22.9 C
Bengaluru
Friday, July 5, 2024

ರಿಯಲ್‌ ಎಸ್ಟೇಟ್‌ನಲ್ಲಿ ಎಫ್‌ಡಿಐ: ಎಷ್ಟೆಲ್ಲ ಲಾಭವಿದೆ?

ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ರಿಯಲ್‌ ಎಸ್ಟೇಟ್‌ ಉದ್ಯಮವು ದೇಶದ ಆಂತರಿಕ ಉತ್ಪನ್ನಕ್ಕೆ ಶೇ 13ರಷ್ಟು ಕೊಡುಗೆ ನೀಡುತ್ತದೆ ಮತ್ತು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂರನೇ ಅತಿದೊಡ್ಡ ಉದ್ಯಮವಾಗಿದೆ. 2024-25ರಲ್ಲಿ ಇದು 65,000 ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ. ಐಬಿಇಎಫ್‌ ವರದಿ ಪ್ರಕಾರ, ಅನಿವಾಸಿ ಭಾರತೀಯರ ನೆಚ್ಚಿನ ಹೂಡಿಕೆ ತಾಣಗಳಲ್ಲಿ ಬೆಂಗಳೂರು ಕೂಡ ಮುಂಚೂಣಿಯಲ್ಲಿದೆ.

ಕಳೆದ ಒಂದೂವರೆ ದಶಕದಲ್ಲಿ ಉದ್ಯಮದಲ್ಲಿ ಎಫ್‌ಡಿಐ ನಿಯಮಗಳನ್ನು ಸರ್ಕಾರವು ನಿಧಾನವಾಗಿ ಸಡಿಲಗೊಳಿಸುತ್ತಲೇ ಬಂದಿದೆ. ಪರಿಣಾಮವಾಗಿ ಹೂಡಿಕೆ ಹೆಚ್ಚಾಗಿ ಆರ್ಥಿಕ ಹರವು ವಿಸ್ತರಿಸಿದೆ. ಸದ್ಯ, ಪೂರ್ಣಗೊಂಡ ಟೌನ್‌ಶಿಪ್‌, ಮಾಲ್‌ಗಳು/ಶಾಪಿಂಗ್‌ ಕಾಂಪ್ಲೆಕ್‌್ಾಗಳು ಮತ್ತು ವಹಿವಾಟು ಕೇಂದ್ರಗಳಲ್ಲಿ ಕಾರ್ಯಾಚರಣೆಗಾಗಿ ಶೇ 100ರಷ್ಟು ಎಫ್‌ಡಿಐಗೆ ಅನುಮತಿ ನೀಡಲಾಗಿದೆ. ಆದಾಗ್ಯೂ, ಸಾಂಕ್ರಾಮಿಕ ರೋಗದಿಂದ ಉಂಟಾದ ರಿಯಲ್ ಎಸ್ಟೇಟ್ ಮಾರುಕಟ್ಟೆ ಅವ್ಯವಸ್ಥೆಯನ್ನು ಶಾಂತಗೊಳಿಸಲು ಈ ವಲಯದಲ್ಲಿ ಎಫ್‌ಡಿಐ ಹೆಚ್ಚಿಸುವ ಇನ್ನಷ್ಟು ಅವಕಾಶವನ್ನು ಮುನ್ನೆಲೆಗೆ ತಂದಿದೆ.

