22.2 C
Bengaluru
Wednesday, January 22, 2025

ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ​ಮ್ಯಾನ್​ ವಿರುದ್ಧ ಎಫ್ ಐ ಆರ್ ದಾಖಲು

#FIR #filed #against #ex-minister #Halappa Achar #gunman;

ಬೆಂಗಳೂರು: ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇರೆಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ​ಮ್ಯಾನ್​ ವಿರುದ್ಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಾಲಪ್ಪ ಆಚಾರ್ ಗನ್ ಮ್ಯಾನ್​ ರಾಘವೇಂದ್ರ ಎಂಬವರು ಮಾಯಕೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಅಂತಾ ಹೇಳಿ ಹೆಚ್.ರಾಜು ನಾಯ್ಕ್ ಅವರಿಗೆ ನಂಬಿಸಿದ್ದಾರೆ., 30 ಕೋಟಿ ವೆಚ್ಚದ ಟೆಂಡರ್​ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದ ರಾಘವೇಂದ್ರ, ರಾಜು ನಾಯ್ಕ್ ಅವರಿಂದ ಅಡ್ವಾನ್ಸ್ ಆಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ಟೆಂಡರ್ ಕೊಡಿಸದೆ ಸತಾಯಿಸ್ತಿದ್ದ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ, ಹಣ ವಾಪಸ್ ಕೇಳಿದ್ದಕ್ಕೆ ಕೇವಲ 4 ಲಕ್ಷ ಅಷ್ಟೇ ನೀಡಿದ್ದಾರೆ. ಇನ್ನುಳಿದ 6 ಲಕ್ಷ ಹಣ ನೀಡದೇ ವಂಚಿಸಿರುವ ಗನ್​ ಮ್ಯಾನ್ ರಾಘವೇಂದ್ರ ವಿರುದ್ಧ ರಾಜು ನಾಯ್ಕ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ ​ಐಆರ್ ದಾಲಿಸಿಕೊಡಿದ್ದಾರೆ.

Related News

spot_img

Revenue Alerts

spot_img

News

spot_img