24.6 C
Bengaluru
Wednesday, December 18, 2024

GDP Growth:ಶೇ 7.3ರಷ್ಟು GDP ಪ್ರಗತಿ ನಿರೀಕ್ಷೆ,NSO

ನವದೆಹಲಿ;ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮುಂಗಡ ಅಂದಾಜು ವರದಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 7.3% ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಈ ಬೆಳವಣಿಗೆಯೂ ಹಿಂದಿನ ಹಣಕಾಸು ವರ್ಷದ ಮಟ್ಟವನ್ನು (ಶೇ.7.2) ಮೀರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯವು ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ. 2022-23ನೇ ಸಾಲಿಗಿಂತಲೂ ಶೇ 1.3ರಷ್ಟು ಹೆಚ್ಚಳ ವಾಗಲಿದೆ ಎಂದು ಅಂದಾಜಿಸಿದೆ.2023-24ರ ವರ್ಷದಲ್ಲಿ ಹಾಲಿ ಬೆಲೆಗಳ ಆಧಾರದ ಜಿಡಿಪಿ ಅಥವಾ ನಾಮಿನಲ್ ಜಿಡಿಪಿ(GDP) 296.58 ಲಕ್ಷ ಕೋಟಿ ಇರಲಿದೆ. 2022-23ರ ವರ್ಷದಲ್ಲಿ 272.41 ಲಕ್ಷ ಕೋಟಿ ರೂನಷ್ಟು ನಾಮಿನಲ್ ಜಿಡಿಪಿ ಇದೆ. ಆ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 16.1ರಷ್ಟು ಬೆಳೆದಿತ್ತು. 2023-24ರಲ್ಲಿ ನಾಮಿನಲ್ ಜಿಡಿಪಿ(GDP) ಶೇ. 8.9ರಷ್ಟು ಬೆಳೆಯುವ ಸಾಧ್ಯತೆ ಇದೆ,’ ಎಂದು ಎನ್​ಎಸ್​ಒ(NSO) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟಲಿಜೆನ್ಸ್‌(Global market intaligence) ತಿಂಗಳ ಹಿಂದೆ ತನ್ನ ವರದಿಯಲ್ಲಿ ತಿಳಿಸಿತ್ತು. ಭಾರತದ ಆರ್ಥಿಕತೆಯು ಜಪಾನ್‌ ಆರ್ಥಿಕತೆಯನ್ನೇ ಮೀರಿಸಿ ಮೂರನೇ ಸ್ಥಾನಕ್ಕೇರಲಿದೆ. ಸದ್ಯ ಜಪಾನ್‌(Japan) ಆರ್ಥಿಕತೆಯ ಮೌಲ್ಯವು 4.2 ಲಕ್ಷ ಕೋಟಿ ಡಾಲರ್‌ ಇದ್ದರೆ, ಭಾರತದ ಆರ್ಥಿಕತೆಯ ಮೊತ್ತ 3.5 ಲಕ್ಷ ಕೋಟಿ ಡಾಲರ್‌. ಆದರೆ, 2030ರ ವೇಳೆಗೆ ಭಾರತದ ಆರ್ಥಿಕತೆ ಮೌಲ್ಯವು 7.30 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಲಿದೆ.

Related News

spot_img

Revenue Alerts

spot_img

News

spot_img