ಬೆಂಗಳೂರು ಜೂನ್ 22: ಯಾವುದೇ ಕ್ಷೇತ್ರದಲ್ಲಿಯಾಗಲ್ಲಿ, ಅಧುನಿಕ ಯುಗದಲ್ಲಿ ನಾವು ಎಷ್ಟು ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದರು, ಪರೋಕ್ಷವಾಗಿ ಅಥವಾ ಪ್ರತ್ಯೇಕ್ಷವಾಗಿ ಮಾನವ ಶಕ್ತಿಯ ಅವಶ್ಯಕತೆ ಅತ್ಯಂತ ಪ್ರಮುಖವಾದುದ್ದಾಗಿದೆ. ಅದರಲ್ಲೂ ಕಟ್ಟಡಗಳ ನಿರ್ಮಾಣ, ಅನೇಕ ಅಗತ್ಯ ವಸ್ತುಗಳ ಉತ್ಪಾದನೆ ಮಾಡುವ ಕಾರ್ಖಾನೆಗಳಲ್ಲಂತೂ ಕಾರ್ಮಿಕರ ಅನಿವಾರ್ಯತೆ ಬಹಳ ಇದೆ ಎಂದರೆ ತಪ್ಪಾಗಲಾರದು. ಅಂತಹ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಅತ್ಯಂತ ಪ್ರಮುಖ ಸೌಲಭ್ಯಗಳಲ್ಲಿ ಒಂದಾದ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುವುದು ಅನಿವಾರ್ಯದ ಸಂಗತಿಯಾಗಿದೆ.
ಇನ್ನು ಬೃಹತ್ ಬೆಂಗಳೂರಿನಲ್ಲಿ ನಾವು ನೋಡುವುದಾದರೆ ದಿನದಿಂದ ದಿನಕ್ಕೆ ಗಗನ ಚುಂಬಿಕಟ್ಟಡಗಳು ತಲೆ ಎತ್ತುತ್ತಲೆ ಇವೆ, ನೆನ್ನೆ ನೋಡಿದಾಗ ಖಾಲಿ ನಿವೇಶನವಿದ್ದು ಒಂದು ಸ್ಥಳ ಬೆಳಗಾಗುವುದರಲ್ಲಿ ಅಲ್ಲಿ ಕಾಮಗಾರಿನಡೆಯುತ್ತಿರುವ ಸ್ಥಳವಾಗಿ ಕಾಣಿಸುತ್ತದೆ. ಅಂತಹ ಕಾಮಗಾರಿ ಮಾಡಲು ಕಾರ್ಮಿಕರು ಅತ್ಯಗತ್ಯ ಅವರು ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲದೆ, ನೆರೆಯ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ, ಕೆರಳ, ಮಹಾರಾಷ್ಟ್ರ, ಸೇರಿದಂತೆ ಉತ್ತರ ಭಾರತದ ಅನೇಕ ಮಂದಿ ಕಟ್ಟಡ ಕಾರ್ಮಿಕರ ಕೆಲಸ ಮಾಡೋದನ್ನು ನಾವು ಗಮನಿಸುತ್ತೇವೆ. ಹಾಗಿರುವಾಗ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲಿ ಪಿಂಚಣಿ ಯೋಜನೆ ಒಂದಾಗಿದೆ..
ನಿಯಮ 39ರಂತೆ ಪಿಂಚಣಿ ಸೌಲಭ್ಯಕ್ಕೆ ಅರ್ಹತೆ, ಪಿಂಚಣಿ ಮಂಜೂರಾತಿ ವಿಧಾನ ಏನು.?
