19.6 C
Bengaluru
Tuesday, December 24, 2024

ತಿಂಗಳಿಗೆ 3300 ರೂಪಾಯಿ ಅನ್ನು ಪಾವತಿಸಿ ಮೂರರಷ್ಟು ಹಣವನ್ನು ಪಡೆಯಿರಿ

ಬೆಂಗಳೂರು, ಆ. 09 : ನಾವು ನಮ್ಮ ಹಣದ ಸುರಕ್ಷತೆ ಹಾಗೂ ಅಧಿಕ ರಿಟರ್ನ್ ಬಯಸುವಾಗ ಎಲ್‌ಐಸಿ ಯೋಜನೆ ನಮಗೆ ಉತ್ತಮವಾದ ಮಾರ್ಗವಾಗಿದೆ. ಅದರಲ್ಲೂ ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ಹಲವಾರು ಉತ್ತಮ ಯೋಜನೆಗಳನ್ನು ಹೊಂದಿದೆ. ಇತ್ತೀಚೆಗೆ ಸಂಸ್ಥೆಯು ಹೊಸ ಯೋಜನೆಯನ್ನು ಜಾರಿ ಮಾಡಿದೆ. ಅದುವೇ ಎಲ್‌ಐಸಿ ಧನ ವರ್ಷ ಯೋಜನೆ. ಭಾರತದ ಅತಿ ದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮವಾಗಿದೆ.

ಸದ್ಯ ಆಫ್ ಲೈನ್ ನಲ್ಲಿ ಮಾತ್ರ ಲಭ್ಯವಿರುವ LIC ಯ ಧನ್ ವರ್ಷ ಯೋಜನೆಯು ವೈಯಕ್ತಿಕ ವಿಮಾ ಯೋಜನೆಯಾಗಿದೆ. ಇದು ನಿಮ್ಮಲ್ಲಿ ಉಳಿತಾಯವನ್ನು ಉತ್ತೇಜಿಸುತ್ತದೆ. ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೇ 10 ಪಟ್ಟು ಅಧಿಕ ಎಲ್ಐಸಿಯಲ್ಲಿ ಯಾವುದೇ ವ್ಯಕ್ತಿ ಹೂಡಿಕೆ ಮಾಡಬಹುದು. ನೀವು ಕೂಡ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವು ಎಲ್ಐಸಿ ನಿಯಮಿತ ಪ್ರೀಮಿಯಂ ಯುನಿಟ್ ಲಿಂಕ್ಡ್ ಪ್ಲಾನ್, SIIP ನಲ್ಲಿ ಹೂಡಿಕೆ ಮಾಡಬಹುದು.

ಈ ವಿಮಾ ಯೋಜನೆಯಲ್ಲಿ ವಾರ್ಷಿಕ 40 ಸಾವಿರ ರೂಪಾಯಿಗಳನ್ನು 21 ವರ್ಷಗಳವರೆಗೆ ಠೇವಣಿ ಇರಿಸಬೇಕಾಗುತ್ತದೆ. ಬಳಿಕ ನಿಮಗೆ ಮೂರು ಪಟ್ಟು ಹೆಚ್ಚು ಲಾಭ ಸಿಗುತ್ತದೆ. ಭಾರತೀಯ ಜೀವ ವಿಮಾ ನಿಗಮದ ಈ ಯೋಜನೆ ಒಂದು ವ್ಯವಸ್ಥಿತ ಹೂಡಿಕೆ ವಿಮಾ ಯೋಜನೆ, ಅಂದರೆ SIIP. LIC ಯ SIIP ಯೋಜನೆಯಾಗಿದೆ, ಇದರಲ್ಲಿ ಹೂಡಿಕೆದಾರರು 21 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರಲ್ಲಿ, ಪ್ರೀಮಿಯಂ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು.

