25 C
Bengaluru
Monday, December 23, 2024

ರಾಜ್ಯ ಬಜೆಟ್: ಕರಾವಳಿ ಜನರ ನಿರೀಕ್ಷೆಗಳು ಈ ಬಾರಿಯ ಆಯವ್ಯಯದಲ್ಲಿ ಪೂರೈಕೆಯಾಗುತ್ತಾ..?

ಬೆಂಗಳೂರು, ಫೆ. 10 : ಈ ಬಾರಿಯ ರಾಜ್ಯ ಬಜೆಟ್ ಮೇಲೆ ರೈತರು, ಮೀನುಗಾರರು, ಉದ್ಯಮಿದಾರರು ಸೇರಿದಂತೆ ಸಾರ್ವಜನಿಕರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ. ಈ ವರ್ಷ ರಾಜ್ಯದಲ್ಲಿ ವಿಧಾಸಭಾ ಚುನಾವಣೆ ನಡೆಯಲಿದ್ದು, ಈ ಬಾರಿಯ ಬಜೆಟ್ ವಿಶೇಷವಾಗಿರಲಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಸಹಜವಾಗಿಯೇ ಬಜೆಟ್ಲ್ಲಿ ವಿಶೇಷ ಒತ್ತು ನೀಡುವುದು ಖಚಿತವಾಗಿದೆ. ವಿಶೇಷ ಪ್ಯಾಕೇಜ್ ಮೂಲಕ ಮತ ಸೆಳೆಯಲು ತಂತ್ರ ರೂಪಿಸುವ ಸಾಧ್ಯತೆ ಹೇರಳವಾಗಿದೆ. ಅಭಿವೃದ್ಧಿ ಮಂತ್ರದ ಮೂಲಕ ವಿಪಕ್ಷಗಳಿಗೆ ಕಡಿವಾಣ ಹಾಕಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಅಧಿಕಾರದ ಗುರಿ ತಲುಪಲು ಬಜೆಟ್ ಮೂಲಕ ಬುನಾದಿ ಹಾಕುವ ನಿರೀಕ್ಷೆ ಇದೆ.

ಫೆಬ್ರವರಿ 17ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಸಾರ್ವಜನಿಕರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ದಕ್ಷಿಣ ಕನ್ನಡದ ಜನತೆ ಸರ್ಕಾರ ಈ ಬಾರಿ ತಮ್ಮ ಆದ್ಯತೆಗಳನ್ನು ಪೂರೈಸಬಹುದು ಎಂದು ನಿರೀಕ್ಷಿಸಿದ್ದಾರೆ. ಮೀನುಗಾರಿಕೆ ನಡೆಸುವವರಿಗೆ ಈ ಬಾರಿ ಸರ್ಕಾರ ಅನುದಾನ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ. ಮೂಗಾರಿಕಾ ಬೋಟ್ ಗಳಿಗೆ ಸೀಮೆಎಣ್ಣ ಅಥವಾ ಡೀಸೆಲ್ ಅನ್ನು ಸಬ್ಸಿಡಿಯಲ್ಲಿ ಕೊಡಬಹುದು ಎಂದು ನಿರೀಕ್ಷಿಸಿದ್ದಾರೆ. ಈ ಬಾರಿಯಾದರೂ ಮತ್ಸೋದ್ಯಮಕ್ಕೆ ಸರ್ಕಾರ ಮಣೆ ಹಾಕುತ್ತಾ ಎಂದು ತಿಳಿಯಬೇಕಿದೆ.