ಕಾರ್ಪೊರೇಟೀಕರಣದತ್ತ…
ಸೆಬಿಯು ರಿಯಲ್‌ ಎಸ್ಟೇಟ್‌ ಇನ್ವೆಸ್ಟ್ಮೆಂಟ್‌ ಟ್ರಸ್ಟ್ಗೆ ನೀಡಿರುವ ಅನುಮೋದನೆ ಪ್ರಕಾರ, ಎಲ್ಲ ರೀತಿಯ ಹೂಡಿಕೆದಾರರೂ ಭಾರತದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಬಂಡವಾಳ ತೊಡಗಿಸಲು ಅನುಮತಿಸಿದೆ. ಇದು ಮುಂಬರುವ ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅವಕಾಶಗಳನ್ನು ಸೃಷ್ಟಿಸಲಿದೆ. ಎಫ್‌ಡಿಐ ಮಿತಿ ಹೆಚ್ಚಳದಿಂದಾಗಿ ಕಡಿಮೆ ಬಡ್ಡಿ ದರದಲ್ಲಿ ವಿದೇಶಿ ಆರ್ಥಿಕ ನೆರವು ದೊರೆಯುತ್ತದೆ ಮತ್ತು ನಿಗದಿತ ಸಮಯದೊಳಗೆ ನಿರ್ಮಾಣ ಯೋಜನೆಗಳು ಪೂರ್ಣಗೊಳ್ಳುತ್ತವೆ. ಜೊತೆಗೆ, ರೂಪಾಯಿ ಮೌಲ್ಯ ಹೆಚ್ಚುವುದರಿಂದ ಹಣದುಬ್ಬರ ಮಟ್ಟ ನಿಯಂತ್ರಣದಲ್ಲಿರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯಮವು ಕೆಲವು ಕುಟುಂಬ-ಮಾಲೀಕತ್ವದ ಬದಲಾಗಿ ಹೆಚ್ಚು ವೃತ್ತಿಪರವಾಗಿ ನಿರ್ವಹಿಸುವ ಡೆವಲಪರ್ಗಳ ಕೈಗೆ ಬರುತ್ತದೆ. ಡೆವಲಪರ್‌ಗಳು ಹೆಚ್ಚು ವೃತ್ತಿಪರತೆ ಕಾಯ್ದುಕೊಳ್ಳಲು ಪರಿಣತ ಪ್ರಾಜೆಕ್ಟ್‌ ಮ್ಯಾನೇಜರ್‌ಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ಹೊಂದಿಸಲು ಬಿಲ್ಡರ್‌ಗಳು ಕೇಂದ್ರೀಕೃತ ಪ್ರಕ್ರಿಯೆಯ ಮೊರೆ ಹೋಗಿದ್ದಾರೆ. ಇದರಿಂದ ಕಾರ್ಮಿಕರಿಗೆ ಹೆಚ್ಚು ವೇತನ ಮತ್ತು ಇತರ ಸೌಲಭ್ಯಗಳು ಸಿಗುವಂತಾಗುತ್ತಿದೆ.

ಕೈಗೆಟುಕುವ ದರ, ಉತ್ತಮ ಗುಣಮಟ್ಟ
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ನಾಗರಿಕರು ತಮ್ಮ ಕನಸಿನ ಮನೆಯನ್ನು ಹೊಂದುವುದು ಸಾಧ್ಯವಾಗುತ್ತದೆ. ಬಿಲ್ಟಪ್‌ ಏರಿಯಾ ಕಡಿತವು ಎಫ್‌ಡಿಐ ಆಕರ್ಷಿಸಲು ಸಹಕಾರಿ. ಇದರಿಂದಾಗಿ ಕೈಗೆಟುಕುವ ಮತ್ತು ಉತ್ತಮ-ಗುಣಮಟ್ಟದ ಮನೆಗಳು ಹೆಚ್ಚುತ್ತವೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ದೇಶದಾದ್ಯಂತ 2022ರ ಅಂತ್ಯದೊಳಗೆ 2 ಕೋಟಿ ಕೈಗೆಟಕುವ ಮಾದರಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ನಗರ ಪ್ರದೇಶಗಳ ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ 2030ರ ಹೊತ್ತಿಗೆ ಈ ಮಾದರಿಯ ಇನ್ನೂ ಎರಡೂವರೆ ಕೋಟಿ ಮನೆಗಳಿಗೆ ಬೇಡಿಕೆ ಬರಲಿದೆ. ಈ ಎಲ್ಲ ಕಾರಣಗಳಿಂದ ವಸತಿ ಕ್ಷೇತ್ರವು ಗಮನಾರ್ಹ ಪ್ರಗತಿ ಕಾಣುವ ನಿರೀಕ್ಷೆ ಇದೆ.

ಎಫ್‌ಡಿಐ ಉದಾರೀಕರಣ
ಎಫ್‌ಡಿಐ ನೀತಿಯ ಉದಾರೀಕರಣ ಪ್ರಕ್ರಿಯೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕಾಲ ಸನ್ನಿಹಿತವಾಗಿದೆ. ಪೂರ್ಣಗೊಂಡ ಸ್ವತ್ತುಗಳ ಮೇಲಿನ ನಿಯಂತ್ರಣ ಸಡಿಲಿಸುವುದು ಬಿಲ್ಡರ್‌ಗಳು ಮತ್ತು ಖರೀದಿದಾರರು ಇಬ್ಬರಿಗೂ ಅನುಕೂಲಕರವಾಗುತ್ತದೆ. ತ್ವರಿತ ಅನುಷ್ಠಾನವು ರಿಯಲ್ ಎಸ್ಟೇಟ್ ವಲಯದಲ್ಲಿ ಮಾತ್ರವಲ್ಲದೆ ಸಂಬಂಧಿತ ಎಲ್ಲ ಉದ್ಯಮಗಳಿಗೂ ಲಾಭದಾಯಕವಾಗಿರುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ರಿಯಲ್‌ ಎಸ್ಟೇಟ್‌ ಉದ್ಯಮವು 8 ಶತಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

Related News

spot_img

Revenue Alerts

spot_img

News

spot_img