ಮೈಸೂರು :ಮೈಸೂರಿನ ತಿಲಕ್ ನಗರ ಕಚೇರಿಯಲ್ಲಿ 7,000 ರೂಪಾಯಿ ಲಂಚ(Bribe) ಪಡೆದ ಆಹಾರ ಸುರಕ್ಷತಾ ಅಧಿಕಾರಿಯನ್ನು ಲೋಕಾಯುಕ್ತ(Lokayukta) ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಲೋಕೇಶ್ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತಾ ಅಧಿಕಾರಿ,7 ಸಾವಿರ ರೂಪಾಯಿ ಲಂಚಕ್ಕೆ ನಂಜನಗೂಡಿನ ರಘು ಎಂಬುವವರ ಬಳಿ ಬೇಡಿಕೆ ಇಟ್ಟಿದ್ದರು.7 ಸಾವಿರ ರೂಪಾಯಿ ಗೂಗಲ್ ಪೇ ಮೂಲಕ ರಘು ವರ್ಗಾವಣೆ ಮಾಡಿಸಿಕೊಂಡಿದ್ದರು,ಖಚಿತ ಮಾಹಿತಿ ಮೇರೆಗೆ ಇದೇ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.2015ರಲ್ಲೂ ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಮತ್ತೆ ಲಂಚ ಪಡೆದು ಲೋಕೇಶ್ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆಹಾರ ಸುರಕ್ಷತಾ ಅಧಿಕಾರಿ
by RF Desk