#Fraud #customers #e-commerce sites #cyber #arrested
ಬೆಂಗಳೂರು;ಇ-ಕಾಮರ್ಸ್‌ನಲ್ಲಿ ಗ್ರಾಹಕರ ಡೇಟಾ ಕದ್ದು ನಕಲಿ ವಸ್ತುಗಳನ್ನು ಕಳುಹಿಸಿ ಮೋಸ ಮಾಡುತ್ತಿದ್ದ ಅಂತಾರಾಜ್ಯದ 21 ಆರೋಪಿಗಳನ್ನು ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಮತ್ತು 19.45 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ. ಇ-ಕಾಮರ್ಸ್ ಆ್ಯಪ್ ಗಳಾದ ಫಿಪ್‌ಕಾರ್ಟ್, ಅಮೆಜಾನ್, ಮಿಶೋಗಳಲ್ಲಿ ಆರ್ಡರ್ ಮಾಡುತ್ತಿದ್ದ ಡೇಟಾ ಕದ್ದು ಆರೋಪಿಗಳು ದುರ್ಬಳಕೆ ಮಾಡಿದ್ದರು. ಕ್ಯಾಪ್ ಆನ್ ಡೆಲಿವರಿ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ನಕಲಿ ವಸ್ತು ಕೊಟ್ಟು ಮೋಸ ಮಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.₹ 7.50 ಲಕ್ಷ ನಗದು, 11 ಮೊಬೈಲ್, 3 ಲ್ಯಾಪ್‌ಟಾಪ್ ಹಾಗೂ ಹಾರ್ಡ್‌ಡಿಸ್ಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಮುಂಬೈ ಮೂಲದ ಆರೋಪಿಗಳು ಕ್ಯಾಶ್ ಅಂಡ್ ಪಡೆಯ ಡೆಲಿವರಿ ಆರ್ಡರ್ ಮಾಡುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಬುಕಿಂಗ್ ಮಾಡಿದ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನು ನಿಂಬೂಸ್ ಪೋಸ್, ಎಕ್ಸ್‌ಪ್ರೆಸ್‌ಬಿ, ಷಡೋಪಾಕ್ಸ್, ಬ್ಲೂಡಾರ್ಟ್, ಒನ್‌ಡೇ ಕೊರಿಯ ಹಾಗೂ ಇತರೆ ಕಡಿವ ಕೊರಿಯರ್ ಸರ್ವೀಸ್‌ಗಳ ಮೂಲಕ ಕಳುಹಿಸುತ್ತಿದ್ದರು. ಸಾಮಾನ್ಯವಾಗಿ ಆನ್ ಲೈನ್‌ನಲ್ಲಿ ವಸ್ತುಗಳ ಆರ್ಡರ್ ಮಾಡಿದ ಎರಡೂರು ದಿನಗಳ ಬಳಿಕ ಗ್ರಾಹಕರ ಗಂಭಿ ಕೈಗೆ ವಸ್ತುಗಳು ಸೇರುತ್ತವೆ. ಆದರೆ, ಆರೋಪಿಗಳು ಅದಕ್ಕೂ ಮೊದಲೇ ಗ್ರಾಹಕರಿಗೆ ಸಲ್ಲಿಸ ಕೊರಿಯರ್ ಮೂಲಕ ವಸ್ತುಗಳನ್ನು ಕಳುಹಿಸಿ ನಗದು ಪಡೆಯುತ್ತಿದ್ದರು.ಆರೋಪಿಗಳಿವರು ಮಾಡಿದ್ದಾರೆ. ಮುಂಬೈನ ಅಭಿಷೇಕ್ ಗುಪ್ತಾ, ಆಶಿಷ್ ತಲಿವಿಯಾ ಸೂರತ್‌ನ ಮಿಲನ್, ಗೌತಮ್ ಪನಸೂರ್ಯ, ಪಾರ್ತ್ ತಲಿವಿಯಾ, ವಾಗ್ಗೇಯಾ ಹರ್ಷ, ಅಕ್ಷಯ್, ದರ್ಶಿತ್, ರಾಹುಲ್, ವಾಗ್ಗೇಯಾ ಕೆಯೂ, ಬ್ರಿಜೇಶ್ ಸೋರ್ಲಾ, ಗೌರವ್ ಜಗದೀಶ್ ಬಾಯಿ, ರೇಖಾಬಿನ್ ರತಿ ಬಾಯಿ, ವಿವೇಕ್, ತಲವಿಯಾ ಭೂಮಿತಾ, ಪನ್‌ಸೂರ್ಯ ಉತ್ತಮ್, ನಿಕುಂಜಾ ಮತ್ತು ಭೂಪಾಲ್‌ನ ಮೊದ್ ಸಾಕಿ ಅನ್ಸಾರಿ, ಅಂಕಿತ್ ವಿಶ್ವಕುಮಾರ್, ಅಂಕಿತಾ ವಿಶುಕುಮಾರ್, ಶುಭಂ ವರ್ಮಾ ಬಂಧಿತರು.