ಹೂಡಿಕೆದಾರರು ವಾರ್ಷಿಕ ಆಯ್ಕೆಯನ್ನು ಆರಿಸಿಕೊಂಡರೆ ಮತ್ತು ಪ್ರೀಮಿಯಂ ಅನ್ನು ಠೇವಣಿ ಮಾಡಿದರೆ, ಅವರು ವಾರ್ಷಿಕವಾಗಿ ರೂ 40,000 ಹೂಡಿಕೆ ಮಾಡಬೇಕಾಗುತ್ತದೆ. 21 ವರ್ಷಗಳವರೆಗೆ ಮಾಸಿಕ ರೂ 4000 ಠೇವಣಿ ಮಾಡುವ ಮೂಲಕ, ನಿಮ್ಮ ಒಟ್ಟು ಹೂಡಿಕೆ ರೂ 10,08,000 ಆಗುತ್ತದೆ. 21 ವರ್ಷಗಳ ನಂತರ ಮೆಚ್ಯೂರಿಟಿಯಲ್ಲಿ, ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಹೆಚ್ಚುವರಿಯಾಗಿ ಸುಮಾರು 35 ಲಕ್ಷ ರೂಪಾಯಿಗಳನ್ನು ಪಡೆಯುವಿರಿ.

ಅದು ನಿಮ್ಮ ಹೂಡಿಕೆಯ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು. SIIP ಯೋಜನೆಯಡಿ, ಹೂಡಿಕೆದಾರರಿಗೆ 4,80,000 ರೂಪಾಯಿಗಳ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಒಟ್ಟಾರೆ, LIC ಯ ಅನೇಕ ಯೋಜನೆಗಳಂತೆ ಧನ್ ವರ್ಷ ಯೋಜನೆ ಕೂಡ ಅನುಕೂಲಕಾರಿಯಾಗಿದ್ದು, ನಿಮ್ಮ ಅಗತ್ಯತೆ ಹಾಗೂ ಯೋಜನೆಯ ಅನುಕೂಲ – ಅನಾನುಕೂಗಳನ್ನು ಗಮನದಲ್ಲಿಟ್ಟುಕೊಂಡು ನೀವು ವಿಮೆಯನ್ನು ಕೊಳ್ಳಬಹುದು. ನೀವು ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹಣವನ್ನು ಪಡೆಯುವ ಆಯ್ಕೆಯನ್ನು ಮಾಡಬಹುದು.

ಯೋಜನೆಯನ್ನು 10 ವರ್ಷ ಅಥವಾ 15 ವರ್ಷಕ್ಕೆ ಖರೀದಿ ಮಾಡಬಹುದು. ನೀವು ಸಾಲ ಮತ್ತು ವಿಮೆ ಎರಡನ್ನೂ ಹಿಂದಿರುಗಿಸುವ ಆಯ್ಕೆಯನ್ನು ಹೊಂದಿರುತ್ತೀರಿ. 35 ನೇ ವಯಸ್ಸಿನಲ್ಲಿ ಮಾತ್ರ 10 ಪಟ್ಟು ಮರು ಆದಾಯದೊಂದಿಗೆ 15-ವರ್ಷದ ಕವರೇಜ್ ಅನ್ನು ಖರೀದಿಸಬಹುದು. 15 ವರ್ಷಗಳ ಅವಧಿಯನ್ನು ಪಾಲಿಸಿ ಖರೀದಿಸಲು ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. ಹಾಗೆಯೇ 10 ವರ್ಷದ ವಿಮೆ ಪಡೆಯಲು ಕನಿಷ್ಠ 8 ವರ್ಷ ವಯಸ್ಸಾಗಿರಬೇಕು. ಧನ್ ವರ್ಷ ವಿಮೆಯನ್ನು ಆಫ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದು. ನೀವು ಈ ಯೋಜನೆಯಡಿಯಲ್ಲಿ ಸಾಲ ಹಾಗೂ ವಿಮೆಯನ್ನು ರಿಟರ್ನ್ ನೀಡುವ ಆಯ್ಕೆಯಿದೆ.

Related News

spot_img

Revenue Alerts

spot_img

News

spot_img