22.9 C
Bengaluru
Friday, July 5, 2024

ಪಂಚರಾಜ್ಯ ಚುನಾವಣೆ ಅಕ್ಟೋಬರ್ 8-10ರ ನಡುವೆ ವೇಳಾಪಟ್ಟಿ ಘೋಷಣೆ ಸಾಧ್ಯತೆ

ದೆಹಲಿ;ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್‌ಗಢದಲ್ಲಿ ಶೀಘ್ರವೇ ಚುನಾವಣೆ(Election) ಘೋಷಣೆಯಾಗಲಿದೆ. ಅಕ್ಟೋಬರ್ 8 ಮತ್ತು 10ರ ನಡುವೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ನವೆಂಬರ್ – ಡಿಸೆಂಬರ್(Nov-Dec) ಮೊದಲ ವಾರದೊಳಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಮತ್ತು ಅದೇ ತಿಂಗಳ 10-15 ರ ನಡುವೆ ಫಲಿತಾಂಶ ಪ್ರಕಟಿಸಲಾಗುತ್ತದೆ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಒಂದು ಹಂತದಲ್ಲಿ ಮತ್ತು ಛತ್ತೀಸ್‌ಗಢದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ. ಎನ್ನಲಾಗಿದೆ.ಈ ರಾಜ್ಯಗಳಲ್ಲಿ ಮತದಾನವನ್ನು ನವೆಂಬರ್ ಮಧ್ಯದಿಂದ ಡಿಸೆಂಬರ್ ಮೊದಲ ವಾರದವರೆಗೆ ನಡೆಸಬಹುದು ಎಂದು ಹೇಳಿದೆ. ತೆಲಂಗಾಣ, ರಾಜಸ್ಥಾನ, ಮಿಜೋರಾಂ ಮತ್ತು ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆಯಂತೆ. ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17 ರಂದು ಕೊನೆಗೊಂಡರೆ, ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭೆಗಳ ಅವಧಿಯು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಲ್ಲಿ ಕೊನೆಗೊಳ್ಳಲಿದೆ.ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಕಾರ್ಯತಂತ್ರ ರೂಪಿಸಲು ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಲಿದೆ. ಚುನಾವಣಾ ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಯಾಗುವುದರೊಂದಿಗೆ ಕ್ಷೇತ್ರ ಮಟ್ಟದಲ್ಲಿ ಚುನಾವಣೆ ನಡೆಸುವ ಮೇಲೆ ಹಣಬಲದ ಪ್ರಭಾವ ತಗ್ಗಿಸಲು ಅಗತ್ಯ ತಂತ್ರಗಾರಿಕೆಯನ್ನು ಚುನಾವಣಾ ಆಯೋಗ ಜಾರಿಗೆ ತರಲಿದೆ.

Related News

spot_img

Revenue Alerts

spot_img

News

spot_img