ಬೆಂಗಳೂರು, ಆ. 15 : ಮೊದಲೆಲ್ಲಾ ಹುಟ್ಟಿದ ಮೇಲೆ ಸಾಯಲೇಬೇಕು ಎನ್ನುತ್ತಿದ್ದರು. ಆದರೆ ಈಗ ಹುಟ್ಟಿದ ಮೇಲೆ ಹೇಗೆ ಸಾಯ್ತೀವೋ ಗೊತ್ತಿಲ್ಲ. ಆದರೆ ಜೀವನದಲ್ಲಿ ಹೆಲ್ತ್ ಹಾಗೂ ಲೈಫ್ ಇನ್ಶುರೆನ್ಸ್ ಅನ್ನು ಮಾಡಿಸಲೇಬೇಕು. ಯಾಕೆಂದರೆ, ಬದುಕಿದ್ದಾಗ ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಹಾಗಾಗಿ ಕಷ್ಟದಲ್ಲ ಕೈ ಹಿಡಿಯುವಂತಹ ಇನ್ಶುರೆನ್ಸ್ ಗಳನ್ನು ಮಾಡಿಸುವುದು ಬಹಳ ಮುಖ್ಯ. ಅದರಲ್ಲೂ ಸಾರ್ಕಾರದ ಅಥವಾ ಸರ್ಕಾರದ ಸಹಯೋಗದಿಂದ ನಡೆಯುವಂತಹ ವಿಮೆಗಳನ್ನು ಖರೀದಿಸುವುದರಿಂದ ಪ್ರಿಮಿಯಂ ಮೊತ್ತವೂ ಕಡಿಮೆ ಆಗುತ್ತದೆ.
ಅಂತಹದ್ದೇ ಒಂದು ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಅಪಘಾತ ವಿಮೆ. ಇದರಲ್ಲಿ ವರ್ಷಕ್ಕೆ ಕೇವಲ 20 ರೂ ಪ್ರೀಮಿಯಂ ಪಾವತಿಸಿದರೆ ಸಾಕು. ವರ್ಷಕ್ಕೆ 2 ಲಕ್ಷದವರೆಗೂ ವಿಮೆಯನ್ನು ನೀಡಲಾಗುತ್ತದೆ. ಈ ಯೋಜನೆಗೆ 18 ರಿಂದ 70 ವರ್ಷದೊಳಗಿನವರು ಪಡೆಯಬಹುದು. ಪ್ರಧಾನ ಮಂತ್ರಿ ಅಪಘಾತ ವಿಮಾ ಯೋಜನೆಗೆ ಬಳಕೆದಾರರ ಬ್ಯಾಂಕ್ ಖಾತೆಯಿಂದ ಪ್ರಿಮಿಯಂ ಕಡಿತವಾಗುತ್ತದೆ. ಅಪಘಾತದಲ್ಲಿ ಜೀವಹಾನಿ ಇಲ್ಲವೇ ದೈಹಿಕ ಅಸಾಮರ್ಥ್ಯವನ್ನು ಅನುಭವಿಸುವವರು ವಿಮೆಯ ಪ್ರಯೋಜನ ಪಡೆಯಬಹುದು.
2015ರಲ್ಲಿ ಪ್ರಧಾನಮಂತ್ರಿ ಅಪಘಾತ ವಿಮಾ ಯೋಜನೆ ಜಾರಿಐಾಯ್ತು. ಆಗ ಕೇವಲ 12 ರೂಪಾಯಿ ವಾರ್ಷಿಕ ಪ್ರಿಮಿಯಂ ನಿಗದಿಯಾಗಿತ್ತು. ಕಳೆದ ವರ್ಷ ಇದನ್ನು ರೂ.20 ಕ್ಕೆ ಹೆಚ್ಚಿಸಲಾಯ್ತು. ಈ ವಿಮೆಯನ್ನು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಪರಿಚಯಿಸಿದೆ. ಈ ಯೋಜನೆಗೆ ಬ್ಯಾಂಕ್ ಗೆ ತೆರಳಿ ಅರ್ಜಿ ತುಂಬಿ ದಾಖಲೆಗಳನ್ನು ನೀಡಬಹುದು ಇಲ್ಲವೇ ಏಜೆಂಟ್ ಗಳನ್ನು ಭೇಟಿ ಮಾಡಬಹುದು. ಇನ್ನು ವಿಮೆ ಹೊಂಣದಿರುವವರಿಗೆ ಅಪಘಾತವಾದರೆ, ಇಲ್ಲವೇ ಮರಣ ಹೊಂದಿದರೆ, ಅವರ ಉತ್ತರಾಧಿಕಾರಿ ಎಲ್ಲಾ ದಾಖಲೆಗಳನ್ನು ನೀಡಿ ವಿಮೆಯ ಲಾಭವನ್ನು ಪಡೆಯಬಹುದು.