ಪ್ರಮುಖ ವಿಚಾರವೇನೆಂದರೆ ಕಾರ್ಮಿಕರು ಈ ಹಿಂದೆ ಕಾನೂನ ಕ್ರಮಗಳ ಅಡಿಯಲ್ಲಿ ಅವರು ನೊಂದಾಯಿಸಿಕೊಂಡಿರುಬೇಕು, ಕಾರ್ಮಿಕ ಇಲಾಖೆ, ಸ್ಥಳೀಯ ಪಂಚಾಯಿತಿ ಮಟ್ಟದ ಅಧಿಕಾರಿಗಳಿಂದ,ಕಾರ್ಮಿಕ ಸಂಘಟನೆಗಳಿಂದ ಅವರು ತಮ್ಮ ನೊಂದಣಿ ಮಾಡಿಸಿಕೊಂಡಿರುವುದು ಬಹಳ ಮುಖ್ಯ. ಇಷ್ಟೇಲ್ಲ ಆದ ಮೇಲೆ ಮೊದಲಿಗೆ ನಾವು ಪಿಂಚಣಿದಾರರ ಅರ್ಹತೆ ನೋಡುವುದದಾದರೆ.
*ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
*ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿರಬೇಕು.
*ಪಿಂಚಣಿಗೆ ಅರ್ಹರಾದ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯ KBOCWWB ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
*ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕನು ತನ್ನ ಮಂಡಳಿಯ ಮೂಲ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
*ಮಂಡಳಿಯು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಪಿಂಚಣಿ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ, ಫಲಾನುಭವಿಗೆ ಪಿಂಚಣಿ ಮಂಜೂರಾತಿ ಆದೇಶದ ಜೊತೆಗೆ ವಿದ್ಯುನ್ಮಾನಿಕೃತ ವಿಶಿಷ್ಷ ಪಿಂಚಣಿ ಗುರುತಿನ ಚೀಟಿಯನ್ನು ನೀಡಬೇಕು.
*ಫಲಾನುಭವಿಯು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿಯು ಅನರ್ಹ ಎಂದು ಕಂಡು ಬಂದಲ್ಲಿ, ಅರ್ಜಿಯನ್ನು ತಿರಸ್ಕರಿಸಲಾಗುವುದು.
* ಇನ್ನು ಪಿಂಚಣಿದಾರ ಮರಣ ಹೊಂದಿದಾಗ, ಅವರ ಕಾನೂನುಬದ್ದ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಪಿಂಚಣಿದಾರರ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ ಬ್ಯಾಂಕ್ ಖಾತೆಯನ್ನು ಮುಚ್ಚಲು ಮಂಡಳಿಗೆ ತಿಳಿಸಬೇಕು.
* ಪಿಂಚಣಿಯ ಮೊತ್ತವು ಮಾಸಿಕ ರೂ 3000/-ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮೀರತಕ್ಕದಲ್ಲ, ಮತ್ತು ಫಲಾನುಭವಿಯು ಸರ್ಕಾರದ ಇತರೆ ಯೋಜನೆಯಡಿ ಇದೇ ತರಹದ ಯಾವುದೇ ಸೌಲಭ್ಯವನ್ನು ಪಡೆದಿರಬಾರದು)
*ನೋಂದಾಯಿತ ಫಲಾನುಭವಿಯು ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವೂ ಜೀವಿತ ಪ್ರಮಾಣ ಪತ್ರ ನಮೂನೆ XIV –A (living certificate form XIV –A) ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
* ಅಷ್ಟೇ ಅಲ್ಲದೆ ಪಿಂಚಣಿ ಪಡೆಯುವ ಅರ್ಜಿಯೊಂದಿಗೆ ಸಲ್ಲಿಸಬೇಕಾಗಿರುವ ಪೂರಕ ದಾಖಲೆಗಳು*
* ಕಾರ್ಮಿಕ ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
*ಉದ್ಯೋಗದ ದೃಢೀಕರಣ ಪತ್ರದ ಜೊತೆಗೆ
ಜೀವಿತ ಪ್ರಮಾಣ ಪತ್ರ
* ರೇಷನ್ ಕಾರ್ಡ್ ಪ್ರತಿ
* ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ
* ಪಾಸ್ ಪೋರ್ಟ್ ಫೋಟೋಗಳನ್ನು ನೀಡಬೇಕಾಗುತ್ತದೆ.
