17.4 C
Bengaluru
Tuesday, December 24, 2024

ಈ ವಾರ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ರು, 80% ಆಚೆ ಬರ್ತೀನಿ ಅಂತ ಗೊತ್ತಿತ್ತು..!

ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಕಾರ್ಡ್ ಮುಖಾಂತರ ಎಂಟ್ರಿಗಿಟ್ಟಿಸಿದ್ದ ಪವಿ ಪೂವಪ್ಪ ಬಿಗ್ ಬಾಸ್ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲರಾಗಿದ್ದರು. ಇನ್ನು ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಹಳೆಯ ಎಪಿಸೋಡ್‌ಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಇರುವುದರಿಂದ ಅವರಿಂದ ಮನೆಯ ಪರಿಸ್ಥಿತಿಯೇ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು.

ಆದರೆ ಮನೆಯೊಳಗೆ ಪವಿತ್ರಾ ಅಂದುಕೊಂಡಷ್ಟೇನೂ ಸದ್ದು ಮಾಡಲಿಲ್ಲ. ಒಂದು ವಾರ ಉತ್ತಮ ಪಡೆದುಕೊಂಡು ಇನ್ನೊಂದು ವಾರ ಜೈಲುಶಿಕ್ಷೆಯನ್ನೂ ಅನುಭವಿಸಿದ್ದು ಅವರ ಆಟದ ಏರಿಳಿತವನ್ನು ಸೂಚಿಸುವಂತಿದೆ. ಒಳಗೆ ಹೋಗಿ ಮೂರೇ ವಾರಕ್ಕೆ ಮರಳಿ ಬಂದಿರುವ ಅವರು ಮನೆಯಿಂದ ಹೊರಬಿದ್ದಿದ್ದೇ JioCinemaಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಮೂರು ವಾರಗಳ ಪುಟ್ಟ ಜರ್ನಿಯ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.
‘ನಾನು ಪವಿ ಪೂವಪ್ಪ. ಈವಾಗ ಜಸ್ಟ್ ಬಿಗ್‌ಬಾಸ್‌ ಸೀಸನ್‌ 10 ಮನೆಯಿಂದ ಹೊರಗೆ ಬಂದಿದ್ದೇನೆ.‌‌

ಪವಿ ಯಾರ್ಯಾರ ಬಗ್ಗೆ ಏನೇನ್ ಮಾತಾಡಿದ್ರು ಗೊತ್ತಾ..?

ಮೊದಲು ರಾಕ್ಷಸರು ಸಂಗೀತಾ ತಂಡದವರಾಗಿದ್ದರು. ಆಗ ಅವರು ಹೇಳಿದ್ದೆಲ್ಲವನ್ನೂ ನಾವು ಕೇಳಿದ್ದೆವು. ಆದರೆ ನಂತರ ನಾವು ರಕ್ಕಸರಾದಾಗ ಅವರು ನಮ್ಮ ಯಾವ ಮಾತನ್ನೂ ಕೇಳಲಿಲ್ಲ. ಅದರಿಂದ ನಾವು ಪ್ರವೋಕ್ ಆಗುವ ಹಾಗಾಯ್ತು. ನನಗೆ ನೀರು ಹಾಕಬೇಕಾದರೂ, ‘ನನಗೆ ಉಸಿರಾಡಲು ಆಗುತ್ತಿಲ್ಲ’ ಎಂದು ಹೇಳುತ್ತಿದ್ದೆ. ಆದರೆ ಕಾರ್ತಿಕ್, ಸಂಗೀತಾ ಮತ್ತು ತನಿಷಾ ಮೂವರೂ ನನಗೆ ಉಸಿರಾಡಲೂ ಅವಕಾಶ ಕೊಡದ ಹಾಗೆ ನೀರು ಎರೆಚಿದರು. ಅದು ಸ್ವಲ್ಪ ಕೋಪ ಇತ್ತು. ಮರುದಿನ ಆ ಟಾಸ್ಕ್ ಮತ್ತೆ ಬಂದಾಗ, ಅವರಿಗೂ ಆ ಪೇನ್ ಗೊತ್ತಾಗ್ಲಿ ಎಂದು ನಾನು ಅವರಿಗೆ ಎರೆಚಿದೆವು. ಅವರಿಗೆ ಹದಿನೈದು ನಿಮಿಷವೂ ಮಾಡಲು ಸಾಧ್ಯವಾಗಲಿಲ್ಲ. ನಾನು ಎರಡು ತಾಸು ಗೊತ್ತಿದ್ದೆ. ಸಂಗೀತಾ ಮತ್ತು ಕಾರ್ತಿಕ್‌ಗೆ ತೊಂದರೆಯಾಯ್ತು. ಅದರ ಬಗ್ಗೆ ನನಗೆ ವಿಷಾದವಿದೆ.
ಕಳಪೆ-ಉತ್ತಮ,ಉತ್ತಮ ಪಡೆದುಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ. ನಾನು ನನ್ನನ್ನು ಆ ವಾರದಲ್ಲಿ ಪ್ರೂವ್ ಮಾಡಿಕೊಂಡಿದ್ದೆ. ಚೆನ್ನಾಗಿ ಆಡಿದ್ದೆ.

