25.5 C
Bengaluru
Thursday, December 19, 2024

ತಮ್ಮ ಮೋಸದ ಮಾತಿನಿಂದಲೇ ಪೇಡಾ ತಿನ್ನಿಸುವ ಹುಬ್ಬಳ್ಳಿಯ ಗರಿಮಾ ಹೋಮ್ಸ್ !

ಹುಬ್ಬಳ್ಳಿ-ಧಾರವಾಡ11: ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸುವ ಕಂಪನಿಗಳು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಮೈಕೊಡವಿ ನಿಂತಿವೆ. ಶರವೇಗದಲ್ಲಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ನಗರದಲ್ಲಿ ರಿಯಲ್ ಎಸ್ಟೇಟ್ ದೋಖಾಗಳು ಕಡಿಮೆಯಿಲ್ಲ. ಜನರಿಗೆ ನಯ ಮಾತಿನಿಂದಲೇ ಹೂಡಿಕೆ ಮಾಡಿಸಿಕೊಂಡು ಮೋಸದ ಪೇಡಾ ತಿನ್ನಿಸಿದ ರಿಯಲ್ ಎಸ್ಟೇಟ್ ಕಂಪನಿಯ ವಿರುದ್ಧ ಹುಬ್ಬಳ್ಳಿ – ಧಾರವಾಡ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಡ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದು ಆ ಕಂಪನಿಯ ಪೂರ್ಣ ವಿವರ ಹಾಗೂ ಕೇಸಿನ ವಿವರ ಇಲ್ಲಿ ನೀಡಲಾಗಿದೆ.

ನಮ್ಮ ರಾಜ್ಯದ ರಾಜಧಾನಿಯಂತಯೇ ಇತರ ಜಿಲ್ಲೆಗಳೂ ಸಹ ವಾಣಿಜ್ಯ ನಗರಗಳಾಗಿ ಶರವೇಗದಲ್ಲಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರ. ಈ ವಾಣಿಜ್ಯನಗರಗಳ ಬೆಳವಣಿಗೆಯೊಂದಿಗೆ ಹೋಮ್ಸ್, ಡೆಮಲಪರ್ಸ್, ರಿಯಲ್ ಎಸ್ಟೇಟ್ ಉದ್ಯಮಗಳು ಸಹ ಬೆಳೆದು ನಿಂತಿವೆ. ಜನರ ತಮ್ಮ ಅದಾಯ ಹೆಚ್ಚಾದಂತೆ ವಿಲಾಸಿ ಜೀವನ ಕನಸು ಕಂಡು ಹಣ ಕೂಡಿಟ್ಟು ತಮ್ಮ ಸಂಸಾರಕ್ಕಾಗಿ ಒಂದು ಮನೆ ಮಾಡಿದರೆ ಸಾಕು ಜೀವನ ಸಾರ್ಥಕವಾಗುವುದೆಂಬ ಆಸೆಯಿಂದ ಹಣವನ್ನು ಭೂಮಿ ಮೇಲೆ ಹೂಡಿಕೆ ಮಾಡುತ್ತಾರೆ.

ಗೊತ್ತು ಗುರಿಯಿಲ್ಲದ ಹೋಮ್ಸ್, ಡೆಮಲಪರ್ಸ್, ರಿಯಲ್ ಎಸ್ಟೇಟ್ ಕಂಪನಿಗಳನ್ನು ಸಂಪರ್ಕಿಸಿ ಅವರ ಮಾತುಗಳನ್ನು ನಂಬಿ ಮೋಸಹೋಗಿರುವುದು ಹೊಸತೇನಲ್ಲ, ಇದೇ ರೀತಿಯಾಗಿ ನಮ್ಮ ಪೇಡನಗರಿಯಲ್ಲಿರುವ ಗರಿಮಾ ಹೋಮ್ಸ್ ಅಂಡ್ ಫಾರ್ಮ್ ಹೌಸಸ್ ಲೀ ಕಂಪನಿಯವರು ನಗರದ ಕೃಷ್ಣನಗರದ ವಾಸಿಯಾದ ಶ್ರೀ.ಚೆನ್ನಬಸಯ್ಯ ಹಿರೇಮಠ್ ಎಂಬುವವರಿಗೆ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೇ ಒಳ್ಳೆಯ ಲಾಭಾಂಶ ಬರುತ್ತದೆ, ಹೂಡಿಕೆ ಮಾಡಿದ ಹಣವು ದ್ವೀಗುಣ ಗೊಳ್ಳುತ್ತದೆ.

