ಬೆಂಗಳೂರು;ರಾಜ್ಯದ ವಿದ್ಯುತ್ ಗ್ರಾಹಕರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ ಗೃಹ ಜ್ಯೋತಿ ಯೋಜನೆಯಡಿ ಹಿಂಬಾಕಿ ಇದ್ದರೂ ಈ ಯೋಜನೆಯ ಪ್ರಯೋಜನ ದೊರೆಯಲಿದೆ. ಎಂಬುದಾಗಿ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ (BESCOM) ತಿಳಿಸಿದೆ. ಇಂಧನ ಇಲಾಖೆಯ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಒಂದಾಗಿ ಪಾವತಿಸುವುದು ಕಡ್ಡಾಯಗೊಳಿಸಲಾಗಿತ್ತು. ಮೂರು ತಿಂಗಳ ಕಾಲಾವಕಾಶ ಇರುವ ಕಾರಣ ಅದರೊಳಗೆ ಹಿಂಬಾಕಿ ಪಾವತಿಸಿದ್ರೇ, ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.
ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು ಮೂರು ತಿಂಗಳು ಕಾಲಾವಕಾಶ ಇದೆ ಎಂದು ಹೇಳಿದೆ.ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ.ಯೋಜನೆ ಜಾರಿಯಾದ ಬಳಿಕ ಬಿಲ್ಲಿಂಗ್ ಅವಧಿ ಪ್ರತಿಯನ್ನು ಪ್ರತಿ ತಿಂಗಳ 25 ನೇ ದಿನಾಂಕದಿಂದ ಮುಂಬರುವ ತಿಂಗಳ 25 ದಿನಾಂಕವರೆಗೆ ಕೌಂಟ್ ಮಾಡಲಾಗುತ್ತದೆ. ಈ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು ಎಂದು ಬೆಸ್ಕಾಂ ತಿಳಿಸಿದೆ.ಗೃಹ ಜ್ಯೋತಿ ಯೋಜನೆಯಡಿ ಲಾಭ ಪಡೆದುಕೊಳ್ಳಲು ಬೆಸ್ಕಾಂ https://sevasindhugs.karnataka.gov.in/ ನಲ್ಲಿ ಇಂದೇ ನೋಂದಾಯಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ತಿಳಿಸಿದೆ