ಇನ್ನು ಕರಾವಳಿ ಜನರು ನಿತ್ಯ ಊಟಕ್ಕೆ ಕುಚಲಕ್ಕಿಯನ್ನು ಬಳಸುತ್ತಾರೆ. ಬಿಪಿಎಲ್ ಕಾರ್ಡ್ ಮೂಲಕ ಬಡವರಿಗೆ ಸರ್ಕಾರ ಅಕ್ಕಿಯನ್ನು ವಿತರಿಸುತ್ತದೆ. ಆದರೆ, ಕರಾವಳಿ ಜನರಿಗೆ ಸರ್ಕಾರ ವಿತರಿಸುವ ಅಕ್ಕಿಗಿಂತಲೂ ಕುಚಲಕ್ಕಿಯೇ ರುಚಿ. ಈ ಬಗ್ಗೆ ಸರ್ಕಾರ ಅಸ್ತು ಎಂದಿದ್ದರೂ ಇನ್ನು ಯಾರಿಗೂ ಪೂರ್ಣ ಪ್ರಮಾಣದಲ್ಲಿ ಕುಚಲಕ್ಕಿ ಸಿಕ್ಕಿಲ್ಲ. ಹಾಗಾಗಿಯೇ ಈ ಬಾರಿ ಬಜೆಟ್ ನಲ್ಲಿ ಕರಾವಳಿ ಜನರಿಗೆ ಕುಚಲಕ್ಕಿಯನ್ನು ನೀಡುವ ಭರವಸೆ ಇದೆ.

ಇನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷವೂ ವಿದ್ಯಾರ್ಥಿಗಳು ಉನ್ನತ ವಿದಾಭ್ಯಾಸವನ್ನು ಮುಗಿಸುತ್ತಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಕೆಲಸವನ್ನು ಹರಸಿ ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಕರಾವಳಿಲ್ಲಿ ಐಟಿ ಕಂಪನಿ ಸ್ಥಾಪಿಸಬೇಕೆಂದು ಜಿಲ್ಲೆಯ ಯುವಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಉಡುಪಿಯ ಪೇಜಾವರ ಶ್ರೀಗಳು ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರ ಕರಾವಳಿ ಜಿಲ್ಲೆಗಳಲ್ಲಿ ಐಟಿ ಕಂಪನಿಯನ್ನು ತೆರೆಯಲು ಒಪ್ಪಿಗೆ ನೀಡಬಹುದು ಎಂದ ಆಲೋಚಿಸಲಾಗಿದೆ.

ಇನ್ನು ಕಳೆದ ವರ್ ಕಾಂತಾರ ಚಿತ್ರ ರಿಲೀಸ್ ಆದ ಬಳಿಕ ದೈವಾರಾಧಕರಿಗೆ ಮಾಸಾಶನ ಕೊಡಲು ಸರ್ಕಾರ ನಿರ್ಧರಿಸಿತ್ತು. ಇದನ್ನು ಈ ಸಲದ ಆಯವ್ಯಯದಲ್ಲಿ ಸಮ್ಮತಿಸಬಹುದು ಎಂದು ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಇನ್ನು ಅಡಿಕೆ ಬೆಳೆಗಾರರಿಗೆ ಹಳದಿರೋಗ ಹಾಗೂ ಕೊಳೆ ರೋಗದಿಂದ ರೈತರು ತತ್ತರಿಸಿದ್ದಾರೆ. ಪ್ರೋತ್ಸಾಹ ನೀಡುವಂತೆ ರೈತರು ಸರ್ಕಾರದ ಮೊರೆ ಹೋಗಿದ್ದಾರೆ.

ಇನ್ನು ಕರಾವಳಿ ಪ್ರದೇಶದಲ್ಲಿ ಬೀಚ್ ಗಳು, ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳನ್ನು ಬೆಳೆಸಲು ಈ ಬಾರಿಯ ಆಯವ್ಯಯದಲ್ಲಿ ಹೆಚ್ಚು ಅನುದಾನ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇವೆಲ್ಲಾ ಹೊರತು ಪಡಿಸಿ, ಶಿಕ್ಷಣ ಕೇಂದ್ರಗಳ ಅಭಿವೃದ್ಧಿ, ರೈಲ್ವೆ, ಯಕ್ಷಗಾನ ಕಲೆಗೆ ಪ್ರೋತ್ಸಾಹ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ ರಾಜ್ಯ ಸರ್ಕಾರ ಒತ್ತು ನೀಡಬಹುದು ಎಂದು ಕರಾವಳಿ ಜನರು ನೀರಿಕ್ಷಿಸಿದ್ದಾರೆ.

Related News

spot_img

Revenue Alerts

spot_img

News

spot_img