22 C
Bengaluru
Monday, December 23, 2024

ಮೊದಲ ಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯ ಪಡೆʼಯ ಸಭೆ

ಬೆಂಗಳೂರಿನಲ್ಲಿ: ಅವನತಿ ಹೊಂದಿದ ಭೂದೃಶ್ಯಗಳ ಪುನಃಸ್ಥಾಪನೆ
ಕುರಿತಾದ ಕಾರ್ಯಕ್ರಮ,ಮೊದಲ ಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯ ಪಡೆʼಯ ಸಭೆ ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಅವನತಿ ಹೊಂದಿದ ಭೂದೃಶ್ಯಗಳ ಪುನಃಸ್ಥಾಪನೆ ಕುರಿತಾದ ಕಾರ್ಯಕ್ರಮವೂ ಜತೆ ಜತೆಗೆ ನಡೆಯಲಿದ್ದು, ಒಟ್ಟು ಮೂರು ದಿನಗಳ ಕಾರ್ಯಕ್ರಮ ಇದಾಗಿರಲಿದೆ,142ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ; ಅರಣ್ಯ ಪುನಃಸ್ಥಾಪನೆ ಮಾದರಿಗಳನ್ನು ಪ್ರದರ್ಶಿಸಲು ವಿಷಯಾಧಾರಿತ ಸ್ಥಳ ಭೇಟಿಗಳನ್ನು ಆಯೋಜಿಸಲಾಗುವುದು.

ಭಾರತದ ಅಧ್ಯಕ್ಷತೆಯಲ್ಲಿ ಮೊದಲ ʻಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಪಡೆʼ ಸಭೆ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಇದು ದೇಶಾದ್ಯಂತ 50ಕ್ಕೂ ಹೆಚ್ಚು ನಗರಗಳಲ್ಲಿ ವಿವಿಧ ಪ್ರಮುಖ ವಿಷಯಗಳ ಮೇಲೆ ನಡೆಯುತ್ತಿರುವ 200ಕ್ಕೂ ಹೆಚ್ಚು ಕಾರ್ಯಪಡೆ ಸಭೆಗಳ ಭಾಗವಾಗಿದೆ.

ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರಿಚಾ ಶರ್ಮಾ ಅವರು, “ಭಾರತದ ಜಿ 20 ಅಧ್ಯಕ್ಷತೆಯ ಅಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಪಡೆ ಸಭೆಯು ಇಂದಿನ ದಿನದ ತೀವ್ರ ಪರಿಸರ ಒತ್ತಡಗಳು ಮತ್ತು ಹವಾಮಾನ ವಿಷಯಗಳ ಬಗ್ಗೆ ಜಾಗತಿಕ ಸಂವಾದವನ್ನು ಮುನ್ನಡೆಸಲು ಭಾರತಕ್ಕೆ ಉತ್ತಮ ಅವಕಾಶವಾಗಿದೆ,ʼʼ ಎಂದು ಹೇಳಿದರು. “ನಾಳೆಯ ಕಾರ್ಯಪಡೆ ಸಭೆಯು ಅವನತಿ ಹೊಂದಿದ ಭೂದೃಶ್ಯಗಳ ಪುನಃಸ್ಥಾಪನೆ ಕುರಿತ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಭಾರತವು ʻಜೀವವೈವಿಧ್ಯ ಒಪ್ಪಂದʼಕ್ಕೆ ಸಹಿ ಹಾಕಿರುವುದರಿಂದ, ಜೀವವೈವಿಧ್ಯಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಯ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರಲಿವೆʼʼ ಎಂದು ಶ್ರೀಮತಿ ಶರ್ಮಾ ಹೇಳಿದರು. ಜಾಗತಿಕ ಒಟ್ಟು ದೇಶೀಯ ಉತ್ಪನ್ನದಲ್ಲಿ ಜಿ 20 ಶೇ.85ರಷ್ಟು ಪಾಲು ಹೊಂದಿದ್ದರೆ, ಅವುಗಳ ವಾರ್ಷಿಕ ಹಸಿರು ಮನೆ ಅನಿಲ ಹೊರಸೂಸುವಿಕೆಯು ಜಾಗತಿಕ ಒಟ್ಟು ಪ್ರಮಾಣದಲ್ಲಿ ಶೇ.80 ರಷ್ಟಿದೆ ಎಂದು ಅವರು ಹೇಳಿದರು.

