ಬೆಂಗಳೂರು, ಏ. 08 : ಎಲ್ಲಾ ಆಸ್ತಿ ಮಾರಾಟ ಹಾಗೂ ಖರೀದಿ ಮಾಡುವವರಿಗಾಗಿ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಕೇವಲ 7 ದಿನಗಳ ಒಳಗೆ ಆಸ್ತಿಯನ್ನು ಖರೀದಿ ಮಾಡುವವರಿಗೆ ಪಹಣಿಯನ್ನು ಕೂಡ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಸಂಪೂರ್ವಾದ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಓದಿ.
ಆಸ್ತಿ ನೋಂದಣಿ ಮಾಡಿದ 7 ದಿನದ ಒಳಗೆ ಕಡ್ಡಾಯವಾಗಿ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಬದಲಾವಣೆಯನ್ನು ಕಡ್ಡಾಯಗೊಳಿಸುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ನೋಂದಣಿಯಾದ ಆಸ್ತಿ ನೀಡಲು ಈಗ ಕನಿಷ್ಠ 34 ದಿನಗಳ ಕಾಲಾವಕಾಶ ಬೇಕಿದೆ. ಇದನ್ನು ಇನ್ನು ಮುಂದೆ 7 ದಿನಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಆಸ್ತಿ ನೋಂದಣಿ ಮಾಡಿಸಿಕೊಂಡವರು ಖಾತೆ ಪಡೆಯಲು ತಿಂಗಳು ಗಟ್ಟಲೇ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಇದರಿಂದ ಭೂ ಖರೀದಿದಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಭೂ ಪರಿವರ್ತನೆ ವಿಧೇಯಕವನ್ನು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಂದಾಯ ಜಾಗಗಳಲ್ಲಿರುವ ಅನಧಿಕೃತ ಮನೆ, ನಿವೇಶನ ಸೇರಿದಂತೆ ಮತ್ತಿತರ 40 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಸಕ್ರಮ ಮಾಡಬೇಕಿದೆ. ಈ ಬಗ್ಗೆ ರಾಜ್ಯವ ಸರ್ಕಾರ ಹೊಸ ಮಾರ್ಗ ಹುಡುಕಿದೆ. ಭೂ ಪರಿವರ್ತನೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿದೆ. ಈ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನದ ಆಸ್ತಿಗಳ ಸಕ್ರಮಕ್ಕೂ ಅನುಕೂಲ ಮಾಡುವ ಸಲುವಾಗಿ ಸರ್ಕಾರ ಚಿಂತನೆಯನ್ನು ನಡೆಸಿದೆ.
ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳಬೇಕು. ಭೂ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಈ ಸುಗ್ರಿವಾಜ್ಞೆಯ ಮೂಲಕ ರಾಜ್ಯದಲ್ಲಿ ಜಾರಿಯಾಗಬೇಕಾಗಿದೆ. ಇದರಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ನಿವೇಶನಗಳ ಭೂ ದಂಡ ಶುಲ್ಕದೊಂದಿಗೆ ಭೂ ಪರಿವರ್ತನೆ ಸಾಧ್ಯವಾದರೆ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.