27.7 C
Bengaluru
Wednesday, July 3, 2024

Fixed Deposit;ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ ನಿಗದಿ

ಇಂದಿನಿಂದ 2024 ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗಿವೆ. 2023 ರಲ್ಲಿ ಇದ್ದಂತಹ ಅನೇಕ ನಿಯಮಗಳು ಬದಲಾಗಲಿವೆ. ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ.ಬ್ಯಾಂಕ್ ಆಫ್ ಬರೋಡಾ(BoB). ಇದಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಸ್ಪೆಕ್ಟ್ರಮ್ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅನುಕೂಲಕರ ಕೊಡುಗೆಗಳನ್ನು ಘೋಷಿಸಿದ್ದವು.ಹೊಸ ವರ್ಷದಲ್ಲಿ ಆರಂಭದಲ್ಲಿ ಇದೀಗ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ದೇಶದ ಪ್ರತಿಷ್ಠಿತ ಐದು ಬ್ಯಾಂಕ್ ಗಳು ತನ್ನ Fixed Deposit Interest ಅನ್ನು ಹೆಚ್ಚಳ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ.

ಬ್ಯಾಂಕ್ ಆಫ್ ಬರೋಡಾ(BoB)

ವರ್ಷ ಆಗಮನದ ಮುಂಚೆಯೇ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. BOBಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 125 (1.25 ಪ್ರತಿಶತ) ಬೇಸಿಸ್ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಶೇ. ಅರ್ಧದಷ್ಟು ಬಡ್ಡಿ ದರವನ್ನು ಎಸ್‌ಬಿಐ(SBI) ಹೆಚ್ಚಿಸಿದ ಬಳಿಕ ಈ ನಿರ್ಧಾರವನ್ನು BOB ಕೈಗೊಂಡಿದೆ. ಹೆಚ್ಚಿದ ಬಡ್ಡಿ ದರ ನಿನ್ನೆಯಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

• ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಡಿಸೆಂಬರ್ 27 ರಿಂದ ಹೊಸ ಬಡ್ಡಿದರಗಳು ಜಾರಿಯಾಗಲಿವೆ.

DCB ಬ್ಯಾಂಕ್

DCB ಬ್ಯಾಂಕ್ 2 ಕೋಟಿಗಿಂತ ಕಡಿಮೆ ಇರುವ ನಿಶ್ಚಿತ ಠೇವಣಿಗಳ ಬಡ್ಡಿ ದರಗಳನ್ನು ವಿವಿಧ ಅವಧಿಗಳಲ್ಲಿ ಬದಲಾಯಿಸಿದೆ. ಈ ಪರಿಷ್ಕೃತ ದರಗಳು ಡಿಸೆಂಬರ್ 13 ರಂದು ಜಾರಿಗೆ ಬಂದವು. ಬದಲಾವಣೆಗಳನ್ನು ಅನುಸರಿಸಿ, ಸಾಮಾನ್ಯ ಗ್ರಾಹಕರು ಈಗ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಪಕ್ವವಾಗುವ ಸ್ಥಿರ ಠೇವಣಿಗಳ ಮೇಲೆ ಶೇಕಡಾ 3.75 ರಿಂದ 8 ರಷ್ಟು ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ, ಬ್ಯಾಂಕ್ ಅದೇ ಸಮಯದ ಚೌಕಟ್ಟಿನಲ್ಲಿ ಶೇಕಡಾ 4.25 ರಿಂದ 8.60 ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ.

ಫೆಡರಲ್ ಬ್ಯಾಂಕ್:Federal Bank

ಫೆಡರಲ್ ಬ್ಯಾಂಕ್ 500 ದಿನಗಳ ಅವಧಿಗೆ ಹೂಡಿಕೆ ಮಾಡಿರುವ ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದೆ. ಡಿಸೆಂಬರ್ 5 ರಿಂದ ಹೊಸ ಬಡ್ಡಿದರಗಳು ಜಾರಿಯಾಗಲಿವೆ.

 

Related News

spot_img

Revenue Alerts

spot_img

News

spot_img