ಇಷ್ಟೆಲ್ಲಾ ದಾಖಲೆಗಳು ಮತ್ತು ಮಹಿತಿಯನ್ನು ಪಡೆದುಕೊಂಡ ಬಳಿಕ ಅರ್ಜಿದಾರರು ಅರ್ಜಿಯನ್ನು ಹಿರಿಯ ನೋಂದಣಾಧಿಕಾರಿಗಳಾದ ಅಥವಾ ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆಗೊಳಪಡಿಸಬೇಕಾಗುತ್ತದೆ, ನಂತರ
ಸಹಾಯಕ ಕಾರ್ಮಿಕ ಆಯುಕ್ತರಿಂದ ಅನುಮೋದನೆಗೊಳಪಡಿಸಲ್ಪಡುತ್ತದೆ.
ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ ಅಥವಾ ಪತ್ನಿ ಕುಟುಂಬದವರು ಪಿಂಚಣಿ ಸೌಲಭ್ಯ
ಕುಟುಂಬ ಪಿಂಚಣಿ ಸೌಲಭ್ಯ ನಿಯಮ 39ಎ, ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕದಂದು 01-10-2019 ರಂತೆ ಸೇರ್ಪಡೆಯಾದಂತೆ.
*ಕುಟುಂಬ ಪಿಂಚಣಿ ಸೌಲಭ್ಯಕ್ಕೆ ಅರ್ಹತೆ, ಪಿಂಚಣಿ ಮಂಜೂರಾತಿ, ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ರವರು ಕುಟುಂಬ ಪಿಂಚಣಿ ಸೌಲಭ್ಯ
*ಉಪನಿಯಮ (1) ರಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿಯು ನಮೂನೆ-12(ಬಿ) ರಲ್ಲಿ ಮಂಡಳಿಗೆ ಅರ್ಜಿ ಸಲ್ಲಿಸಬೇಕು ಹಾಗೂ ಉಪನಿಯಮ (2)ದಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿಯುಅರ್ಜಿಯೊಂದಿಗೆ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.
*ಪಿಂಚಣಿ ಪಡೆಯುತ್ತಿದ್ದ ಮೃತ ನೋಂದಾಯಿತ ಕಾರ್ಮಿಕನ ಮರಣ ಪ್ರಮಾಣ ಪತ್ರ
*ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ ಆಥವಾ ಪತ್ನಿ ಎಂದು ದೃಢೀಕರಿಸಲುಕಂದಾಯ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ
*ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
ಅರ್ಜಿದಾರರ ಇತ್ತೀಚಿನ ಒಂದು ಭಾವಚಿತ್ರ
*ಮಂಡಳಿಯು ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ ಅಥವಾ ಪತ್ನಿ ಪಿಂಚಣಿ ಕೋರಿ ಸಲ್ಲಿಕೆ
* ಬಳಿಕ ಅರ್ಜಿಯನ್ನು ಪರಿಶೀಲಿಸಿದ ನಂತರ, ಅರ್ಜಿದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿ ಆದೇಶದ ಜೊತೆಗೆ ವಿದ್ಯುನ್ಮಾನಿಕೃತ ವಿಶಿಷ್ಷ ಪಿಂಚಣಿ ಗುರುತಿನ ಚೀಟಿ ಮತ್ತು ಸಂಖ್ಯೆ ಪಡೆಯಬೇಕಾಗುತ್ತದೆ.
ಈ ಯೋಜನೆಯಡಿ ನಾವು ಪಿಂಚಣಿ ಪಡೆಯವ ಅವಕಾಶಗಳು, ಸೌಲಭ್ಯ ನೋಡುವುದಾದರೆ
ಕುಟುಂಬ ಪಿಂಚಣಿಯು ಈ ಹಿಂದೆ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಪಡೆಯುತ್ತಿದ್ದ ಪಿಂಚಣಿಯ ಅರ್ಧದಷ್ಟು ಮೊತ್ತ ಮೀರಿರುವುದಿಲ್ಲ, ಮತ್ತು ಕುಟುಂಬ ಪಿಂಚಣಿಯು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಒಂದು ವೇಳೆ ಮೃತ ಪಿಂಚಣಿದಾರ ಕುಟುಂಬಸ್ಥರು
ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನೆ ವೇಳೆ ಅರ್ಜಿ ಅನರ್ಹವೆಂದು ಕಂಡು ಬಂದರೆ, ಮಂಡಳಿ ಅರ್ಜಿ ತಿರಸ್ಕರಿಸುವ ಮೊದಲು, ಅ ಕುಟಂಬಸ್ಥರಿಗೆ ಪೂರ್ಣ ಮಾಹಿತಿ ಒದಗಿಸಲು ಕಾಲಾವಕಾಶ ನೀಡಬೇಕಾಗುತ್ತದೆ.
