಿಯ ಸಮೀಪದಲ್ಲಿದೆ ಈ ಪ್ರದೇಶ.

ಮನೋರ್‌ ಪ್ರದೇಶವು ಯೋಜನೆಯ ಅಭಿವೃದ್ಧಿಗೆ ಭರವಸೆಯ ಸೂಕ್ಷ್ಮ ಮಾರುಕಟ್ಟೆಯಾಗಿದೆ ಮತ್ತು ಈ ಯೋಜನೆಯನ್ನು ನಮ್ಮ ಕಾರ್ಯದಲ್ಲಿ ಸೇರಿಸಲು ನಾವು ತುಂಬಾ ಖುಷಿಯಾಗುತ್ತಿದೆ. ಕೋವಿಡ್‌ ನಂತರ ಪ್ರೀಮಿಯಂ ಸೆಕೆಂಡ್‌ ಹೋಂಗಳಿಗೆ ಬೇಡಿಕೆ ಹೆಚ್ಚಾಗಿದೆʼ ಎಂದು ಗೋದ್ರೇಜ್‌ ಪ್ರಾಪರ್ಟೀಸ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಣಾ ಅಧಿಕಾರಿ ಆಗಿರುವ ಮೋಹಿತ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಭಾರತದಲ್ಲಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಎಂದಿನಂತೆ ಉನ್ನತ ಮಟ್ಟದಲ್ಲಿರಲಿದೆ. ಅನಾರಾಕ್‌ ಅಧ್ಯಯನದ ಪ್ರಕಾರ, ವಸತಿ ಮಾರಾಟವು ಈ ವರ್ಷ ಪ್ರಮುಖ ಏಳೂ ನಗರಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಅಂದರೆ 3.6 ಲಕ್ಷ ಯುನಿಟ್‌ಗಳನ್ನು ತಲುಪುವ ಸಾಧ್ಯತೆಯಿದೆ. ಗೃಹ ಸಾಲ ಮತ್ತು ಆಸ್ತಿ ದರಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚು ಮಾಡಿದ್ದರೂ ರಿಯಲ್‌ ಎಸ್ಟೇಟ್‌ನ ಎಲ್ಲ ವಿಭಾಗಗಳಲ್ಲಿ ಹೆಚ್ಚೆಚ್ಚು ಬೇಡಿಕೆ ಕೇಳಿಬರುತ್ತಿದೆ.

ಏಳು ಪ್ರಮುಖ ನಗರಗಳಾದ ದಿಲ್ಲಿ, NCR, ಮುಂಬೈ ಮೆಟ್ರೊಪಾಲಿಟನ್‌ (ಎಂಎಂಆರ್‌), ಕೋಲ್ಕತ್ತ, ಚೆನ್ನೈ, ಬೆಂಗಳೂರು, ಹೈದರಾಬಾದ್‌ ಹಾಗೂ ಪುಣೆಯ ಪ್ರಾಥಮಿಕ ಮಾರುಕಟ್ಟೆಗಳಲ್ಲಿ ವಸತಿ ಮಾರಾಟವು 2014ರಲ್ಲಿ 3,42,980 ಯುನಿಟ್‌ನಷ್ಟಾಗಿದ್ದಾಗ ಹಿಂದಿನ ಗರಿಷ್ಠವನ್ನು ದಾಖಲಿಸಿತ್ತು.

“2022ರಲ್ಲಿ ಭಾರತದಲ್ಲಿ ವಸತಿ ಮಾರುಕಟ್ಟೆ ಇತಿಹಾಸವನ್ನೇ ಸೃಷ್ಟಿಸಲಿದೆ. ಈಗಾಗಲೇ ಎಲ್ಲ ದಾಖಲೆಗಳನ್ನು ಮೀರಿಸಿ ಮುನ್ನಡೆಯುತ್ತಿರುವ ಕ್ಷೇತ್ರವು ಹಬ್ಬದ ಋತುವಿನಲ್ಲಿ ಹೆಚ್ಚಿನ ಮಾರಾಟವನ್ನು ಸಾಕ್ಷೀಕರಿಸುವ ಸಾಧ್ಯತೆಯಿದೆ,” ಎಂದು ಅನಾರಾಕ್‌ ಗ್ರೂಪ್‌ನ ಮುಖ್ಯಸ್ಥರಾದ ಅನುಜ್‌ ಪುರಿ ಅಭಿಫ್ರಾಯಿಸಿದ್ದಾರೆ.

“ಕೋವಿಡ್‌ 19 ಬಂದ ನಂತರ ಸ್ವಂತದ್ದೊಂದು ಮನೆ ಹೊಂದುವ ಭಾವನೆ ಎಲ್ಲರಲ್ಲಿಯೂ ಗಟ್ಟಿಯಾಗಿದೆ. ಬಡ್ಡಿದರಗಳಲ್ಲಿ ಏರಿಕೆ, ಹೆಚ್ಚಿದ ಆಸ್ತಿ ದರಗಳು, ಹಬ್ಬದ ಋತುವಿನಲ್ಲಿ ನೀಡುವ ಕೊಡುಗೆ, ರಿಯಾಯಿತಿಗಳು ಕಡಿಮೆ ಆಗಿದ್ದರೂ ವಸತಿ ಕ್ಷೇತ್ರದೆಡೆಗಿನ ಬೇಡಿಕೆ ಕುಂದಿಲ್ಲ,” ಎಂದು ಅವರು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img