ಬೆಂಗಳೂರು;ವೆಬ್‌ಸೈಟ್ ತುರ್ತು ನಿರ್ವಹಣೆ(Website emergency maintenance)ನಿಮಿತ್ತ ನ.24-26ರವರೆಗೆ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್‌ಲೈನ್(Online) ಬಿಲ್ ಪಾವತಿ ಸೇವೆ ಇರಲ್ಲ ಎಂದು ಎಸ್ಕಾಂ(Escom) ಪ್ರಕಟಣೆಯಲ್ಲಿ ತಿಳಿಸಿದೆ. ಎಸ್ಕಾಂಗಳ ಪೋರ್ಟಲ್‌ಗಳನ್ನು ಒಂದೇ ಸೂರಿನಡಿ ತಂದು, ಆನ್‌ಲೈನ್ ಪಾವತಿ ವ್ಯವಸ್ಥೆ ಗ್ರಾಹಕರಿಗೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ವಿವಿಧ ಎಸ್ಕಾಂ ಪೋರ್ಟಲ್‌ಗಳಲ್ಲಿರುವ ದತ್ತಾಂಶಗಳನ್ನು ಹೊಸ ಪೋರ್ಟಲ್‌ಗೆ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್(Webportal) ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ 2 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. 2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರಲ್ಲ.