ಒಂದು ವೇಳೆ ಪಾಲಿಸಿಗಳು ಮ್ಯೆಚುರಿಟಿ ಆದ ನಂತರ ಹಣದ ಬದಲಾಗಿ ಹುಬ್ಬಳ್ಳಿ-ಧಾರವಾಡ ನಗರ ಅಥಾವಾ ಹೊರ ವಲಯದಲ್ಲಿ ಸೈಟ್ ಗಳನ್ನು ಬೇಕಾದರೂ ಕೊಡುತ್ತೇವೆ ಎಂದು ನಂಬಿಸಿ ಅವರಿಂದ 3,75,000/- ರೂ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹೂಡಿಕೆ ಮಾಡಿದ ಹಣವನ್ನು ಸಹ ನೀಡದೆ ನಗರದ ವರವಲಯದಲ್ಲಿ ಸೈಟ್ ಗಳನ್ನು ಸಹ ನೀಡದೇ ರುಚಿಯಾದ ಮಾತುಗಳಿಂದಲೇ ಪೇಡ ತಿನ್ನಿಸಿದ್ದಾರೆ. ಪೆಚ್ಚುಮೋರೆಹಾಕಿ ಕೊಂಡು ಕುಳಿತುಕೊಳ್ಳುವಂತೆ ಮಾಡಿರುವುದರಿಂದ ಗರಿಮಾ ಹೋಮ್ಸ್ ಅಂಡ್ ಫಾರ್ಮ್ ಹೌಸಸ್ ಲೀ ಸಂಸ್ಥೆಯ ಹೀರೆಮಠ್ ಆರ್.ಜಿ, ಚೆಕ್ಕಲಬಿ, ಸುನೀತಾ ಹೋಸಪೇಟ್ ರವರ ವಿರುದ್ಧ ನಗರದ ಹುಬ್ಬಳ್ಳಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಂಖ್ಯೆ:- 85/2018 U/S 406, 420 IPC AND U/S 09 KPID ACT-2004 ರಿತ್ಯಾ ದೂರುದಾಖಲಾಗಿದೆ.

ಹೀರೇಮಠ್ ನಂತೆ 560 ಕ್ಕಿಂತಲೂ ಹೆಚ್ಚು ಮಂದಿಗೆ ನಾಮ ಹಾಕಿರುವ ಕಾರಣ ಈ ಪ್ರಕರಣದ ಗಂಭೀರತೆ ಅರಿತು ಪ್ರಕರಣವನ್ನು 2018 ರಲ್ಲಿ ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ ನಯ ಮಾತಿನಿಂದಲೇ ಹೂಡಿಕೆ ಮಾಡಿಸಿಕೊಂಡು ಜನರಿಗೆ ಮೋಸ ಮಾಡಿರುವ ಈ ಗರೀಮಾ ಹೋಮ್ಸ್ ನ ಮುಖ್ಯಸ್ಥರಾದ ಹೀರೇಮಠ್ ಮತ್ತು ಸುನಿತಾ ಇಬ್ಬರೂ ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ. ಇವರ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.

ಇದೇ ರೀತಿ ಅನೇಕರು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಹೂಡಿಕೆ ಮಾಡಿಸಿಕೊಂಡು ದೋಖಾ ಮಾಡುತ್ತಾರೆ. ಇಂತಹ ದೋಖಾ ಕಂಪನಿಗಳ ಪೂರ್ವ ಪರ ನೋಡದೇ ಹೂಡಿಕೆ ಮಾಡಿದರೆ ಮೋಸ ಹೋಗುವುದು ಗ್ಯಾರೆಂಟಿ. ಹೀಗಾಗಿ ಇಂತಹ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಹೂಡಿಕೆ ಮಾಡುವ ಮುನ್ನ ಕಂಪನಿ ಮಾಲೀಕರು ಅವರ ಹಿನ್ನೆಲೆ ಬಗ್ಗೆ ಅರಿಯುವುದು ಸೂಕ್ತ. ಇಲ್ಲದಿದ್ದರೆ ಕಷ್ಟ ಪಟ್ಟು ದುಡಿದ ಹಣ ಕಳೆದುಕೊಳ್ಳಬೇಕಾದೀತು ಎಚ್ಚರ!

Related News

spot_img

Revenue Alerts

spot_img

News

spot_img