21.5 C
Bengaluru
Monday, December 23, 2024

ಗಂಗಾ ವಿಲಾಸ್ ಕ್ರೂಸ್ ತೆಲುವ ಅರಮನೆಯ ಟೂರ್ ಪ್ಯಾಕೇಜ್ ಡಿಟೇಲ್!

ವಾರಣಾಸಿ, ಜ. 16: ಅದು ನದಿಯಲ್ಲಿ ತೇಲುವ ಐಶರಾಮಿ ಅರಮನೆ. ಒಮ್ಮೆ ಚಾಲ್ತಿಯಾದರೆ ಐದು ರಾಜ್ಯಗಳಿಗೆ ಸಂಚರಿಸಲಿದೆ. ಬರೋಬ್ಬರಿ 3200 ಕಿ.ಮೀ. ಐಶರಾಮಿ ಅರಮನೆಯಲ್ಲಿದ್ದುಕೊಂಡೇ ನೋಡಬಹುದು!

ಜ. 13 ರಂದು ಪ್ರಧಾನಿ ನರೇಂದ್ರಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಚಾಲನೆ ನೀಡಿದರು. ಗಂಗಾ ವಿಲಾಸ್ ಕ್ರೂಸ್ ಹೆಸರಿನ ಈ ಕ್ರೂಸ್ ಭಾರತ ಹಾಗೂ ಭಾಂಗ್ಲಾ ದೇಶಗಳ ನಡುವಿನ ಐದು ರಾಜ್ಯಗಳಲ್ಲಿ ಸಂಚರಿಸಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ವಿಶ್ವದ ಅತಿ ಉದ್ದದ ವಿಲಾಸಿ ಕ್ರೂಸ್ ಒಟ್ಟು 3,200 ಕಿಲೋ ಮೀಟರ್ ಗಳಷ್ಟು ದೂರವನ್ನು ಸಂಚರಿಸಲಿದೆ. ಇದನ್ನು ಜನವರಿ 13 ರಂದು ಅಧಿಕೃತವಾಗಿ ಫ್ಲ್ಯಾಗ್ ಮಾಡಲಾಗಿದ್ದು, ಇದೇ ವರ್ಷದ ಮಾರ್ಚ್ 01 ರಂದು ಅಸ್ಸಾಂನ ರಾಜಧಾನಿ ದಿಬ್ರುಗಡ್ ತಲುಪಲಿದೆ.

ಐಷಾರಾಮಿ ಮೂರು-ಡೆಕ್ ಕ್ರೂಸ್, 18 ಸೂಟ್ ಗಳಲ್ಲಿ 36 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಇದು ಉತ್ತರ ಪ್ರದೇಶದ ವಾರಾಣಾಸಿಯಿಂದ ಅಸ್ಸಾಂನ ದಿಬ್ರುಗಡ್ ಗೆ ಸುಂದರ ಬನ್ಸ್ ಮತ್ತು ಬಾಂಗ್ಲಾದೇಶದ ಮೂಲಕ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸಲಿದೆ.

ಗಂಗಾವಿಲಾಸ್ ಕ್ರೂಸ್ ಚಲಿಸುವ ಮಾರ್ಗ ಮತ್ತು ಪ್ರಯಾಣದ ಅವಧಿ:- ಈ ವಿಹಾರವು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂನ ಮೂರು ಪ್ರಮುಖ ನದಿಗಳಾದ ಗಂಗಾ, ಮೇಘನ ಮತ್ತು ಬ್ರಹ್ಮಪುತ್ರ ನದಿಗಳು ಸೇರಿದಂತೆ 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಈ ಕ್ರೂಸ್ ಪಶ್ಚಿಮ ಬಂಗಾಳದ ಮೂಲಕ ಪ್ರಮಾಣಿಸುವಾಗ ಭಾಗೀರಥಿ, ಹೂಗ್ಲಿ. ಬಿಡ್ಯಾವತಿ, ಮಲತಾ ಮತ್ತು ಸುಂದರಬನ್ಸ್ ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಇದು ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರುವ ಮೊದಲು ಬಾಂಗ್ಲಾದೇಶದ ಮೇಘನಾ, ಪದ್ಮಾ ಮತ್ತು ಜಮುನಾ ನದಿಗಳ ಮೂಲಕ ಸಂಚರಿಸುತ್ತದೆ. ಪ್ರಯಾಣದ ಅವಧಿ 51 ದಿನಗಳಾಗಿದ್ದು ಈ 51 ದಿನಗಳ ಅವಧಿಯಲ್ಲಿ ಪ್ರವಾಸಿಗರು ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರಿಯ ಉದ್ಯಾನಗಳು, ಘಾಟ್ ಗಳು ಮತ್ತು ಪ್ರಮುಖ ನಗರಗಳಾದ ಬಿಹಾರ, ಜಾರ್ಖಂಡ್ ನ ಸಾಹಿಬ್ ಗಂಜ್, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿ ಸೇರಿದಂತೆ 50 ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ.