ಭೂಮಿಯ ಅವನತಿ ಮತ್ತು ಜೀವವೈವಿಧ್ಯದ ನಷ್ಟ; ಸಮುದ್ರ ಮಾಲಿನ್ಯ, ಮ್ಯಾಂಗ್ರೋವ್ ಮತ್ತು ಹವಳದ ದಿಬ್ಬಗಳ ರಕ್ಷಣೆ; ಸಂಪನ್ಮೂಲದ ಅತಿಯಾದ ಬಳಕೆ ಮತ್ತು ತ್ಯಾಜ್ಯ ವಿಲೇವಾರಿ ಕೊರತೆ – ಇವು ಮೂರು ದಿನಗಳ ಕಾರ್ಯಕ್ರಮದಲ್ಲಿ ಪ್ರಮುಖ ಚರ್ಚಾ ವಿಷಯಗಳಾಗಲಿವೆ.

ಪ್ರತಿ ಕಾರ್ಯಪಡೆ ಸಭೆಯ ಜತೆ ಜತೆಗೇ ವಿಶೇಷವಾದ ಕಾರ್ಯಕ್ರಮವೂ ಆಯೋಜಿತವಾಗಿದೆ. ಈ ವರ್ಷದ ಫೆಬ್ರವರಿ ಮತ್ತು ಜುಲೈ ನಡುವೆ ಗಾಂಧಿನಗರ, ಮುಂಬೈ ಮತ್ತು ಚೆನ್ನೈನಲ್ಲಿ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಇನ್ನೂ ಮೂರು ಕಾರ್ಯಪಡೆ ಸಭೆಗಳನ್ನು ನಡೆಸಲಾಗುವುದು. ಸದಸ್ಯ ರಾಷ್ಟ್ರಗಳ ಪರಿಸರ ಮತ್ತು ಹವಾಮಾನ ಸಚಿವರು ಚೆನ್ನೈನಲ್ಲಿ ನಡೆಯಲಿರುವ ಅಂತಿಮ ಕಾರ್ಯಪಡೆ ಸಭೆಯಲ್ಲಿ ಒಟ್ಟುಗೂಡಲಿದ್ದು, ಎಲ್ಲ ಕಾರ್ಯಪಡೆ ಸಭೆಗಳಲ್ಲಿ ನಡೆಸಲಾದ ಚರ್ಚೆಗಳ ಅಂತಿಮ ಫಲಿತಾಂಶವಾಗಿ, ಇವುಗಳ ಕುರಿತಾದ ಘೋಷಣೆಗಳನ್ನು ಅಂಗೀಕರಿಸಲಿದ್ದಾರೆ.

ಕಲ್ಕೆರೆ ಜೈವಿಕ ಉದ್ಯಾನ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗಳಿಗೆ ವಿಷಯಾಧಾರಿತ ಸ್ಥಳ ಭೇಟಿಗಳನ್ನು ಏರ್ಪಡಿಸಿ, ಈ ಪರಿಸರ ವ್ಯವಸ್ಥೆಗಳಲ್ಲಿ ಅಳವಡಿಸಿಕೊಂಡ ಅರಣ್ಯ ಪುನಃಸ್ಥಾಪನೆ ಮಾದರಿಯನ್ನು ಪ್ರದರ್ಶಿಸಲಾಗುವುದು.

142ಕ್ಕೂ ಹೆಚ್ಚು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಪೈಕಿ 19 ಸದಸ್ಯ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದಿಂದ 96 ಮಂದಿ ಹಾಗೂ 10 ಅತಿಥಿ ರಾಷ್ಟ್ರಗಳಿಂದ 25 ಮಂದಿ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಿಂದ 21 ಪ್ರತಿನಿಧಿಗಳು ಇರಲಿದ್ದಾರೆ.

Related News

spot_img

Revenue Alerts

spot_img

News

spot_img