ಕುಟುಂಬ ಪಿಂಚಣಿದಾರ ಮರಣ ಹೊಂದಿದಾಗ, ಅವರ ಕಾನೂನುಬದ್ದ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಕುಟುಂಬ ಪಿಂಚಣಿದಾರರ ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ಸಲ್ಲಿಸುವುದು ಬ್ಯಾಂಕ್ ಖಾತೆಯನ್ನು ಮುಚ್ಚಲು ಮಂಡಳಿಗೆ ತಿಳಿಸಬೇಕು.
ಕುಟುಂಬ ಪಿಂಚಣಿದಾರರು ಮಂಜೂರಾತಿ ಪ್ರಾಧಿಕಾರಕ್ಕೆ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ನಮೂನೆ XII –A (living certificate form XII –A) ಕುಟುಂಬ ಪಿಂಚಣಿ ಖಾತೆ ಹೊಂದಿರುವ ಬ್ಯಾಂಕ್ ಮ್ಯಾನೇಜರ್ / ಕಂದಾಯ ಇಲಾಖೆ ಅಧಿಕಾರಿಯವರಿಂದ ಸಲ್ಲಿಸುಬೇಕು.
ಕುಟುಂಬ ಪಿಂಚಣಿಯ ಮಂಜೂರಾತಿ ಪ್ರಾಧಿಕಾರವು ಪಿಂಚಣಿದಾರರ ದಾಖಲೆಗಳನ್ನು ನಮೂನೆ XIII ರಲ್ಲಿ ನಿರ್ವಹಿಸಬೇಕಾಗುತ್ತದೆ.
ಉದ್ದೇಶ ಸ್ಪಷ್ಟ ತುತ್ತು ಅನ್ನಕ್ಕಾಗಿ, ಗೇಣು ಬಟ್ಟೆಗಾಗಿ ನೂರಾರು ಸಾವಿರಾರು ಕಿಲೋಮೀಟರ್ ಗಳ ದೂರದಿಂದ ಮನೆಮಠ, ಸಂಬಂಧಿಕರ ಬಿಟ್ಟು ದುಡಿಯಲು ಬರುವ ಕೈಗಳಿಗೆ ಕಷ್ಟ ಕೊಟ್ಟರು ಅವು ಸಹಿಸಿಕೊಳ್ಳುತ್ತವೆ ಆದ್ರೆ ಅದೇ ಕೈಗಳಿಗೆ, ಕಷ್ಟಪಟ್ಟು ದುಡಿದರು ಕೊನೆ ಕಾಲದಲ್ಲಿ, ದುಡಿದು ದುಡಿದು ಶಕ್ತಿ ಕಳೆದುಕೊಂಡು ಸಹಾಯ ಹಸ್ತದ ನಿರೀಕ್ಷೆಯಲ್ಲಿರುವ ಕೈಗಳಿ ಕೊನೆಗಾಲದಲ್ಲಿ ಕಣೀರು ವರೆಸಿಕೊಳ್ಳುವ ಕೆಲಸ ಯಾರೂ ಸಹ ಕೊಡ ಬಾರದು, ಸಾಧ್ಯವಾದರೆ ಸಹಾಯ ಮಾಡೋಣ ಇಲ್ಲ ಸುಮ್ಮನಿದ್ದು ಬಿಡೋಣ.. ಆದ್ರೆ ಸರ್ಕಾರಗಳು ಮಾತ್ರ ಸದಾ ಇಂತಹ ದುಡಿಯುವ ಕೂಲಿ ಕಾರ್ಮಿಕ ವರ್ಗದ ಪರವಾಗಿ ನಿಲ್ಲಲಿ ಅನ್ನೋದೆ ನಮ್ಮ ಆಶಯ…
ಲಕ್ಷ್ಮೀಪತಿ, ಹಿರಿಯ ವರದಿಗಾರರು