ಪಿಐಬಿ ಬಿಡುಗಡೆಯ ಪ್ರಕಾರ ಈ ಕ್ರೂಸ್ ನ ಪ್ರವಾಸವನ್ನು ವಿವಿಧ ಐತಿಹಾಸಿಕ, ಸಾಂಸ್ಕ್ರತಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ನಿಲುಗಡೆಯೊಂದಿಗೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಪಂರೆಯನ್ನು ಪ್ರದರ್ಶಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕ್ರೂಸ್ ನ ಮೊದಲ ನಿಲುಗಡೆ ವಾರಣಾಸಿಯಲ್ಲಿ ಪ್ರಸಿದ್ಧ ಗಂಗಾ ಆರತಿಯಲ್ಲಿ ಪ್ರಾರಂಭವಾಗಿ ನಂತರ ಇದು ಬೌದ್ದಧರ್ಮದ ಅತ್ಯಂತ ಪವಿತ್ರ ಸ್ಥಳವಾದ ಸಾರಾನಾಥದಲ್ಲಿ ನಿಲುತ್ತದೆ. ನಂತರ ಇದು ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಮಜುಲಿ, ಅತಿ ದೊಡ್ಡ ನದಿ ದ್ವೀಪ, ಅತೀ ದೊಡ್ಡ ನದಿ ಮುಖಜ ಭೂಮಿ ಮತ್ತು ಅಸ್ಸಾಂನ ವೈಷ್ಣವ ಸಂಸ್ಕೃತಿಯ ಕೇಂದ್ರವನ್ನು ಸಹ ಒಳಗೊಂಡಿದೆ.

ಪ್ರವಾಸಿಗರು ಬಿಹಾರ ಸ್ಕೂಲ್ ಆಫ್ ಯೋಗ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಬಹುದಾಗಿದೆ. ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ಶ್ರೀಮಂತ ಭಾರತೀಯ ಪರಂಪರೆಯನ್ನು ನೆನಯಲು ಈ ಪ್ರವಾಸ ಸಾಕ್ಷಿಯಾಗಲಿದೆ. ಈ ಕ್ರೂಸ್ ರಾಐಲ್ ಬೆಂಗಾಲ್ ಟೈಗರ್ಸ್ಗೆ ಹೆಸರುವಾಸಿಯಾದ ಬಂಗಾಳ ಕೊಲ್ಲಿ ಡೆಲ್ಟಾದಲ್ಲಿರುವ ಸುಂದರ್ ಬನ್ಸ್ ನ ಜೀವ-ವೈವಿಧ್ಯ- ಸಮೃದ್ದ ವಿಶ್ವ ಪರಂಪರೆಯ ತಾಣಗಳು ಮತ್ತು ಒಂದು ಕೊಂಬಿನ ಘೇಂಡಾಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕವೂ ಪ್ರಯಾಣಿಸಲಿದೆ.

ಗಂಗಾ ವಿಲಾಸ್ ಕ್ರೂಸ್ ಟಿಕೆಟ್ ಬೆಲೆ- ಗಂಗಾ ವಿಲಾಸ್ ಕ್ರೂಸ್ ನಲ್ಲಿ ಪ್ರಯಾಣಿಸಲು ಇಚ್ಚಿಸುವವರು ‘Antara Luxury River Cruises’ ವೈಬ್ ಸೈಟ್ ನಲ್ಲಿ ಖರೀದಿಸಬಹುದ್ದಾಗಿದ್ದು ಹೆಚ್ಚುವರಿಯಾಗಿ ವಿಹಾರ , ಪ್ರೇಕ್ಷಣೀಯ ಸ್ಥಳಗಳು ವೀಕ್ಷಣೆ ಮತ್ತು ಮನರಂಜನೆಯೊಂದಿಗೆ ಎಲ್ಲಾವನ್ನೂ ಒಳಗೊಂಡ ಪ್ಯಾಕೇಜ್ ಗೆ ಪ್ರತಿ ರಾತ್ರಿಗೆ ಒಬ್ಬರಿಗೆ 24,000/- ರೂ ತಗಲುತ್ತದೆ.

Related News

spot_img

Revenue Alerts

spot_img

News

spot_img