ಬೆಂಗಳೂರು;ರಾಜ್ಯಾದ್ಯಂತ ನಾಳೆ ಒಂದು ದಿನ ಪಡಿತರ ಅಂಗಡಿಗಳು ಬಂದ್ ಆಗಿರಲಿವೆ. ಅನ್ನಭಾಗ್ಯ ಯೋಜನೆಯಡಿ 5KG ಅಕ್ಕಿ ಬದಲಾಗಿ ನೀಡುತ್ತಿರುವ ನೇರ ನಗದು ಸೌಲಭ್ಯ(Direct cash facility) ನಿಲ್ಲಿಸಬೇಕು. ಪಡಿತರ ವಿತರಕರಿಗೆ ಅದಕ್ಕೆ ಮನಾಗಿ ಕಮಿಷನ್(commisssion) ನೀಡಬೇಕು ಎಂದು ಆಗ್ರಹಿಸಿ ನಾಳೆ ಒಂದು ದಿನ ಸಾಂಕೇತಿಕ ಮುಷ್ಕರ (Strike)ನಡೆಸುವುದಾಗಿ ರಾಜ್ಯ ಪಡಿತರ ವಿತರಕರ ಸಂಘ(Ration distrubutor association) ಘೋಷಿಸಿದೆ. 5KG ಅಕ್ಕಿಗೆ ಸಮನಾಗಿ 170 ಹಣಕ್ಕೆ ನಮಗೆ ಬರಬೇಕಾದ 76.50 ಕಮಿಷನ್ ಮೊತ್ತ ತಮಗೆ ನೀಡಬೇಕೆಂದು ಸಂಘ ಒತ್ತಾಯಿಸಿದ್ದು, ಆಹಾರ ಇಲಾಖೆಗೆ ಮನವಿ ಸಲ್ಲಿಸಿದೆ.ಈ ಸಂಬಂಧ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತ ಕನಗವಲ್ಲಿ ಅವರಿಗೆ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿ ಗಳು ಮನವಿ ಸಲ್ಲಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲಿಸುತ್ತಿರು ವುದರಿಂದ ನಮಗೆ ದೊರೆಯಬೇಕಾದ ಕಮೀಷನ್ ಹಣದಿಂದ ವಂಚಿತರಾಗುತ್ತಿ ದ್ದೇವೆ. ಹೀಗಾಗಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ಸರ್ಕಾರಿ ಮತರ ವಿತರಕರ ಸಂಘದ ಅಧ್ಯಕ್ಷ ಜೆ.ಬಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಮಾದಪ್ಪ ಬಿ.ಪಿ ಮತ್ತು ಖಜಾಂಜಿ ರಾಮಯ್ಯ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಮನವಿಯಲ್ಲಿ ಒತ್ತಾಯಿಸಿದ್ದಾರೆ. 5 ಕೆ.ಜಿ.ಯ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಡಿಬಿಟ ಮೂಲಕ ಹಣ ನೀಡುವುದಕ್ಕೆ ನಮ್ಮ ಯಾವುದೇ ತರಕಾರು ಇಲ್ಲ. ಆದರೆ, ತಾವು ಈಗಾಗಲೇ ಆಶ್ವಾಸನೆ ನೀಡಿರುವಂತೆ 5 ಕೆ.ಜಿ. ಅಕ್ಕಿಗೆ ಬದಲಾಗಿ ನೀಡುವ 170 ರು.ಗೆ ನಮಗೆ ಬರಬೇಕಾದ ಕಮಿಷನ್ ಮೊತ್ತ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.