22.9 C
Bengaluru
Friday, July 5, 2024

LIC ಸರಳ ಪಿಂಚಣಿ ಯೋಜನೆಯಡಿ ತಿಂಗಳಿಗೆ ₹12,000 ಪಿಂಚಣಿ ಪಡೆಯಿರಿ

ದೇಶದ ನಂಬರ್ ಒನ್ ಇನ್ಸೂರೆನ್ಸ್ ಕಂಪನಿ ಆಗಿರುವ ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತಿದೆ. ವಿವಿಧ ರೀತಿಯ ಪಾಲಿಸಿಯನ್ನು LIC ನೀಡುತ್ತಿದೆ.ಎಲ್‌ಐಸಿಯ ಸರಳ ಪಿಂಚಣಿ(Saralpinchani) ಯೋಜನೆಯು ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ಎಲ್ಲರಿಗೂ ಲಭ್ಯವಿದೆ. ಈ ಯೋಜನೆಗೆ ಸೇರಿಕೊಂಡರೆ ಪ್ರತಿ ತಿಂಗಳು ನಿಮಗೆ 12 ಸಾವಿರ ರೂಪಾಯಿ ಪಿಂಚಣಿ ಸಿಗುತ್ತೆ.ಸರಳ ಪಿಂಚಣಿ ಯೋಜನೆಯು ತಕ್ಷಣದ ವರ್ಷಾಶನ ಯೋಜನೆಯಾಗಿದೆ, ಅಂದರೆ, ನೀವು ಪಾಲಿಸಿಯನ್ನು ತೆಗೆದುಕೊಂಡ ಕ್ಷಣದಿಂದ ನಿಮಗೆ ಪಿಂಚಣಿ ಪ್ರಾರಂಭವಾಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಂಡ ನಂತರ, ಪಿಂಚಣಿ ಪ್ರಾರಂಭವಾದಾಗ, ಇಡೀ ಜೀವನದುದ್ದಕ್ಕೂ ಅದೇ ಪಿಂಚಣಿ ಲಭ್ಯವಿರುತ್ತದೆ.ನಿಮ್ಮ ಹೂಡಿಕೆಯ ಮೊತ್ತದ ಆಧಾರದ ಮೇಲೆ ನಿವೃತ್ತಿಯ ನಂತರ ನೀವು ಮಾಸಿಕ ಪಿಂಚಣಿಯನ್ನು ಪಡೆದು ಆರಾಮದಾಯಕ ನಿವೃತ್ತಿಯ ಬದುಕನ್ನು ಸಾಗಿಸಬಹುದು. 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ.

ಪಾಲಿಸಿದಾರರು ತಮ್ಮ ಅನುಕೂಲ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.ಈ ಪಾಲಿಸಿಯಲ್ಲಿ ನೀವು 10 ಲಕ್ಷ ರೂ ಪ್ರೀಮಿಯಂ(Premium) ಅನ್ನು ಠೇವಣಿ(deposit) ಮಾಡಿದರೆ, ನೀವು ವಾರ್ಷಿಕವಾಗಿ 50,250 ರೂ.ಗಳ ಜೀವಿತಾವಧಿಯ ಪಿಂಚಣಿ ಪಡೆಯುತ್ತೀರಿ. ಹೀಗಾಗಿ ನೀವು ಪಾವತಿಸುವ ಮೊತ್ತವನ್ನು ಆಧರಿಸಿ ನಿಮ್ಮ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.ಈ ಪಾಲಿಸಿಯು ಕನಿಷ್ಟ ಪಿಂಚಣಿ ರೂ.12 ಸಾವಿರದ ವೈಶಿಷ್ಟ್ಯವನ್ನು ಹೊಂದಿದೆ. ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ. LIC ಸರಳ್ ಪಿಂಚಣಿ ಯೋಜನೆಯಲ್ಲಿ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಯೋಜನೆ ಪ್ರಾರಂಭವಾದ ಆರು ತಿಂಗಳ ನಂತರ ಹೂಡಿಕೆದಾರರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.ನಿಮಗೆ ಗಂಭೀರ ಕಾಯಿಲೆಯಿದ್ದರೆ ಮತ್ತು ಚಿಕಿತ್ಸೆಗೆ ಹಣದ ಅಗತ್ಯವಿದ್ದರೆ, ಸರಳ ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡಿದ ಹಣವನ್ನು ನೀವು ಹಿಂಪಡೆಯಬಹುದು. ನಿಮಗೆ ಗಂಭೀರ ಕಾಯಿಲೆಗಳ ಪಟ್ಟಿಯನ್ನು ನೀಡಲಾಗುತ್ತದೆ, ಇದಕ್ಕಾಗಿ ನೀವು ಹಣವನ್ನು ಹಿಂತೆಗೆದುಕೊಳ್ಳಬಹುದು. ಪಾಲಿಸಿಯನ್ನು ಸರೆಂಡರ್ ಮಾಡಿದಾಗ, ಮೂಲ ಬೆಲೆಯ 95% ಮರುಪಾವತಿಸಲಾಗುತ್ತದೆ.

Related News

spot_img

Revenue Alerts

spot_img

News

spot_img