26.9 C
Bengaluru
Friday, July 5, 2024

ಋಣಭಾರ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು:-

ಬೆಂಗಳೂರು ಜೂನ್ 19:ನೀವು ನಿಮ್ಮ ಪ್ರೋಪರ್ಟಿಗಳಿಗೆ ಸಂಭಂದಿಸಿದ EC ,ಋಣಭಾರ ಪ್ರಮಾಣ ಪತ್ರ(Encumbrance Certificate)ಗಳಿಗೆ ಉಪನೋಂದಣಾಧಿಕಾರಿ ಕಛೇರಿಗೆ ಹೋಗಬೇಕ ಅಥವಾ ಯಾವಾಗ ಹಾಗೂ ಹೇಗೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರಣೆ.

1.ಋಣಭಾರ ಪ್ರಮಾಣ ಪತ್ರಗಳ ಅರ್ಜಿಗಳನ್ನು ಶೋಧನಾ ಅವಧಿ ದಿನಾಂಕ 01-04-2004 ರಿಂದ ತಹಲ್ (ಇಲ್ಲಿಯವೆರೆಗಿನ) ವರೆಗಿನ ಅವಧಿಯಾಗಿದ್ದಲ್ಲಿ.https://kaveri.karnataka.gov.in ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.

2.ದಿನಾಂಕ 01-04-2004 ರಿಂದ ಹಿಂದಿನ ವರ್ಷಗಳ ಅವಧಿಯ ಶೋಧನೆಗೆ ಸಂಬಂಧಿಸಿದಂತೆ ನಮೂನೆ 22ರಲ್ಲಿ ಉಪನೋಂದಣಿ ಕಛೇರಿಗೆ ಭೌತಿಕವಾಗಿ ಅರ್ಜಿಸಲ್ಲಿಸಬೇಕು.

3.ಋಣಭಾರ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸ್ವತ್ತಿಗೆ ಸಂಬಂಧಿಸಿದ ಜಿಲ್ಲೆ /ತಾಲೂಕು/ಹೋಬಲಿ/ವಾರ್ಡ್/ಗ್ರಾಮ,ಸ್ವತ್ತಿನ ವಿಧಗಳನ್ನು ನಿಖರವಾಗಿ ಆಯ್ಕೆ ಮಾಡಿಕೊಳ್ಳಬೇಕು.

4.ಸ್ವತ್ತಿನ ಸಂಖ್ಯೆಗಳನ್ನು ಬಹು ಮಾದರಿಯಲ್ಲಿ ಉದಾ:ಅಸೆಸ್ಮೆಂಟ್ ನಂಬರ್,ಸರ್ವೆ ನಂಬರ್,ಆಸ್ತಿ ಸಂಖ್ಯೆ, ಸೈಟ್ ನಂಬರ್, ಹೀಗೆ ಹಲವು ಅಂಶಗಳನ್ನು ಒಂದೇ ಬಾರಿಗೆ ಶೋದನೆ ನಡೆಸಬಹುದಾಗಿರುತ್ತದೆ.

5.ನೋಂದಣಿ ಮತ್ತು ಮುದ್ರಾಂಕ ಇಲಾಖೆ ಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ಸ್ವತ್ತಿನ ವಿವರಣಾ ವಿಭಾಗದಲ್ಲಿ ಸ್ವತ್ತಿನ ವಿವರವನ್ನು ಸ್ಪಷ್ಟವಾಗಿ ನಮೂದಿಸಬೇಕು. ಮತ್ತು ನಿಕರವಾದ ಮಾಹಿತಿ ಲಭ್ಯವಿದ್ದಲ್ಲಿ ಸ್ವತ್ತಿಗೆ ಸಂಬಂಧಿಸಿದ ಚಕ್ಕುಬಂದಿಯನ್ನು ನಮೂದಿಸಬೇಕು.

6.ಡಿಜಿಟಲ್ ನಮೂನೆಯನ್ನು ಭರ್ತಿ ಮಾಡಿದ ನಂತರ ದೃಢೀಕೃತ ಪ್ರತಿಯ ಅಗತ್ಯವಿದ್ದಲ್ಲಿ ತಂತ್ರಾಂಶದ ಮೂಲಕವೇ ಖಜಾನೆಗೆ ಹಣ ಪಾವತಿ ಮಾಡಬೇಕು.

7.ನೆಟ್ ಬ್ಯಾಂಕಿಂಗ್/ಯುಪಿಐ/ಕ್ರೆಡಿಟ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು.

8.ನಂತರ ಡಿಜಿಟಲ್ ಅರ್ಜಿ ನಮೂನೆಗೆ ಆಧಾರ್ ಸಂಖ್ಯೆಯ ಸಹಾಯದಿಂದ ಇ-ಸೈನ್ ಮಾಡಿ ಉಪನೋಂದಣಿ ಕಛೇರಿಗೆ ಸಲ್ಲಿಸಬೇಕು.

9.ನಿಗದಿತ ಸಮಯದ ಒಳಗೆ ಉಪನೋಂದಣಿ ಅಧಿಕಾರಿಗಳಿಂದ ದೃಡೀಕೃತಗೊಂಡ ಋಣಭಾರ ಪ್ರಮಾಣ ಪತ್ರವನ್ನು ನೀವು ಅರ್ಜಿ ಸಲ್ಲಿಸಿದ ಲಾಗ್ ಇನ್ ನಲ್ಲಿ ಪಡೆಯಬಹುದಾಗಿರುತ್ತದೆ.

ನಿಮಗೆ ಇದು ತಿಳಿದಿರಲಿ:-

ನಮ್ಮ ಈ ಋಣಭಾರ ಪ್ರಮಾಣ ಪತ್ರ(Encumbrance Certificate)ಗಳಿಗೆ ಅರ್ಜಿ ಸಲ್ಲಿಸುವ ಸೇವೆ ಸಕಾಲ ಸೇವೆಯ ಅಡಿಯಲ್ಲಿ ಇದೆ.

ಶೋಧನಾ ಅವಧಿಯನ್ನು ಆರ್ಥಿಕ ವರ್ಷದ ಆಧಾರದಲ್ಲಿ ಅಂದರೆ ಏಪ್ರಿಲ್ 1 ರಿಂದ ಮಾರ್ಚ್ 31 ರ ಅವಧಿಯನ್ನು 1 ವರ್ಷ ಎಂದು ಪರಿಗಣಿಸಲಾಗುತ್ತದೆ.

ಋಣಭಾರ ಪ್ರಮಾಣ ಪತ್ರಗಳಲ್ಲಿ ಇರುವ ಪ್ರಮುಖ 3 ನಮೂನೆಗಳು:-
1.ನಮೂನೆ 15: ಋಣಭಾರ ಪ್ರಮಾಣ ಪತ್ರ

2.ನಮೂನೆ 16: ಋಣಭಾರ ರಾಹಿತ್ಯ ಪತ್ರ
ಈ ನಮೂನೆಗಳು ಸ್ವತ್ತಿನ ಆಧಾರದ ಮೇಲೆ ಶೋಧನೆಗೆ ಒಳಪಡುತ್ತವೆ.

3.ನಮೂನೆ 17: ಪಕ್ಷಗಾರರ ಹೆಸರಿನ ಆಧಾರದಲ್ಲಿ ಶೋದನೆ ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img