ಬೆಂಗಳೂರು ಜು. 05:ರಾಜ್ಯ ಸರ್ಕಾರದ 5 ಗ್ಯಾರಂಟಿ (Congress 5 guarantee) ಯೋಜನೆಗಳಲ್ಲಿ ಒಂದಾಗಿದ್ದ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ ಅಕ್ಕಿ ವಿತರಿಸಲು ಅಕ್ಕಿ ಸಿಗದಿರುವ ಕಾರಣ, ಸರ್ಕಾರ ಜನರಿಗೆ 5 ಕೆಜಿ ಅಕ್ಕಿ ,ಫಲಾನುಭವಿಗಳ ಬ್ಯಾಂಕ್ ಖಾತೆಗೆ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನು ಹಾಕುವುದಾಗಿ ಘೋಷಣೆ ಮಾಡಿದ್ದುಇದರಿಂದ ಪಡಿತರ ವಿತರಕರ ಸಂಘ ಅಸಮಾಧಾನಗೊಂಡು ನ್ಯಾಯಬೆಲೆ ಅಂಗಡಿ ಬಂದ್ ಗೆ ಮುಂದಾಗಿದ್ದಾರೆ.
ಜುಲೈ 13ರವರೆಗೈ ಅಕ್ಕಿ ವಿತರಣೆ ಮಾಡದೇ ಇರಲು ಮುಂದಾಗಿದೆ.ಈ ಬಗ್ಗೆ ಮಂಗಳವಾರ ಬೆಂಗಳೂರಿನಲ್ಲಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ ಕೃಷ್ಣಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಖಾತೆಗೆ ಹಣ ಹಾಕುವ ಬದಲು 10 ಕೆ.ಜಿ ಬೇರೆ ಧಾನ್ಯಗಳನ್ನು ನೀಡಿ ಇಲ್ಲವೇ ಖಾತೆಗೆ ಹಣವನ್ನೇ ಹಾಕುವುದಾದರೆ ನಮಗೆ 10 ಕೆ.ಜಿ ಅಕ್ಕಿಯ ಕಮಿಷನ್ ನೀಡಿ ಎನ್ನುವ ಪಟ್ಟು ಹಿಡಿದಿದ್ದಾರೆ.ಜನರಿಗೆ 5 ಕೆಜಿಗೆ ಹಣ ನೀಡಿದರೆ, ನಮಗೆ ನಷ್ಟ ಆಗುತ್ತದೆ,ಎಂದು ನ್ಯಾಯ ಬೆಲೆ ವರ್ತಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.ಜುಲೈ 13ರೊಳಗೆ ಪಡಿತರ ವಿತರಕರ ಸಂಘಟನೆಗಳ ಕರೆದು ಚರ್ಚೆ ಮಾಡಬೇಕು ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದ್ದಾರೆ.