23 C
Bengaluru
Tuesday, November 12, 2024

ಚುನಾವಣಾ ಬಾಂಡ್’ ಗಳ ಮಾಹಿತಿ ನೀಡಿ;ಎಸ್‌ಬಿಐ ವಿರುದ್ಧ ಸುಪ್ರೀಂಕೋರ್ಟ್ ಗರಂ

ನವದೆಹಲಿ: ಚುನಾವಣಾ ಬಾಂಡ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ವಿಳಂಬ ಮಾಡಿದ್ದಕ್ಕಾಗಿ SBIಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ರಾಜಕೀಯ ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಮತ್ತು ಮಾರ್ಚ್ 12ರಂದು ವ್ಯವಹಾರದ ಸಮಯದ ಅಂತ್ಯದ ವೇಳೆಗೆ ವಿವರಗಳನ್ನು ಸಲ್ಲಿಸುವಂತೆ SBIಗೆ ಸೂಚಿಸಿದೆ.ಪ್ರತಿ ಚುನಾವಣಾ ಬಾಂಡ್ ನ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸಲ್ಲಿಸಿದ್ದ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ಸದಸ್ಯರ ಸಂವಿಧಾನ ಪೀಠವು ವಿಚಾರಣೆ ನಡೆಸಿತು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನೀವು ಮುಚ್ಚಿದ ಲಕೋಟೆಯನ್ನು ತೆರೆದು, ವಿವರಗಳನ್ನು ಒಟ್ಟುಗೂಡಿಸಿ ಮಾಹಿತಿಯನ್ನು ನೀಡಬೇಕು. ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ ಎಂದರು.22,217 ಎಲೆಕ್ಟೋರಲ್ ಬಾಂಡ್‌ಗಳ(Electoral bond) ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಂಪೈಲ್(Compile) ಮಾಡಲು ಮತ್ತು ಡಿಕೋಡ್(Decode) ಮಾಡಲು ಎಸ್‌ಬಿಐ(SBI) ಹೆಚ್ಚುವರಿ ಸಮಯವನ್ನು ಕೋರಿದೆ.ಮಾರ್ಚ್ 6(March 6) ರೊಳಗೆ ಮಾಹಿತಿಯನ್ನು ಬಹಿರಂಗಪಡಿಸಲು ಬ್ಯಾಂಕ್ ವಿಫಲವಾದ ಕಾರಣಕ್ಕಾಗಿ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ 5 ನ್ಯಾಯಾಧೀಶರ ಪೀಠವು ಇಂದು ಬೆಳಗ್ಗೆ 10.30 ಕ್ಕೆ ಪ್ರಕರಣಗಳನ್ನು ಆಲಿಸಲಿದೆ.

Related News

spot_img

Revenue Alerts

spot_img

News

spot_img