26.7 C
Bengaluru
Sunday, December 22, 2024

ಮಾದರಿ ನೀತಿ ಸಂಹಿತೆ ಜಾರಿ; ಏನಿದು ಏನೆಲ್ಲಾ ನಿರ್ಬಂಧಗಳಿವೆ.?

ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು 2023 ರ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಚುನಾವಣಾ ಮಾದರಿ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿರುವ ಹಿನ್ನೆಲೆ ಪ್ರತಿಯೊಬ್ಬರು ಚುನಾವಣೆ ನೀತಿ ಸಂಹಿತೆಯನ್ನು ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಏಪ್ರಿಲ್ 20 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಏಪ್ರಿಲ್ 21 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. 24 ಉಮೇದುಗಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು ಮೇ 10 ಚುನಾವಣೆ ನಡೆಯುವುದು ಮೇ 13 ರಂದು ಮತ ಎಣಿಕೆಯಾಗುವುದು ಮೇ 15 ಚುನಾವಣೆ ಮುಕ್ತಾಯಗೊಳ್ಳುವುದು ಮತ್ತು ಅಲ್ಲಿಯವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

*ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಥವಾ ಇತರ ನಾಯಕರು ಜಾತಿ ಅಥವಾ ಕೋಮುವಾದದ ಆಧಾರದ ಮೇಲೆ ಮತ ಕೇಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

*ಧಾರ್ಮಿಕ ಕ್ಷೇತ್ರಗಳನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳಬಾರದು.

*ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ

*ಹೊಸ ಟೆಂಡರ್‌ಗಳನ್ನೂ ಕರೆಯವುದಕ್ಕೆ ಅವಕಾಶವಿಲ್ಲ

*ಧ್ವನಿವರ್ದಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು

*ಸಂಘಟಿತ ಮೆರವಣಿಗೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಮರ್ಪಕವಾಗಿ ಮುಂಚಿತವಾಗಿಯೇ ಸೂಚನೆಯನ್ನು ನೀಡಬೇಕು.

*ಮತದಾರರಿಗೆ ಆಮಿಷವೊಡ್ಡುವಂತಹ ಉಡುಗೊರೆಗಳನ್ನು ಕೊಡಬಾರದು

*ವಾಹನಗಳ ಮೇಲೆ ಪಕ್ಷದ ಬಾವುಟಗಳನ್ನು ಕಟ್ಟುವುದಕ್ಕೂ ಅನುಮತಿ ಬೇಕು

*ಜನಪ್ರತಿನಿಧಿಗಳು, ಮಂತ್ರಿಗಳ ಸರ್ಕಾರಿ ಕಾರನ್ನು ಬಳಸುವ ಹಾಗಿಲ್ಲ

*ಸಭೆ, ಸಮಾರಂಭಗಳ ನಡೆಸುವ ಮೊದಲು ಅನುಮತಿ ಪಡೆಯಬೇಕಾಗುತ್ತೆ

*ರಾಜಕೀಯ ನಾಯಕರು ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ

*ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ

 

Related News

spot_img

Revenue Alerts

spot_img

News

spot_img