ಕಳಪೆ ಕೊಟ್ಟಿದ್ದನ್ನ ಒಪ್ಪಿಕೊಂಡ ಪವಿ ಪೂವಪ್ಪ

ಹಾಗೆಯೇ ಕಳಪೆಯನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಜೈಲಿನಲ್ಲಿದ್ದುಕೊಂಡೂ ಸುದೀಪ್‌ ಸರ್ ಊಟ ತಿಂದಿದ್ದು ನನಗೆ ತುಂಬ ಖುಷಿಯಾದ ವಿಷಯ. ನನಗೆ ಜೈಲಿನಲ್ಲಿದ್ದೇನೆ ಎಂದೇ ಅನಿಸಲಿಲ್ಲ.
ಯಾರು ಜೆನ್ಯೂನ್-ಯಾರು ಫೇಕ್?:
ಮನೆಯಲ್ಲಿ ನಮ್ರತಾ ಹೆಚ್ಚು ಜೆನ್ಯೂನ್ ಅನಿಸುತ್ತಾರೆ ನನಗೆ. ಹಾಗೆಯೇ ಸಂಗೀತಾ ಕೂಡ ಓಕೆ. ಆದ್ರೆ ನನಗೆ ಒಂಥರಾ ಪ್ಲಿಪ್ ಆಗ್ತಾರೆ ಅಲ್ಲಿ ಇಲ್ಲಿ ಅನಿಸುತ್ತದೆ. ಕಾರ್ತೀಕ್ ಕೂಡ ಓಕೆ.ತನಿಷಾ ಫೇಕ್ ಅನಿಸುತ್ತಾರೆ ನನಗೆ. ಟಾಸ್ಕ್‌ ಟೈಮ್‌ನಲ್ಲಿಯೇ ಒಂದು ಥರ ಇರ್ತಾರೆ. ಮನೆಯೊಳಗೇ ಒಂಥರ ಇರುತ್ತಾರೆ. ಟಾಸ್ಕ್‌ ಅನ್ನು ಮನೆಯಲ್ಲಿಯೇ ಬಿಟ್ಟುಬಿಡೋಣ ಅಂತಾರೆ. ಅದೇ ಬೇರೆಯವರು ಹಾಗೆ ಮಾಡಿದಾಗ ಅದನ್ನು ಒಂದೆರಡು ವಾರವಾದರೂ ಮರೆಯದೇ ಅದೇ ರೀಸನ್ ಹೇಳುತ್ತಿರುತ್ತಾರೆ.

ಕಾರ್ತಿಕ್ ವಿನ್ನರ್ ಆಗ್ತಾರೆ ಎಂದು ಭವಿಷ್ಯ ನುಡಿದ ಪವಿ

ಟಾಪ್‌ 5
ನನಗೆ ಟಾಪ್‌ 5ನಲ್ಲಿ ಇರಬೇಕಾದ ಸ್ಪರ್ಧಿಗಳು ಅಂತಿರುವುದು, ಕಾರ್ತಿಕ್, ವಿನಯ್, ನಮ್ರತಾ, ಸಂಗೀತಾ ಇರಬೇಕು ಎಂದಿತ್ತು. ಆದರೆ ಈಗ ಆಡುತ್ತಿರುವ ರೀತಿ ನೋಡಿದರೆ ನನಗೆ ಅನುಮಾನ. ಮುಂದೆ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ.ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತದೆ. ವಿನಯ್ ಮತ್ತು ನಮ್ರತಾ ನನ್ನ ಫ್ರೆಂಡ್ ಆಗಿದ್ದರೂ, ಕಾರ್ತೀಕ್ ಏನೋ ಪಾಸಿಟಿವ್ ವೈಬ್ ಕೊಡ್ತಾರೆ. ಬಹುಶಃ ನೋಡುವವರಿಗೂಹಾಗೆಯೇ ಅನಿಸಬಹುದು. ಎಷ್ಟೇ ಚೆನ್ನಾಗಿ ಆಡಿದರೂ, ಅಗ್ರೆಸಿವ್ ಆಗಿ ಆಡಿದರೂ ಕುಟುಂಬಕ್ಕೆ ಹೋಲುತ್ತಾರೆ. ಆದರೆ ವಿನಯ್‌ ಅವರನ್ನು ಎಲ್ಲರೂ ಅಗ್ರೆಸಿವ್ ಆಗುತ್ತಾರೆ ಎನ್ನುತ್ತಾರೆ. ಆದರೆ ಅವರು ಹಾಗೆ ಇಲ್ಲ ಎಂದು ಪವಿ ಪುನರುಚ್ಚರುಸಿದ್ದಾರೆ..

ಚೈತನ್ಯ ರೆವಿನ್ಯೂ ಫ್ಯಾಕ್ಟ್ ನ್ಯೂಸ್ . ಬೆಂಗಳೂರು

Related News

spot_img

Revenue Alerts

spot_img

News

spot_img