22.9 C
Bengaluru
Friday, July 5, 2024

ಮಹಿಳೆಯರ ಸುರಕ್ಷತೆಗೆ ಎಮರ್ಜೆನ್ಸಿ SOS ಬೂತ್ ಗಳ ಸ್ಥಾಪನೆ

ಬೆಂಗಳೂರು, ಜೂ. 24 : ಮಹಾನಗರಗಳಲ್ಲಿ ಆಗಾಗ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆಯೂ ಸಾಕಷ್ಟು ರೀತಿಯಲ್ಲಿ ವರ್ಕೌಟ್‌ ಮಾಡುತ್ತಲೇ ಇರುತ್ತಾರೆ. ಹಾಗಿದ್ದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಸಮಸ್ಯೆಗಳು ಮಹಾನಗರಗಳ ಹೆಸರಿಗೆ ಕಪ್ಪು ಚುಕ್ಕೆಯನ್ನು ಉಂಟು ಮಾಡುತ್ತಿರುತ್ತವೆ. ಇದೀಗ ಪೊಲೀಸ್‌ ಇಲಾಖೆ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ರೀತಿಯ ಕ್ರಮ ಕೈಗೊಂಡಿದೆ.

ಇದರ ಅಂಗವಾಗಿ ಬೆಂಗಳೂರು ಮಹಾನಗರದಲ್ಲಿ ಎಮರ್ಜೆನ್ಸಿ SOS ಬೂತ್ ಗಳನ್ನು ಸ್ಥಾಪಿಸಿವೆ. ಅದರಲ್ಲೂ ಬೆಂಗಳೂರು ನಗರದಾದ್ಯಂತ ಎಮರ್ಜೆನ್ಸಿ SOS ಬೂತ್ ಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 30 ಕಡೆಗಳಲ್ಲಿ ಎಮರ್ಜೆನ್ಸಿ SOS ಬೂತ್ ಗಳನ್ನು ಸ್ಥಾಪಿಸಲಾಗಿದೆ. ಈ ಬೂತ್ ನಲ್ಲಿರುವ ಕಿಯೋಸ್ಕ್ ನ ಎಸ್ ಒಎಸ್ ಬಟನ್ ಒತ್ತಿದರೆ ಹತ್ತೇ ನಿಮಿಷದಲ್ಲಿ ಪೊಲೀಸರು ಬರುತ್ತಾರೆ. ಮಹಿಳೆಯರನ್ನು ರಕ್ಷಣೆ ಮಾಡುತ್ತಾರೆ.

ಸದ್ಯ ಮೊದಲ ಹಂತದಲ್ಲಿ 30 ಕಡೆಗಳಲ್ಲಿ ಎಮರ್ಜೆನ್ಸಿ SOS ಬೂತ್ ಗಳನ್ನು ಸ್ಥಾಪಿಸಿದ್ದು, ಬಿಬಿಎಂಪಿ ಸಹಯೋಗದಲ್ಲಿ ಮಹಿಳೆಯರಿಗಾಗಿ ‘ನಿರ್ಭಯಾ ಫಂಡ್’ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 20 ಕಿಯೋಸ್ಕ್‌ಗಳನ್ನು ಎರಡನೇ ಹಂತದಲ್ಲಿ ಕೊಳೆಗೇರಿಗಳು, ಮಾಲ್‌ಗಳ ಬಳಿ ಸ್ಥಾಪಿಸಲಾಗುತ್ತದೆ. ಸೇಫ್ಟಿ ಐಲ್ಯಾಂಡ್ ಬೂತ್ SOS ಅಥವಾ ಪ್ಯಾನಿಕ್ ಬಟನ್ ಜೊತೆಗೆ ಅದರ ಮೇಲಿರುವ ಸ್ಪೀಕರ್ ಅನ್ನು ಕೂಡ ಇದು ಒಳಗೊಂಡಿರುತ್ತದೆ.

ಸಂಕಷ್ಟ ಎದುರಾದಾಗ ಬಟನ್‌ ಅನ್ನು ಒತ್ತಿದರೆ 10 ಸೆಕೆಂಡುಗಳ ಅವಧಿಯಲ್ಲಿ ನಿಮ್ಮ ಕರೆಯನ್ನು ಸ್ವೀಕರಿಸಲಾಗುತ್ತದೆ. ಈ ಮೂಲಕ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ದೊರಕುತ್ತದೆ. ಆಗ 10 ನಿಮಿಷದಲ್ಲಿ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ. ಈ ಮಿಷನ್‌ ಬಳಿಯೇ ಸಿಸಿಟಿವಿ ಕ್ಯಾಮೆರಾವನ್ನು ಸಹ ಜೋಡಿಸಲಾಗುತ್ತದೆ. ಆಗ ಸುತ್ತ ಮುತ್ತಲಿನ ಚಟುವಟಿಕೆಗಳು ಕ್ಯಾಮರಾದಲ್ಲಿ ರೆಕಾರ್ಡ್‌ ಆಗುತ್ತದೆ. ಇದರಿಂದ ಮಹಿಳೆಯರ ಸುರಕ್ಷತೆಗೆ ಸಹಕಾರಿಯಾಗುತ್ತದೆ.

Related News

spot_img

Revenue Alerts

spot_img

News

spot_img