ಬೆಂಗಳೂರು: ಬಿಎಂಟಿಸಿ ಗಾಂಧಿ ಜಯಂತಿ ದಿನ ತನ್ನ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. ರಿಯಾಯಿತಿ ದರದಲ್ಲಿ ಶುಚಿ, ರುಚಿಯಾದ ಊಟ-ಉಪಹಾರ ಒದಗಿಸುವ ಗಾಂಧಿ ಪಾಯಿಂಟ್ ಕ್ಯಾಂಟಿನ್ ಆರಂಭಿಸಲಾಗಿದೆ.ಸಾರಿಗೆ ಸಿಬ್ಬಂದಿಗೆ ಗುಣಮಟ್ಟದ ಊಟ, ತಿಂಡಿ ರಿಯಾಯಿತಿ ಒದಗಿಸುವುದಕ್ಕಾಗಿ ಬಿಎಂಟಿಸಿಯ 4ನೇ ಘಟಕದಲ್ಲಿ ಆರಂಭಿಸಲಾದ ಗಾಂಧಿ ಪಾಯಿಂಟ್ ಕ್ಯಾಂಟೀನ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಈಗಾಗಲೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಕೇಂದ್ರ ಭಾಗದ ಲ್ಲಿರುವ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವುದ ರಿಂದ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಅನುಕೂಲ ಆಗಲಿದೆ.ಸಿಎಂ ಸಿದ್ದರಾ ಮಯ್ಯ ಅವರು ಸಾರಿಗೆ ಸಿಬ್ಬಂದಿಗೆ ಗುಣಮಟ್ಟದ ತಿಂಡಿ, ಊಟ ಒದಗಿಸಲು ಕ್ಯಾಂಟೀನ್ ತೆರೆಯುವುದಾಗಿ ಹೇಳಿದ್ದರು. ಆ ಪ್ರಕಾರ ಗಾಂಧಿ ಪಾಯಿಂಟ್ ಕ್ಯಾಂಟೀನ್ ಆರಂಭಿಸಲಾಗಿದೆ ಎಂದರು. ಈ ವೇಳೆ ಕೀರ್ತಿಚಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ, ಬಿಎಂಟಿಸಿ ದಕ್ಷಿಣ ವಿಭಾಗ, ರವೀಂದ್ರ ಘಟಕ ವ್ಯವಸ್ಥಾಪಕರು, ಜಯನಗರ ಘಟಕ -4 ಹಾಗೂ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.