ರಾಜಧಾನಿ ಬೆಂಗಳೂರಲ್ಲಿ ಮನೆ, ನಿವೇಶನ, ಪ್ಲಾಟ್ ಮಾಡಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಕಾರ್ಯಗತ ಮಾಡಲು ಹೋದಾಗ ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ ನಾಮ ಹಾಕುವ ಅನೇಕ ವಂಚಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ಹೂಡಿಕೆ ಮಾಡಿ ಅನೇಕ ಮಂದಿ ಮೋಸ ಹೋಗಿ ಬೀದಿಗೆ ಬಿದ್ದಿದ್ದಾರೆ. ಅಂತಹ ದೋಖಾ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಜನರಿಗೆ ಮೋಸ ಮಾಡಿರುವ ಕಂಪನಿಗಳ ಬಗ್ಗೆ ಸಮಗ್ರಮಾಹಿತಿ ನೀಡಿ ಜಾಗೃತಿಗೊಳಿಸುವ ಸಣ್ಣ ಪ್ರಯತ್ನ ರೆವಿನ್ಯೂ ಫ್ಯಾಕ್ಟ್ ವೆಬ್ ತಾಣ ಮಾಡುತ್ತಿದೆ. ರಾಜ್ಯದ ಹಾಗೂ ರಾಜಧಾನಿಯಲ್ಲಿ ಈಗಾಗಲೇ ಜನರಿಗೆ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ದಾಖಲಾಗಿರುವ ಪ್ರಕರಣಗಳ ಸಮೇತ ಇಲ್ಲಿ ವಿವರ ನೀಡಲಾಗುತ್ತಿದೆ.
ಬೆಂಗಳೂರಿನ ಫೋಸ್ಟರ್ ಫಿನ್ ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದೆ. ಬೆಂಗಳೂರಿನ ಪಿಲ್ಲಣ್ಣ ಗಾರ್ಡನ್ ನಲ್ಲಿರುವ ಪೋಸ್ಟರ್ ಫಿನ್ ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ವಿರುದ್ಧ ಫುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ 2015 ರಲ್ಲಿ ಸರಣಿ ದೂರುಗಳು ದಾಖಲಾಗಿವೆ. ಫೊಸ್ಟರ್ ಫಿನ್ ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ಅಕ್ರಮದ ಬಗ್ಗೆ ಸಿಸಿಬಿ ಪೊಲೀಸರು ಹತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ವ್ಯಕ್ತಿಯೊಬ್ಬರಿಗೆ 89 ಲಕ್ಷ ರೂ. ವಂಚನೆ ಮಾಡಿದ ಸಂಬಂಧ ಫೊಸ್ಟರ್ ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥರಾದ ಮಹಮದ್ ಇದ್ರೀಸ್, ಮಹಮದ್ ಹಮೀರ್, ಕುಶಾಲಪ್ಪ, ಆಂಟನ್ ಫರ್ನಾಂಡೀಸ್ ಅವರನ್ನು ಬಂಧಿಸಿಲಾಗಿತ್ತು. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದರು. ಇವರ ವಿರುದ್ಧ ಸಿಸಿಬಿ ಪೊಲೀಸರು ಹತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ 2015 ರಲ್ಲಿ 12/2015, 28/2015, 29/2015, 30/2015, 31/2015, ಹದಿಮೂರನ್ನೂ ಹೆಚ್ಚು ಕ್ರಿಮಿನಲ್ ಕೇಸುಗಳನ್ನು ದಾಖಲಿಸಲಾಗಿದೆ. ಬಹುತೇk ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಫೋಸ್ಟರ್ ಫಿನ್ ಕ್ಯಾಪಿಟನಲ್ ಮ್ಯಾನೇಜ್ ಮೆಂಟ್ ನಲ್ಲಿ ಸಾರ್ವಜನಿಕರು ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.