20 C
Bengaluru
Tuesday, July 9, 2024

ಮೊಬೈಲ್‍ಗೆ ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಸಂದೇಶ -ತುರ್ತು ಎಚ್ಚರಿಕೆ ವ್ಯವಸ್ಥೆ

ಭಾರತ ಸರ್ಕಾರ ಹಲವಾರು ಮೊಬೈಲ್ ಬಳಕೆದಾರರ ಮೊಬೈಲ್ ಗಳಿಗೆ ತುರ್ತು ಧ್ವನಿಯೊಂದಿಗೆ ಸಂದೇಶವೊಂದನ್ನು ಕಳುಹಿಸಿದೆ.ಈ ಮೊದಲು ಕಳುಹಿಸಲಾಗಿದ್ದ ಸಂದೇಶದಲ್ಲಿ ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ಧದೊಂದಿಗೆ ಸಂದೇಶ ಫ್ಲ್ಯಾಶ್ ಆಗಲಿದೆ. ಈ ಮೊದಲು ಕಳುಹಿಸಲಾಗಿದ್ದ ಸಂದೇಶದಲ್ಲಿ ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ಧದೊಂದಿಗೆ ಸಂದೇಶ ಫ್ಲ್ಯಾಶ್ ಆಗಲಿದೆ. ಬಳಕೆದಾರರು ಓಕೆ ಕೊಡುವವರೆಗೂ ಈ ಶಬ್ಧ ಬರುತ್ತಲೇ ಇರುತ್ತದೆ. ಈ ಮೂಲಕ ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆದರೆ ಇದಕ್ಕೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು..ಎಮರ್ಜೆನ್ಸಿ ಅಲರ್ಟ್‌ ಸೇವೆಯ ಪರೀಕ್ಷಾರ್ಥ ಪ್ರಯೋಗವೂ ಈಗಾಗಲೇ ಹಲವು ದೇಶಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್‌ 12 (ಗುರುವಾರ) ಈ ಪ್ರಯೋಗ ನಡೆಯಲಿದೆ. ಭಾರೀ ಶಬ್ಧ ಮತ್ತು ವೈಬ್ರೆಟ್‌ನೊಂದಿಗೆ ಜನರು ಟೆಸ್ಟ್‌ ಎಮರ್ಜೆನ್ಸಿ ಅಲರ್ಟ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಂದಿದೆ.

ಅಲರ್ಟ್ ಸಂದೇಶದಲ್ಲಿ ಏನಿದೆ?

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇದನ್ನು ರವಾನಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ” ಎಂದು ಫ್ಲ್ಯಾಶ್ ಸಂದೇಶದಲ್ಲಿ ಹೇಳಲಾಗಿದೆ.

ಅಲರ್ಟ್ ಸಂದೇಶದ ಪ್ರಯೋಜನ :

ಸುನಾಮಿ, ಅಗ್ನಿ ದುರಂತ ಭೂಕಂಪ, ಸುನಾಮಿ, ಮತ್ತು ಹಠಾತ್ ಪ್ರವಾಹ, ಯುದ್ಧಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಸನ್ನದ್ಧರಾಗಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಸಹಕಾರ ನೀಡಲಿದೆ. ಮುಂದಿನ ದಿನದಲ್ಲಿ ವಿಕೋಪಗಳು ಸಂಭವಿಸಬಹುದಾದ ಸ್ಥಳಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಈ ಫ್ಲ್ಯಾಶ್ ಸಂದೇಶದ ಮೂಲಕ ಎಚ್ಚರಿಸಲಾಗುತ್ತದೆ

 

Related News

spot_img

Revenue Alerts

spot_img

News

spot_img